ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 5–12–1994

Last Updated 4 ಡಿಸೆಂಬರ್ 2019, 20:16 IST
ಅಕ್ಷರ ಗಾತ್ರ

ಗೂಢಚರ್ಯೆ: ತನಿಖೆ ಆರಂಭ

ನವದೆಹಲಿ, ಡಿ. 4 (ಯುಎನ್‌ಐ)– ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ್ದುದು ನಿಜ ಎಂದು ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದಾರೆ ಎಂದು ‍ಪೊಲೀಸ್ ಮೂಲಗಳು ತಿಳಿಸಿವೆ.

ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವದ ರಹಸ್ಯಗಳನ್ನು ವಿದೇಶಗಳಿಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿರುವ ಗೂಢಚರ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಇಂದು ಆರಂಭಿಸಿದೆ.

ವೀರಪ್ಪನ್‌ನಿಂದ ಪೊಲೀಸ್ ಅಧಿಕಾರಿ ಅಪಹರಣ

ಕೊಯಮತ್ತೂರು, ಡಿ. 4 (ಪಿಟಿಐ)– ತಮಿಳುನಾಡಿನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಅವರ ಮೂವರು ಸಂಬಂಧಿಗಳನ್ನು ಕುಖ್ಯಾತ ನರಹಂತಕ, ದಂತಚೋರ ವೀರಪ್ಪನ್, ಮೆಟ್ಟುಪಾಳ್ಯಂ ಅರಣ್ಯ ವಲಯದ ಸಿರುಮುಗೈನಿಂದ ನಿನ್ನೆ ಅಪಹರಿಸಿದ್ದಾನೆ. ಭ್ರಷ್ಟಾಚಾರ ತಡೆ ದಳದ ಡಿಎಸ್‌ಪಿ ಚಿದಂಬರನಾಥ್, ಅವರ ಭಾವ ಶೇಖರ್‌ರಾಜ್ ಮತ್ತು ಸಹೋದರ ಅಪಹರಣಕ್ಕೆ ಒಳಗಾದವರಾಗಿದ್ದಾರೆ.

ಮುಖ್ಯಕಾರ್ಯದರ್ಶಿಯಾಗಿ ಮುದ್ದಪ್ಪ

ಬೆಂಗಳೂರು, ಡಿ. 4– ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ಮುದ್ದಪ್ಪ ಅವರನ್ನು ರಾಜ್ಯ ಮುಖ್ಯಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದೆ.

ಕೃಷ್ಣಾ ಪ್ರಾಧಿಕಾರಕ್ಕೆ ಅಂಗೀಕಾರ

‌ಬೆಂಗಳೂರು, ಡಿ. 4– ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ನೀರಾವರಿ ಯೋಜನೆಗಳನ್ನು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ತರಲು ಅನುಕೂಲವಾಗುವ ಕೃಷ್ಣಾ ಕಣಿವೆ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ರಾಷ್ಟ್ರಪತಿ ಡಾ. ಶಂಕರ್‌ದಯಾಳ್ ಶರ್ಮಾ ಅವರು ಅಂಗೀಕಾರ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT