ನಿಮ್ಮ ಮಿತ್ರರ ಅಂಗಡಿಗೆ ನೋಟ್ ಪುಸ್ತಕಗಳ ಮಾರಾಟ ಮಾಡಲು ಪ್ರಯತ್ನಿಸುತ್ತೀರಿ ಎಂದುಕೊಳ್ಳಿ. ಆದರೆ ಅವರು ನಿಮಗೆ ಸಾಗಾಣಿಕೆಗಾಗಿ ಹೆಚ್ಚುವರಿ 50% ಸುಂಕ ವಿಧಿಸುತ್ತಾರೆಂದು ಕಲ್ಪಿಸಿಕೊಳ್ಳಿ. ಈಗ ಅಮೆರಿಕದ ಉತ್ಪನ್ನಗಳ ವಿಚಾರದಲ್ಲಿ ಭಾರತ ಎದುರಿಸುತ್ತಿರುವುದು ಇದೇ ಪರಿಸ್ಥಿತಿ. ಈಗ, ಹಲವಾರು ತಿಂಗಳುಗಳ ನಿರಂತರ ಮಾತುಕತೆಗಳ ಬಳಿಕ, ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿಯವರು ಕೊನೆಗೂ ಸುಂಕವನ್ನು 50%ದಿಂದ ಕೇವಲ 18%ಗೆ ಇಳಿಸುವ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದು ಮೇಲ್ನೋಟಕ್ಕೆ ಬಹಳ ಉತ್ತಮ ಒಪ್ಪಂದದಂತೆ ಕಾಣುತ್ತದಲ್ಲವೇ? ವಾಸ್ತವವಾಗಿ ಈ ಒಪ್ಪಂದ ಏನು ಎನ್ನುವುದನ್ನು ಸ್ವಲ್ಪ ಆಳಕ್ಕಿಳಿದು ಗಮನಿಸೋಣ.

ಈ ಒಪ್ಪಂದದ ಉದ್ದೇಶವೇನು?

ಪ್ರತಿ ಸಲವೂ ಒಂದು ಭಾರತೀಯ ಕಂಪನಿ ಅಮೆರಿಕಗೆ ಇಲೆಕ್ಟ್ರಾನಿಕ್ಸ್, ಬಟ್ಟೆಗಳು, ಔಷಧಗಳು, ಅಥವಾ ಹರಳುಗಳನ್ನು ರಫ್ತು ಮಾಡುವಾಗ, ಅದು 'ಟ್ಯಾರಿಫ್' ಎನ್ನುವ ಹೆಚ್ಚುವರಿ ಸುಂಕವನ್ನು ಪಾವತಿಸಬೇಕಾಗಿತ್ತು. ಇತ್ತೀಚೆಗೆ ಈ ಟ್ಯಾರಿಫ್ ಎಷ್ಟರಮಟ್ಟಿಗೆ ಹೆಚ್ಚಾಗಿತ್ತು ಎಂದರೆ, ಅಮೆರಿಕನ್ ಗ್ರಾಹಕರಿಗೆ ಇನ್ನು ಭಾರತೀಯ ಉತ್ಪನ್ನಗಳನ್ನು ಖರೀದಿಸುವುದೇ ಬೇಡ ಎನ್ನುವಂತಾಗಿತ್ತು. ಅಂದರೆ, ನೀವು 10 ರೂಪಾಯಿಗೆ ಮಾರಾಟ ಮಾಡುವ ನೋಟ್ ಪುಸ್ತಕ ಈಗ ಹೆಚ್ಚುವರಿ ತೆರಿಗೆಯ ಕಾರಣದಿಂದ 15 ರೂಪಾಯಿಯಾಗುತ್ತದೆ ಎಂದು ಬೇರೊಬ್ಬರು ಹೇಳಿದಂತಾಗುತ್ತಿತ್ತು. ಈ ಬೆಲೆಗೆ ಆ ನೋಟ್ ಪುಸ್ತಕ ಯಾರಿಗೂ ಬೇಕು ಎನಿಸುವುದಿಲ್ಲ! ಆದ್ದರಿಂದ, ಮೋದಿ ಮತ್ತು ಟ್ರಂಪ್ ಈ ಕುರಿತು ಬಹುತೇಕ ಒಂದು ವರ್ಷ ಕಾಲ ಸಮಾಲೋಚನೆ ನಡೆಸಿ, ಈಗ ಕೊನೆಗೂ ತೆರಿಗೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಇದರಿಂದ ನಮಗೇನು ಪರಿಣಾಮ?

ಭಾರತ ಪ್ರತಿವರ್ಷವೂ ಅಮೆರಿಕಗೆ 80 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಈ ಉತ್ಪನ್ನಗಳೇನಾದರೂ ಕಡಿಮೆ ಬೆಲೆಗೆ ಲಭಿಸಿದರೆ, ಹೆಚ್ಚು ಅಮೆರಿಕನ್ನರು ಭಾರತೀಯ ಉತ್ಪನ್ನಗಳನ್ನು ಖರೀದಿಸಲು ಮುಂದೆ ಬರಬಹುದು. ಇದರಿಂದ ನಮ್ಮ ಕಂಪನಿಗಳಿಗೆ ಹೆಚ್ಚು ಆದಾಯ ಲಭಿಸಿ, ಹೆಚ್ಚು ಉದ್ಯೋಗ ಸೃಷ್ಟಿಯಾಗಿ, ಭಾರತವೂ ಹೆಚ್ಚು ಶ್ರೀಮಂತವಾಗಬಲ್ಲದು. ಈ ಒಪ್ಪಂದಕ್ಕೆ ಒಪ್ಪಿಗೆ ಲಭಿಸಿದ ಬೆನ್ನಲ್ಲೇ ಸೆನ್ಸೆಕ್ಸ್ 2,000 ಅಂಕಗಳ ಏರಿಕೆ ಕಂಡಿದ್ದು, ಒಪ್ಪಂದದ ಮೇಲೆ ಮಾರುಕಟ್ಟೆ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಒಪ್ಪಂದದಲ್ಲೂ ಒಂದು ತಿರುವು

ಈ ಒಪ್ಪಂದ ಸಂಕೀರ್ಣವಾಗಿ ತೋರುವ ಅಂಶವೂ ಇದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವೂ ಹೌದು. ಈ ಒಪ್ಪಂದಕ್ಕೆ ಪ್ರತಿಯಾಗಿ, ಭಾರತ ಮೂರು ಭರವಸೆಗಳನ್ನು ನೀಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮೊದಲನೆಯದಾಗಿ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ, ಅಮೆರಿಕದಿಂದ ಹೆಚ್ಚಿನ ತೈಲ ಖರೀದಿಸಲಿದೆ. ಎರಡನೆಯದಾಗಿ, ಭಾರತ ಅಮೆರಿಕನ್ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸಲಿದೆ. ಮೂರನೆಯದಾಗಿ, ಭಾರತ ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲಿದೆ.

ತೈಲ ಸಮಸ್ಯೆ - ನೈಜ ಕಥನ

ನಾವು ಮೊದಲಿಗೆ ತೈಲದ ವಿಚಾರವನ್ನು ಗಮನಿಸೋಣ. ರಷ್ಯಾ ಸದ್ಯದ ಮಟ್ಟಿಗೆ ಭಾರತದ ಬಹುದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಹೇಗೆ ನಿಮ್ಮ ಮನೆಗೆ ಯಾರೋ ಓರ್ವ ಹೆಚ್ಚಿನ ತರಕಾರಿಗಳನ್ನು ಪೂರೈಸುತ್ತಾನೋ, ಹಾಗೇ ರಷ್ಯಾ ಭಾರತಕ್ಕೆ ತೈಲ ಒದಗಿಸುತ್ತಿದೆ. ಈಗ ರಷ್ಯಾ ಭೌಗೋಳಿಕ ರಾಜಕಾರಣದ ಉದ್ವಿಗ್ನತೆಗಳಿಂದಾಗಿ ಅತ್ಯಧಿಕ ಅಂತಾರಾಷ್ಟ್ರೀಯ ನಿರ್ಬಂಧಗಳಿಗೆ ಸಿಲುಕಿದೆ. ಈ ನಿರ್ಬಂಧಗಳು ಈಗಾಗಲೇ ರಷ್ಯಾಗೆ ತನ್ನ ತೈಲಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಮಾಡುವುದನ್ನು ಕಷ್ಟಕರವಾಗಿಸಿದೆ. ಆದರೆ, ಭಾರತ ರಷ್ಯಾದಿಂದ ತೈಲ ಖರೀದಿ ನಡೆಸುತ್ತಾ ಬಂದಿದ್ದು, ಅದು ಆರ್ಥಿಕವಾಗಿ ಉಳಿದುಕೊಳ್ಳಲು ನೆರವಾಗಿದೆ. ಆದರೆ ಈಗ ಭಾರತ ಇದ್ದಕ್ಕಿದ್ದಂತೆ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ ಏನಾಗಬಹುದು?

ರಷ್ಯಾ ಬಳಿ ಅಗಾಧ ಪ್ರಮಾಣದ ಹೆಚ್ಚುವರಿ ತೈಲ ಉಳಿಯಲಿದ್ದು, ಅದನ್ನು ಯಾರೂ ಖರೀದಿಸುವವರೇ ಇಲ್ಲದಂತಾಗುತ್ತದೆ. ಓರ್ವ ತರಕಾರಿ ವ್ಯಾಪಾರಿ ನಾಲ್ವರು ಗ್ರಾಹಕರಿಗೆ ನೂರು ಬಾಸ್ಕೆಟ್ಗಳಷ್ಟು ಟೊಮ್ಯಾಟೊ ಮಾರಾಟ ಮಾಡುತ್ತಾನೆ ಎಂದುಕೊಳ್ಳಿ. ಇದ್ದಕ್ಕಿದ್ದಂತೆ ಅವರ ಪೈಕಿ ಓರ್ವ ಗ್ರಾಹಕ ಬರುವುದನ್ನು ನಿಲ್ಲಿಸುತ್ತಾನೆ. ಈಗ, ವ್ಯಾಪಾರಿಯ ಬಳಿ ಪ್ರತಿದಿನವೂ 25 ಬಾಸ್ಕೆಟ್ ಹೆಚ್ಚುವರಿ ಟೊಮ್ಯಾಟೊ ಉಳಿಯುತ್ತದೆ. ತರಕಾರಿಗಳನ್ನು ತಕ್ಷಣವೇ ಮಾರಾಟ ಮಾಡದಿದ್ದರೆ, ಅವು ಕೊಳೆತು ಹೋಗುತ್ತವೆ. ಆಗ ವ್ಯಾಪಾರಿ ಏನು ಮಾಡುತ್ತಾನೆ? ಅವನು ವ್ಯರ್ಥವಾಗುವುದು ಮತ್ತು ನಷ್ಟವಾಗುವುದನ್ನು ತಪ್ಪಿಸಲು ಟೊಮ್ಯಾಟೊ ದಾಸ್ತಾನನ್ನು ಕಡಿಮೆಗೊಳಿಸುತ್ತಾನೆ.

ರಷ್ಯಾ ಈಗ ತೈಲದ ವಿಚಾರದಲ್ಲೂ ಇಂತಹದ್ದೇ ಕ್ರಮ ಕೈಗೊಳ್ಳಬಹುದು. ನಿರ್ಬಂಧಗಳ ಕಾರಣದಿಂದ ಈಗಾಗಲೇ ಕಡಿಮೆ ಗ್ರಾಹಕರಿದ್ದು, ಪ್ರಮುಖ ಗ್ರಾಹಕನಾದ ಭಾರತವೂ ಖರೀದಿ ನಿಲ್ಲಿಸಿದರೆ, ಆಗ ರಷ್ಯಾ ಅನಿಯಮಿತ ತೈಲವನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ. ಆದ್ದರಿಂದ ರಷ್ಯಾ ತೈಲ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಜಾಗತಿಕವಾಗಿ ತೈಲ ಉತ್ಪಾದನೆ ಕಡಿಮೆಯಾದಾಗ, ಜಾಗತಿಕ ಮಾರುಕಟ್ಟೆಗಳಲ್ಲಿ ತೈಲದ ಲಭ್ಯತೆಯೂ ಕಡಿಮೆಯಾಗುತ್ತದೆ. ಇದೊಂದು ಮುಖ್ಯ ಹಂತ: ಪೂರೈಕೆ ಕಡಿಮೆಯಾಗಿದೆ ಎಂದಾಗ, ಬೆಲೆಯೂ ಹೆಚ್ಚಳವಾಗುತ್ತದೆ! ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ಪೂರೈಕೆ ಕಡಿಮೆಯಾಗುವುದಕ್ಕೆ ಇದನ್ನು ಹೋಲಿಸಿ ನೋಡಿ. ಆಗ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆಯೂ ಗಗನಕ್ಕೇರುತ್ತದೆ.

ತೈಲ ಬೆಲೆ ಹೆಚ್ಚಳವಾದಾಗ, ಪೆಟ್ರೋಲಿನಿಂದ ದಿನಸಿ, ಔಷಧಗಳ ತನಕ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಹೆಚ್ಚಿಸುತ್ತವೆ, ಟ್ರಕ್ಗಳು ಸಾಗಾಣಿಕಾ ದರ ಹೆಚ್ಚಿಸುತ್ತವೆ, ಕಾರ್ಖಾನೆಗಳು ಉತ್ಪನ್ನಗಳ ದರ ಹೆಚ್ಚಿಸುತ್ತವೆ. ತೈಲ ಬೆಲೆ ಹೆಚ್ಚಳವಾದಾಗ, ಎಲ್ಲೆಡೆಯೂ ಹಣದುಬ್ಬರ ಏರಿಕೆಯಾಗುತ್ತದೆ. ಕುಟುಂಬಗಳು ಆಹಾರ ಖರೀದಿಸಲೂ ಕಷ್ಟಪಡುವಂತಾಗುತ್ತದೆ. ಭಾರತದಂತಹ ಒಂದು ದೇಶ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದರೆ, ಅದೊಂದು ಜಾಗತಿಕ ಸಮಸ್ಯೆಯನ್ನು ಸೃಷ್ಟಿಸಿ, ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲ ದೇಶಗಳ ಜನರೂ ಸಂಕಷ್ಟಕ್ಕೆ ಒಳಗಾಗುವಂತೆ ಮಾಡುತ್ತದೆ!

ಅಮೆರಿಕನ್ ಉತ್ಪನ್ನಗಳ ಸಮಸ್ಯೆ

ಭಾರತ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿರುವ ಎರಡನೇ ಭರವಸೆಯೂ ಗೊಂದಲಮಯವಾಗಿದೆ. ಭಾರತ ಈಗ ವಾರ್ಷಿಕವಾಗಿ 41 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಉತ್ಪನ್ನಗಳನ್ನು ಖರೀದಿಸುತ್ತಿದೆ. ಆದರೆ, ಟ್ರಂಪ್ ಭಾರತ ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಬಯಸುತ್ತಿದ್ದಾರೆ. ಇದು ಒಂದು ರೀತಿ ತಿಂಗಳಿಗೆ ಒಂದು ಐಸ್ ಕ್ರೀಂ ಖರೀದಿಸುವವರ ಬಳಿ ಇದ್ದಕ್ಕಿದ್ದಂತೆ 50 ಐಸ್ ಕ್ರೀಂಗಳನ್ನು ಖರೀದಿಸಿ ಎಂದು ಆಗ್ರಹಿಸಿದಂತಾಗುತ್ತದೆ. ಇಂತಹ ಖರೀದಿ ನಡೆಸಲು ಸಾಧ್ಯವೇ? ಹಾಗಾದಾಗ ನಮ್ಮ ಸ್ಥಳೀಯ ರೈತರು ಮತ್ತು ಉದ್ಯಮಗಳ ಪರಿಸ್ಥಿತಿ ಏನು? ಒಂದು ವೇಳೆ ಅಮೆರಿಕದ ಕಡಿಮೆ ಬೆಲೆಯ ಉತ್ಪನ್ನಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ನಮ್ಮ ಉತ್ಪಾದಕರು ಉಳಿಯಲು ಸಾಧ್ಯವೇ?

ಅಂಕಿ ಸಂಖ್ಯೆಗಳ ಆಘಾತಕಾರಿ ವಾಸ್ತವ

ಈ ಬೇಡಿಕೆಯನ್ನು ಇನ್ನಷ್ಟು ಅವಾಸ್ತವಿಕ ಎನಿಸುವ ಅಂಶಗಳಿವೆ. ಸಂಪೂರ್ಣ ಜಗತ್ತಿನಿಂದ ಭಾರತ ನಡೆಸುವ ಒಟ್ಟು ಆಮದುಗಳು ವಾರ್ಷಿಕವಾಗಿ ಬಹುತೇಕ 900 ಬಿಲಿಯನ್ ಡಾಲರ್ ಆಗುತ್ತದೆ. ಈಗ ಟ್ರಂಪ್ ಕೇವಲ ಅಮೆರಿಕ ಒಂದರೊಡನೆಯೇ 500 ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈಗ ಭಾರತದ ಆಮದುಗಳು ಚೀನಾ, ಯುರೋಪ್, ಮಧ್ಯ ಪೂರ್ವ, ಆಗ್ನೇಯ ಏಷ್ಯಾ ಮತ್ತು ಇತರ ದೇಶಗಳಿಂದ ಬರುತ್ತಿವೆ. ಆದರೆ, ಭಾರತ ನಡೆಸುವ ಒಟ್ಟಾರೆ ಆಮದಿನ ಅರ್ಧಕ್ಕಿಂತಲೂ ಹೆಚ್ಚು ಅಮೆರಿಕದಿಂದ ನಡೆಸಬೇಕು ಎನ್ನುವುದು ಟ್ರಂಪ್ ಬೇಡಿಕೆ. ಇದು ಕೇವಲ ಒಂದು ವ್ಯಾಪಾರ ಒಪ್ಪಂದವಲ್ಲ. ಬದಲಿಗೆ, ಭಾರತ ನಡೆಸುವ ಖರೀದಿ ವ್ಯವಹಾರದ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಲು ಕೋರುವಂತಾಗಿದೆ. ಇದು ಒಂದು ರೀತಿಯಲ್ಲಿ ಬೇರೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಲಭ್ಯವಿದ್ದರೂ, ನಿಮ್ಮ ಕುಟುಂಬದವರ ಬಳಿ ಅವರಿಗೆ ಬೇಕಾದ ಎಲ್ಲ ವಸ್ತುಗಳನ್ನೂ ಒಂದೇ ಅಂಗಡಿಯಿಂದ ಖರೀದಿಸಬೇಕು ಎಂದು ನೀವು ಆಗ್ರಹಿಸಿದಂತಾಗುತ್ತದೆ. ಈಗ ಟ್ರಂಪ್ ಬೇಡಿಕೆಯೂ ಇಂತಹ ಅಸಹಜ, ಅಸಮಂಜಸ ಬೇಡಿಕೆಯಂತೆಯೇ ಭಾಸವಾಗುತ್ತದೆ.

ಭಾರತ ಸರ್ಕಾರದ ಅಭಿಪ್ರಾಯವೇನು?

ಇಲ್ಲೊಂದು ವಿಚಿತ್ರ ಅಂಶವಿದೆ: ನಮ್ಮ ಸರ್ಕಾರವಂತೂ ಭಾರತ ಅಮೆರಿಕಗೆ ಎಂತಹ ಭರವಸೆಗಳನ್ನು ನೀಡಿದೆ ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ನಮ್ಮ ವಾಣಿಜ್ಯ ಸಚಿವರು ಈ ಕುರಿತು ಹೇಳಿಕೆ ನೀಡಿದ್ದು, "ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನಾವು ಎಲ್ಲರಿಗೂ ವಿವರಿಸುತ್ತೇವೆ" ಎಂದಿದ್ದಾರೆ. ಇದು ಒಂದು ರೀತಿ ನಿಮ್ಮ ಪೋಷಕರು "ನಾವು ಏನೋ ಒಂದು ಹೊಸ ವಸ್ತುವನ್ನು ತಂದಿದ್ದೇವೆ. ಆದರೆ ಅದೇನು ಎಂದು ಮುಂದಿನ ವಾರದ ತನಕ ನಿಮಗೆ ಹೇಳುವುದಿಲ್ಲ" ಎಂದಂತಾಗುತ್ತದೆ. ಇದು ನಿಜಕ್ಕೂ ಅಸ್ಪಷ್ಟವಾಗಿ ತೋರುತ್ತದಲ್ಲವೇ?

ಎರಡು ಬದಿ, ಎರಡು ಕಥೆಗಳು

ಉದ್ಯಮ ಗುಂಪುಗಳು ಪ್ರಸ್ತುತ ಒಪ್ಪಂದವನ್ನು ಸಂಭ್ರಮಿಸಿದ್ದು, ಕಡಿಮೆ ಬೆಲೆಯ ಭಾರತೀಯ ರಫ್ತು ವೆಚ್ಚ ಕಡಿಮೆಯಾಗುವುದರಿಂದ, 'ಮೇಕ್ ಇನ್ ಇಂಡಿಯಾ' ಯೋಜನೆಗೆ ಹೆಚ್ಚಿನ ಒತ್ತು ಲಭಿಸಲಿದೆ. ಆದರೆ, ವಿರೋಧ ಪಕ್ಷಗಳ ನಾಯಕರಂತೂ ಪ್ರಧಾನಿ ಮೋದಿಯವರು ಅಮೆರಿಕದ ಒತ್ತಡಕ್ಕೆ ಸಿಲುಕಿ ರಾಜಿ ಮಾಡಿಕೊಂಡಿದ್ದಾರೆ, ಇದರಿಂದ ಕೇವಲ ಸುಂಕ ವಿನಾಯಿತಿ ಪಡೆಯುವ ಸಲುವಾಗಿ ಭಾರತೀಯ ರೈತರು ಮತ್ತು ಸಣ್ಣ ಉದ್ಯಮಗಳ ಹಿತವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಸ್ತವ ಸತ್ಯವೇನು?

ನಮಗೆ ಖಚಿತವಾಗಿ ತಿಳಿದಿರುವ ವಿಚಾರಗಳು: ಭಾರತದ ರಫ್ತಿನ ಮೇಲೆ ಸುಂಕ ಕಡಿಮೆಯಾಗಿರುವುದು ಈಗ ಲಭಿಸಿರುವ ಒಳ್ಳೆಯ ಸುದ್ದಿ. ಆದರೆ ನಮಗೆ ತಿಳಿದಿರದ ಒಂದು ವಿಚಾರವೂ ಇದೆ: ಭಾರತ ಸುಂಕ ವಿನಾಯಿತಿಗೆ ಪ್ರತಿಯಾಗಿ ಅಮೆರಿಕಕ್ಕೆ ನೀಡಿರುವುದೇನು? ನಾವು ನಿಜಕ್ಕೂ ರಷ್ಯನ್ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಭರವಸೆ ನೀಡಿದ್ದೇವೆಯೇ? ನಾವು ಅಮೆರಿಕನ್ ಉತ್ಪನ್ನಗಳಿಂದ ಭಾರತದ ಮಾರುಕಟ್ಟೆಯನ್ನು ತುಂಬಿಸುತ್ತೇವೆಯೇ? ಇದರಿಂದ ನಮ್ಮ ರೈತರ ಹಿತಕ್ಕೆ ಧಕ್ಕೆಯಾಗುತ್ತದೆಯೇ?

ಲೇಖಕರ ಅಭಿಪ್ರಾಯ

ಪ್ರತಿಯೊಂದು ವ್ಯಾಪಾರ ಒಪ್ಪಂದವೂ ಒಂದು ಆಟದಂತಿದ್ದು, ಒಂದು ಬದಿ ಸಾಮಾನ್ಯವಾಗಿ ಇನ್ನೊಂದಕ್ಕಿಂತ ಹೆಚ್ಚಿನ ಲಾಭ ಹೊಂದುತ್ತದೆ. ಅದು ಎಂದಿಗೂ ನಿಜಕ್ಕೂ 50:50 ಆಗಿರುವುದಿಲ್ಲ. ಆದರೆ, ನೈಜ ಪ್ರಶ್ನೆ ಎಂದರೆ: ಭಾರತ ನಿಜಕ್ಕೂ ಗೆದ್ದಿದೆಯೇ ಅಥವಾ ಸೋತಿದೆಯೇ? ಸದ್ಯದ ಮಟ್ಟಿಗೆ ನಮಗೆ ಸಂಪೂರ್ಣ ಮಾಹಿತಿಗಳಿಲ್ಲದೆ ಇದಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ. ಇಂದಿನ ಮಟ್ಟಿಗೆ ಒಳ್ಳೆಯ ಸುದ್ದಿಯಾಗಿರುವುದರ ಹಿಂದೆ, ನಾಳೆ ಒಂದಷ್ಟು ಬಚ್ಚಿಟ್ಟ ಬೆಲೆಯನ್ನೂ ತೆರಬೇಕಾದೀತು.

ಈಗ ನಿಜಕ್ಕೂ ಮುಖ್ಯವಾದ ವಿಚಾರವೆಂದರೆ, ನಮ್ಮ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸರ್ಕಾರ ಅಮೆರಿಕಗೆ ಏನು ಭರವಸೆ ನೀಡಿದೆ ಎನ್ನುವುದನ್ನು ಜನರಿಗೆ ತಿಳಿಸಲೇಬೇಕು. ಇನ್ನು ಮುಂದೆ ಎಂತಹ ಬದಲಾವಣೆಗಳಾಗಲಿವೆ ಎನ್ನುವುದರ ಮಾಹಿತಿಯನ್ನೂ ಒದಗಿಸಬೇಕು. ಪ್ರಜಾಪ್ರಭುತ್ವ ಎಂದರೆ, ಜನರಿಗೆ ತಮ್ಮ ನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯುವ ಹಕ್ಕೂ ಹೌದು.

ಈ ಒಪ್ಪಂದ ಸದ್ಯಕ್ಕೆ ಕೇವಲ ಒಳಿತು - ಅಥವಾ ಕೆಡುಕು ಎಂದು ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಬಳಿ ಈಗ ಪೂರ್ಣ ಚಿತ್ರಣವೂ ಲಭ್ಯವಿಲ್ಲ. ಅದುವೇ ಈಗ ನೈಜ ಸಮಸ್ಯೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.