ಮಂಗಳವಾರ, 6–5–1969

ಭಾನುವಾರ, ಮೇ 26, 2019
33 °C

ಮಂಗಳವಾರ, 6–5–1969

Published:
Updated:

ಡಾ. ಜಾಕಿರ್ ಹುಸೇನ್ ಮರಳಿ ಮಣ್ಣಿಗೆ
ನವದೆಹಲಿ, ಮೇ 5– ಯಮುನಾನದಿಯ ದಂಡೆಯಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಆವರಣದಲ್ಲಿ, ಕುರಾನಿನ ಪಠಣವಾಗುತ್ತಿದ್ದಂತೆಯೇ ಸಕಲ ಸೇನಾಗೌರವದೊಡನೆ ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಜಾಕಿರ್‌ ಹುಸೇನ್ ಅವರ ಅಂತ್ಯಕ್ರಿಯೆಯು ಇಂದು ಇಲ್ಲಿ ನಡೆಯಿತು.

ಡಾ. ಜಾಕಿರ್ ಹುಸೇನರ ಪಾರ್ಥಿವ ಶರೀರವನ್ನು ಗೋರಿಯಲ್ಲಿ ಇಳಿಸುತ್ತಿದ್ದಂತೆಯೇ ಮೃತರ ಗೌರವಾರ್ಥ 31 ತೋಪುಗಳನ್ನು ಹಾರಿಸಿ ಗೌರವ ಸೂಚಿಸಲಾಯಿತು.

ರಾಷ್ಟ್ರೀಯ ಚಳವಳಿಯ ಉಚ್ಚ ಆದರ್ಶಗಳಿಂದ ಪ್ರೇರಿತರಾಗಿ ಸುಮಾರು 45 ವರ್ಷಗಳ ಹಿಂದೆ ಡಾ. ಜಾಕಿರ್ ಹುಸೇನರು ಕಟ್ಟಿ ಬಹು ಮಮತೆಯಿಂದ ಪೋಷಿಸಿ ಬೆಳೆಸಿಕೊಂಡು ಬಂದ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದಲ್ಲಿನ ಸುಂದರ ಪುಷ್ಪಗಳಿಂದ ಕಂಗೊಳಿಸುವ ಮನಮೋಹಕ ಪ್ರಶಾಂತ ಸ್ಥಳದಲ್ಲಿ ದಿವಂಗತ ರಾಷ್ಟ್ರಪತಿ ಅವರ ಸಮಾಧಿ ನಡೆದುದು ಅತಿ ಸೂಕ್ತವೆನಿಸಿದೆ.

ಹಿಂದೂ–ಮುಸ್ಲಿಂ ಮೈತ್ರಿ
ನವದೆಹಲಿ, ಮೇ 5– ದಿವಂಗತ ರಾಷ್ಟ್ರಪತಿ ಜಾಕಿರ್ ಹುಸೇನ್‌ ಅವರನ್ನು ಇಂದು ರಾತ್ರಿ ಗೋರಿ ಮಾಡಿದ ಸ್ಥಳವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾಕ್ಕೆ ಸೇರಿದಂತಿರುವ ನಾಲ್ಕು ಎಕರೆ ಪ್ರದೇಶವನ್ನು ನೀಡಿದವರು ನಾಲ್ಕು ಜನ ಹಿಂದುಗಳು.

‘ಈ ಪ್ರದೇಶವು ಜಂಟಿಯಾಗಿ ನಾಲ್ಕು ಜನ ಹಿಂದು ಉದ್ದಿಮೆದಾರರ ಸಂಸ್ಥೆಯೊಂದಕ್ಕೆ ಸೇರಿದ್ದಿತು. ಡಾ. ಹುಸೇನ್ ಅವರ ನಿಧನದ ನಂತರ ಈ ಜಾಗವನ್ನು ಬಿಟ್ಟುಕೊಡುವಂತೆ ಕೇಳಲಾಯಿತು. ಅವರು ಈ ಜಮೀನನ್ನು ದಾನವನ್ನಾಗಿ ಕೊಡಲು ಒಪ್ಪಿದರು’‍ ಎಂದು ಜಾಮಿಯಾ ಮಿಲಿಯಾದ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !