ಕರ್ನಾಟಕ ತಂಡ ಚೊಚ್ಚಿಲ ರಣಜಿ ಟ್ರೋಫಿ ಗೆದ್ದ ಸಂಭ್ರಮ ಹಾಗೂ ಟೆಸ್ಟ್ ಪಂದ್ಯವೊಂದಕ್ಕೆ ಮೊದಲ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದ ಸಿಹಿ ನೆನಪಿನ ಸಂಭ್ರಮ, ಎರಡು ಮಹತ್ವದ ವಿದ್ಯಮಾನಗಳು ದಾಖಲಾದುದು 1974ರಲ್ಲಿ. ಆ ಯುಗಳ ಸಂಭ್ರಮದ ಚಿನ್ನದ ಹಬ್ಬಕ್ಕೆ ಕಳೆದ ವರ್ಷವಷ್ಟೇ ಸಾಕ್ಷಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣ, ಹಲವಾರು ಆಟಗಾರರ ಮನಸ್ಸಿನಲ್ಲಿ ಅವಿಸ್ಮರಣೀಯ ನೆನಪುಗಳನ್ನು ದಾಖಲಿಸಿದೆ. ಅದೇ ರೀತಿ, ಕ್ರಿಕೆಟ್ ಅಭಿಮಾನಿಗಳ ಮನಗಳಲ್ಲಿಯೂ ಅಚ್ಚಳಿಯದ ಸ್ಮರಣೆಗಳಿವೆ. ಈ ಚೆಂದದ ಕ್ರೀಡಾಂಗಣದ ಸುತ್ತ ಕರ್ನಾಟಕದ ಕ್ರಿಕೆಟ್ ಸಂಸ್ಕೃತಿಯೂ ಬೆಳೆದು ನಿಂತಿದೆ.

ದೇಶದ ಬೇರಾವುದೋ ಕ್ರೀಡಾಂಗಣದಲ್ಲಿ ಕೊನೆಕ್ಷಣದಲ್ಲಿ ಸಮಸ್ಯೆಗಳುಂಟಾಗಿ ಪಂದ್ಯಗಳನ್ನು ಸ್ಥಳಾಂತರಿಸುವ ಸವಾಲು ಎದುರಾದಾಗಲೆಲ್ಲ ‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ’ಯ (ಬಿಸಿಸಿಐ) ಮೊದಲ ಆಯ್ಕೆ ಚಿನ್ನಸ್ವಾಮಿ ಕ್ರೀಡಾಂಗಣವೇ ಆಗಿರುತ್ತಿತ್ತು. ಮಳೆ ಬಂದು ನಿಂತ 45 ನಿಮಿಷದಲ್ಲಿಯೇ ಮತ್ತೆ ಪಂದ್ಯಕ್ಕೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವ ಇಲ್ಲಿನ ‘ಸಬ್ ಏರ್ ಸಿಸ್ಟಮ್’ ತಂತ್ರಜ್ಞಾನ ದೇಶ, ವಿದೇಶಗಳ ಕ್ರಿಕೆಟ್ ಆಡಳಿತಗಾರರನ್ನು ಸೆಳೆದಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿ ಯಾವುದೇ ಪಂದ್ಯ ಇರಲಿ; ಗಮನಾರ್ಹ ಸಂಖ್ಯೆಯಲ್ಲಿ ಪ್ರೇಕ್ಷಕರ ಕಲರವ ಇದ್ದೇ ಇರುತ್ತಿತ್ತು ಎಂಬುದು ವಿಶೇಷ. ಟೆಸ್ಟ್, ಐಪಿಎಲ್ ಅಥವಾ ಸೀಮಿತ ಓವರ್ಗಳ ಪಂದ್ಯಗಳಷ್ಟೇ ಅಲ್ಲ, ಮಹಿಳೆಯರ ಕ್ರಿಕೆಟ್ ಪಂದ್ಯಗಳಿಗೂ ಇಲ್ಲಿಯ ಅಭಿಮಾನಿಗಳ ಹಾಜರಿ ಗಮನ ಸೆಳೆಯುತ್ತದೆ. ಹೋದ ಸಲ ‘ಮಹಿಳಾ ಪ್ರೀಮಿಯರ್ ಲೀಗ್’ (ಡಬ್ಲ್ಯುಪಿಎಲ್) ಟೂರ್ನಿಯ ಪ್ರತಿ ಪಂದ್ಯಕ್ಕೂ ಸರಾಸರಿ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು.

ಎಲ್ಲವೂ ಸರಿಹೋದರೆ, ಮುಂದಿನ ತಿಂಗಳು ಆರಂಭವಾಗಲಿರುವ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆಯೂ ಸೇರಿದಂತೆ ಕೆಲವು ಪ್ರಮುಖ ಪಂದ್ಯಗಳನ್ನು ನಡೆಸುವ ಅವಕಾಶ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ದೊರೆಯಲಿದೆ. ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಯ ಪಂದ್ಯಗಳನ್ನು ಕೊಲಂಬೊ ಸೇರಿದಂತೆ ಐದು ನಗರಗಳಲ್ಲಿ (ಬೆಂಗಳೂರು, ಇಂದೋರ್, ಗುವಾಹಟಿ, ವಿಶಾಖಪಟ್ಟಣ) ಆಯೋಜಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಬಿಟ್ಟರೆ ಭಾರತದ ಉಳಿದ ನಗರಗಳು ಎರಡನೇ ಹಂತದ ತಾಣಗಳಾಗಿವೆ. ದೇಶದಲ್ಲಿರುವ ಬೇರೆ ಯಾವುದೇ ಮಹಾನಗರಕ್ಕೂ ಆಯೋಜನೆ ಅವಕಾಶ ಸಿಕ್ಕಿಲ್ಲ. ಇದು ಕ್ರಿಕೆಟ್ ವಿಷಯದಲ್ಲಿ ಬೆಂಗಳೂರಿನ ಮಹತ್ವವನ್ನು ತೋರಿಸುತ್ತದೆ.

ಅನಿರೀಕ್ಷಿತ ಘಟನೆಯಿಂದಾಗಿ, ವಿಶ್ವಕಪ್ ಪಂದ್ಯಗಳು ಬೇರೆಡೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಕಾರಣ, ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ. ಆ ದುರ್ಘಟನೆಯಲ್ಲಿ 11 ಅಭಿಮಾನಿಗಳು ಅಸುನೀಗಿದ್ದರು. ರಾಜ್ಯ ಸರ್ಕಾರ, ಆರ್ಸಿಬಿ, ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಹಾಗೂ ಭದ್ರತಾ ಲೋಪಗಳಿಂದಾಗಿ ಈ ದುರ್ಘಟನೆ ನಡೆಯಿತು ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಯಿತು. ಆದರೆ, ರಾಜ್ಯ ಸರ್ಕಾರ ನಿಯೋಜಿಸಿದ ತನಿಖಾ ಸಮಿತಿಯು ಇತ್ತೀಚೆಗೆ ವರದಿ ಸಲ್ಲಿಸಿದೆ. ಅದರಲ್ಲಿ, ದೊಡ್ಡ ಕಾರ್ಯಕ್ರಮ ಆಯೋಜನೆಗೆ ಯಾವ ಸಿದ್ಧತೆಗಳು ಇರಬೇಕು ಎಂಬ ಬಗ್ಗೆ ಶಿಫಾರಸು ಮಾಡಿದೆ.

ಕ್ರೀಡಾಂಗಣದಲ್ಲಿ ಅಗ್ನಿಶಾಮಕ ಇಲಾಖೆಯ ನಿಯಮಾವಳಿಯ ಪ್ರಕಾರ ವ್ಯವಸ್ಥೆಗಳಿಲ್ಲವೆಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸ ಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಪೊಲೀಸ್ ಇಲಾಖೆಯು ಇಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ನೀಡುತ್ತಿಲ್ಲ. ಅದಕ್ಕಾಗಿಯೇ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದೀಗ ಮಹಿಳಾ ವಿಶ್ವಕಪ್ ಪಂದ್ಯಗಳೂ ಕೇರಳದ ತಿರುವನಂತಪುರ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಜನರಿಲ್ಲದೇ ಪಂದ್ಯಗಳನ್ನು ನಡೆಸಲಾಗುವುದು ಎಂದು ಕೆಎಸ್ಸಿಎ ಮಾಡಿದ ಮನವಿಗೂ ಸರ್ಕಾರ ಅನುಮತಿ ನೀಡಿಲ್ಲ. ಇದೀಗ ಮೈಸೂರಿನಲ್ಲಿಯೂ ಜನರಿಲ್ಲದ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿವೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಅಭಿಮಾನಿಗಳನ್ನು ದೂರವಿಟ್ಟು ಪಂದ್ಯಗಳನ್ನು ಆಯೋಜಿಸುವ ಪರಿಸ್ಥಿತಿ ಬಂದಿದ್ದು (ಕೋವಿಡ್ ಕಾಲಘಟ್ಟ ಹೊರತುಪಡಿಸಿ) ಇದೇ ಮೊದಲು.

ಕ್ರಿಕೆಟ್ ಅಷ್ಟೇ ಅಲ್ಲ; ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳು ನಡೆದಾಗಲೂ ಇಂತಹದೇ ಅಭಿಮಾನದ ಹೊಳೆ ಹರಿಯುತ್ತದೆ. ಇತ್ತೀಚೆಗೆ ಒಲಿಂಪಿಯನ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರ ಕ್ಲಾಸಿಕ್ ಚಾಂಪಿಯನ್ಷಿಪ್ಗೂ 14ರಿಂದ 16 ಸಾವಿರ ಜನರು ಸೇರಿದ್ದರು. ಇದು ಬೆಂಗಳೂರಿನವರ ಕ್ರೀಡಾಪ್ರೇಮಕ್ಕೆ ಸಾಕ್ಷಿ. ಕನ್ನಡಿಗರ ಕ್ರೀಡಾಪ್ರೇಮವನ್ನು ತನ್ನತ್ತ ಸಂಪೂರ್ಣವಾಗಿ ಸೆಳೆದು ಕೊಳ್ಳುವಲ್ಲಿ ‘ಆರ್ಸಿಬಿ’ ಯಶಸ್ವಿಯಾಯಿತು. ಸತತ 17 ವರ್ಷಗಳವರೆಗೆ ಐಪಿಎಲ್ನಲ್ಲಿ ಒಂದೂ ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತ ಹೋಗಿರುವುದು ತಂಡದ ಚಾಣಾಕ್ಷತೆಗೆ ಹಿಡಿದಿರುವ ಕನ್ನಡಿ. ಕರ್ನಾಟಕದ ಕ್ರಿಕೆಟ್ ಎಂದರೆ ಆರ್ಸಿಬಿ ಎನ್ನುವ ಮಟ್ಟಿಗೆ ಅದರ ಬ್ರ್ಯಾಂಡ್ ಬೆಳೆಸಿಕೊಂಡಿದೆ; ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲು ಗಳನ್ನಾಗಿ ಮಾಡಿಕೊಂಡಿದೆ.

ತಂಡದಲ್ಲಿ ಕನ್ನಡಿಗರು ಇಲ್ಲದಿರುವ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ‘ಬಿಡ್ ಪ್ರಕ್ರಿಯೆಯ ಡೈನಾಮಿಕ್ಸ್’ ಎಂದ ಆರ್ಸಿಬಿಯು– ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜರಿಗೆ ಒಂದಿಷ್ಟು ಕನ್ನಡ ಪದಗಳನ್ನು ಕಲಿಸಿತು. ಹೋದ ವರ್ಷ ನಾಯಕ ರಜತ್ ಪಾಟೀದಾರ್ ಅವರು ‘ಅಭಿಮಾನಿ ದೇವರುಗಳು’ ಎಂದು ಹೇಳುವ ಮೂಲಕ ಕನ್ನಡಿಗರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದರು. ಭಾರತ ತಂಡದ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗವೂ ಆರ್ಸಿಬಿಯ ಶಕ್ತಿ ವೃದ್ಧಿಸಿತು. ವಿದೇಶಗಳಲ್ಲಿಯೂ ಆರ್ಸಿಬಿ ಫ್ಯಾನ್ ಕ್ಲಬ್ಗಳು ತಲೆ ಎತ್ತಿದವು.

ಯುವಪೀಳಿಗೆಯಲ್ಲಿ ಆರ್ಸಿಬಿಯ ಕ್ರೇಜ್ ಮೇರೆ ಮೀರಿತು. ರಣಜಿ, ದುಲೀಪ್ ಟ್ರೋಫಿ ಮತ್ತಿತರ ಟೂರ್ನಿಗಳ ಪಂದ್ಯಗಳು ಇಲ್ಲಿ ನಡೆದಾಗಲೂ ಸೇರುತ್ತಿದ್ದ ಯುವ ಅಭಿಮಾನಿಗಳು ‘ಆರ್ಸಿಬಿ... ಆರ್ಸಿಬಿ...’ ಎಂದೇ ಕೂಗುತ್ತ ದಿನಗಳೆಯುತ್ತಿದ್ದರು. ಆ ದೇಶಿ ಪಂದ್ಯಗಳಲ್ಲಿ ಆಡುವ ತಂಡಗಳಲ್ಲಿ ಆರ್ಸಿಬಿಯ ಆಟಗಾರರು ಇದ್ದರಂತೂ ಅಭಿಮಾನಿಗಳ ಸಂಭ್ರಮ ಹೇಳತೀರದು ಎಂಬ ಮಟ್ಟಿಗೆ ಇತ್ತು. ಅದರಲ್ಲೂ 2016ರಲ್ಲಿ ಆರ್ಸಿಬಿಯು ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರಿನ ಫೈನಲ್ನಲ್ಲಿ ಸೋತಿತು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಸೋಲಿಗೆ ಟೀಕಿಸಿದವರಿಗಿಂತ ಮರುಕ ಪಟ್ಟವರೇ ಹೆಚ್ಚು. ಅಭಿಮಾನಿಗಳ ಈ ನಾಡಿಮಿಡಿತವನ್ನು ಸರಿಯಾಗಿ ಅರಿತುಕೊಂಡ ಆರ್ಸಿಬಿ ತನ್ನ ಬ್ರ್ಯಾಂಡ್ ವೃದ್ಧಿಗೆ ಹೆಚ್ಚು ಒತ್ತುಕೊಟ್ಟಿತು.

ಐಪಿಎಲ್ ತಂಡಗಳ ನಡುವಣ ವೈರತ್ವದ ಅಂಶಗಳನ್ನು ಮುನ್ನೆಲೆಗೆ ತರುವ ಕಾರ್ಯ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪೈಪೋಟಿಯು ತಾರಕ ಕ್ಕೇರಿತು. ಮುಂಬೈ ಇಂಡಿಯನ್ಸ್ ಎದುರಿಗಿನ ಪಂದ್ಯಗಳಿಗೂ ಮೆಲ್ಲಗೆ ಕಾವೇರಿತು. ಈ ಅಂಶಗಳನ್ನೂ ಆರ್ಸಿಬಿ ತನ್ನ ಅಭಿಮಾನಿ ವಲಯವನ್ನು ಬೆಳೆಸಿಕೊಳ್ಳಲು ಬಳಸಿಕೊಂಡಿತು. ಆರ್ಸಿಬಿ ಅಭಿಮಾನವೆಂಬುದು ಕ್ರಿಕೆಟ್ಪ್ರಿಯರ ‘ಜೀವನಶೈಲಿ’ ಎಂಬಷ್ಟರ ಮಟ್ಟಿಗೆ ಹಾಸುಹೊಕ್ಕಾಯಿತು.

ಅದಕ್ಕೆ ತಕ್ಕಂತೆ ಆರ್ಸಿಬಿಯು ‘ಇನ್ನೊವೆಟಿವ್ ಲ್ಯಾಬ್’, ‘ಅನ್ಬಾಕ್ಸ್ ಇವೆಂಟ್’ಗಳ ಮೂಲಕ ಶ್ರೀಮಂತವಾಯಿತು. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ ವನ್ನು ತನ್ನ ವೆಬ್ಸೈಟ್ಗಳಿಗೆ ಸೀಮಿತ ಮಾಡಿಕೊಂಡಿತು. ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ‘ಸೋಲ್ಡ್ ಔಟ್’ ಆಗಿರುತ್ತಿದ್ದವು. ಇದರಿಂದಾಗಿ ಪಂದ್ಯಗಳನ್ನು ನೋಡಲು ಪೈಪೋಟಿ ಹೆಚ್ಚಿತು. ಹಂತಹಂತವಾಗಿ ಅಭಿಮಾನವು ಅಂಧಾಭಿಮಾನವಾಗಿ ರೂಪುಗೊಂಡಿದ್ದು ಗೊತ್ತಾಗಲೇ ಇಲ್ಲ. ಇದನ್ನು ಮನಃಶಾಸ್ತ್ರಜ್ಞರು ‘ಹರ್ಡ್ (ಹಿಂಡು) ಮನೋಭಾವ’ ಎನ್ನುತ್ತಾರೆ. ಇದರ ಒಟ್ಟು ಪರಿಣಾಮ ಕಂಡುಬಂದಿದ್ದು ಆರ್ಸಿಬಿಯು ಜೂನ್ 3ರಂದು ಅಹಮದಾಬಾದಿನಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಾಗಲೇ. ಅದರ ಮರುದಿನ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದ ಸಂದರ್ಭದಲ್ಲಿ ಅಭಿಮಾನಿಗಳೇ ಜೀವ ಕಳೆದುಕೊಂಡರು. ಆರ್ಸಿಬಿ, ಕೆಎಸ್ಸಿಎ ಮತ್ತು ಸರ್ಕಾರ ಒಂದಿಷ್ಟು ಪರಿಹಾರ ಘೋಷಣೆ ಮಾಡಿದವು. ಘಟನೆಯಲ್ಲಿ ಅಸುನೀಗಿದವರ ಕುಟುಂಬಗಳು ಈ ಪರಿಹಾರದ ಹಣವನ್ನು ತಿರಸ್ಕರಿಸಿದ ಘಟನೆಗಳೂ ನಡೆದವು.

ಸರ್ಕಾರ, ಆರ್ಸಿಬಿ, ಕ್ರಿಕೆಟ್ ಸಂಸ್ಥೆಗಳು ಒಬ್ಬರ ತಪ್ಪು ಇನ್ನೊಬ್ಬರ ಮೇಲೆ ಹಾಕುವ ಕೆಸರೆರಚಾಟ ಈಗಲೂ ನಡೆಯುತ್ತಿದೆ. ಇದೆಲ್ಲದರ ನಡುವೆ ಅಭಿಮಾನಿಗಳ ಜೀವ ಅಗ್ಗವಾದುದು ದುರದೃಷ್ಟಕರ. ಕರ್ನಾಟಕದ ಕ್ರಿಕೆಟ್ ಕೀರ್ತಿ ನೆಲಕಚ್ಚಿದ್ದೂ ಸುಳ್ಳಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಯುವ ಹೃದಯಗಳನ್ನು ಅಂಧಾಭಿಮಾನಿಗಳನ್ನಾಗಿ ರೂಪಿಸುವ ಮಾರುಕಟ್ಟೆ ತಂತ್ರ ಕುರಿತ ಅಧ್ಯಯನ, ಜಾಗೃತಿ ಮತ್ತು ಕಡಿವಾಣ ಹಾಕುವ ಚಿಂತನೆ ನಡೆದಿಲ್ಲ. ‘ಅಭಿಮಾನಿಗಳೇ ಸರ್ವಸ್ವ’ ಎನ್ನುವ ತಾರೆಗಳೆಲ್ಲರೂ
ಮುಗುಮ್ಮಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.