1932ರ ಬಳಿಕ ದೇಶದಲ್ಲಿ ಜಾತಿವಾರು ಜನಗಣತಿ ನಡೆದಿಲ್ಲ. ವಿವಿಧ ಧರ್ಮ, ಜಾತಿ, ಉಪ ಜಾತಿಗಳ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ನಿಖರವಾದ ಅಂಕಿಅಂಶಗಳೇ ಇಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ನಿಗದಿ ಮಾಡಲು ಪೂರಕವಾಗಿ ಜನಸಂಖ್ಯೆಯ ಖಚಿತ ವರದಿಗಳಿಲ್ಲ. ಅಂತಹ ವರದಿಯೊಂದನ್ನು ಪಡೆಯುವ ಸದುದ್ದೇಶದಿಂದಲೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ.

ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಯಿತು. ಆದರೆ, ಅಂಕಿಅಂಶಗಳ ವಿಶ್ಲೇಷಣೆ ತಡವಾದ ಕಾರಣ ಆಯೋಗ ವರದಿ ಸಲ್ಲಿಸಲಿಲ್ಲ. ರಾಜಕೀಯ ದುರುದ್ದೇಶದಿಂದ ವರದಿ ಸ್ವೀಕರಿಸಲಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಪ್ರಕರಣವನ್ನು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜತೆ ಹೋಲಿಸುವುದು ಸರಿಯಲ್ಲ. ಈ ವರದಿ ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ದಾರಿದೀಪವಾಗಲಿದೆ. ರಾಜ್ಯದ ಜಾತಿ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವ ನೂರಾರು ಜಾತಿ, ಉಪ ಜಾತಿಗಳನ್ನು ಗುರುತಿಸುವುದು ಸಾಧ್ಯವಾಗಲಿದೆ. ವರದಿ ಈಗ ರಾಜ್ಯ ಸರ್ಕಾರದ ಬಳಿಯೇ ಇದೆ. ತಕ್ಷಣವೇ ಅದನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಮತ್ತು ರಾಜ್ಯದ ಪ್ರತಿ ಕುಟುಂಬದ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ಅಧಿಕೃತವಾಗಿ ಪ್ರಕಟಿಸಬೇಕು.

(ಲೇಖಕ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆಗಳ ಮಾಜಿ ಸಚಿವ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.