ಸೋಮವಾರ, ಸೆಪ್ಟೆಂಬರ್ 28, 2020
24 °C

25 ವರ್ಷಗಳ ಹಿಂದೆ | ಶುಕ್ರವಾರ, 21–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ರಂಗದಿಂದ ಡಿಎಂಕೆ ನಿರ್ಗಮನ ಖಚಿತ

ನವದೆಹಲಿ, ಜುಲೈ 20 (ಪಿಟಿಐ, ಯುಎನ್‌ಐ)– ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಂಗವನ್ನು ಬಲಪಡಿಸುವ ಪ್ರಯತ್ನ ಮುಂದುವರಿಯುತ್ತಿರುವ ಮಧ್ಯೆ, ರಂಗದಿಂದ ಡಿಎಂಕೆ ಹೊರಬರುವುದು ಬಹುತೇಕ ಖಚಿತವಾದಂತಾಗಿದೆ. ಇದೇ ವೇಳೆ, ಡಿಎಂಕೆಯ ಕಟ್ಟಾ ವಿರೋಧಿಯಾಗಿರುವ ಎಐಎಡಿಎಂಕೆ ಮತ್ತು ಮುಲಾಯಂ ಸಿಂಗ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷವು ರಾಷ್ಟ್ರೀಯ ರಂಗದ ಜತೆ ನಂಟು ಬೆಳೆಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಇಂದು ಇಲ್ಲಿ ನಡೆದ ರಾಷ್ಟ್ರೀಯ ರಂಗದ ಅಧ್ಯಕ್ಷೀಯ ಮಂಡಳಿ ಸಭೆಯನ್ನು ರಂಗದ ಘಟಕ ಪಕ್ಷವಾಗಿರುವ ಡಿಎಂಕೆ ಬಹಿಷ್ಕರಿಸುವುದು ಪ್ರಮುಖ ಬೆಳವಣಿಗೆಯಾಗಿದೆ. ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಪುನರ್‌ರಚನೆ

ಮೈಸೂರು, ಜುಲೈ 20– ಕರ್ನಾಟಕ ಪ್ರದೇಶ ಕಾಂಗೈ ಅಧ್ಯಕ್ಷರ ಬದಲಾವಣೆ ಇನ್ನು ಒಂದೆರಡು ದಿನಗಳಲ್ಲಿ ಆಗುವ ಸಾಧ್ಯತೆ ಇದೆ. ಎಐಸಿಸಿಯ ಜಂಟಿ ಕಾರ್ಯದರ್ಶಿ ಮತ್ತು ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲೆಂದು ಬಂದಿರುವ ಜಿತೇಂದ್ರ ಸಿಂಗ್‌ಈ ಬಗ್ಗೆ ಸೂಚನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.