ಸೋಮವಾರ, ಸೆಪ್ಟೆಂಬರ್ 28, 2020
24 °C

25 ವರ್ಷಗಳ ಹಿಂದೆ | ಮಂಗಳವಾರ, 25–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒತ್ತೆಯಾಳುಗಳ ಬದಲು ಬಂಧಿತ ಉಗ್ರಗಾಮಿಗಳ ಬಿಡುಗಡೆಗೆ ನಕಾರ

ನವದೆಹಲಿ, ಜುಲೈ 24 (ಪಿಟಿಐ)– ಕಾಶ್ಮೀರ ಕಣಿವೆಯಲ್ಲಿ ಅಲ್‌ ಫರಾನ್ ಉಗ್ರಗಾಮಿಗಳು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಐವರು ವಿದೇಶಿ ಪ್ರವಾಸಿಗರ ಬಿಡುಗಡೆಗೆ ಬದಲಾಗಿ ಯಾವುದೇ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಇಂದು ಹೇಳಿದೆ.

ವಿದೇಶಿ ಪ್ರವಾಸಿಗರನ್ನು ಉಗ್ರಗಾಮಿಗಳ ಕೈಯಿಂದ ರಕ್ಷಿಸಲು ಸರ್ವ ಪ್ರಯತ್ನ ಸಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಉಗ್ರಗಾಮಿಗಳ ಬಿಡುಗಡೆ ಮಾತ್ರ ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ಕೆ.ಪದ್ಮನಾಭಯ್ಯ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸ್‌ ಅಧಿಕಾರಿಗಳಿಗೆ ಪೇಜರ್‌

ಬೆಂಗಳೂರು, ಜುಲೈ 24– ಪೊಲೀಸ್‌ ಇಲಾಖೆಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಡಿಸಿಪಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಒಟ್ಟು 50 ಪೇಜರ್‌ ಉಪಕರಣಗಳನ್ನು ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ತಮಗೆ ಸರಿಯಾದ ಸಂದರ್ಭದಲ್ಲಿ ಸಂದೇಶಗಳು ದೊರಕಲಿಲ್ಲ ಎಂದು ಗೊಣಗುವಂತಿಲ್ಲ ಹಾಗೂ ನೆವ ಹೇಳುವಂತಿಲ್ಲ.

ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೊದಲ ಹಂತವಾಗಿ ಕೇವಲ ಹಿರಿಯ ಅಧಿಕಾರಿಗಳಿಗೆ ಈ ಉಪಕರಣವನ್ನು ನೀಡಲಾಗಿದ್ದು, ಇದರಿಂದ ಪೊಲೀಸ್‌ ಅಧಿಕಾರಿಗಳು ತಮ್ಮ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ವೈರ್‌ಲೆಸ್‌ನಂಥ ಉಪಕರಣಕ್ಕಿಂತ ಇದು ಹಗುರವಾಗಿದ್ದು, ಅಧಿಕಾರಿಗಳು ಸುಲಭವಾಗಿ ಹಿಡಿದುಕೊಂಡು ತಿರುಗಾಡಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.