‘ಮೈಸೂರು ಸ್ಯಾಂಡಲ್ ಸೋಪು ಕೊಂಡುಕೊಳ್ಳಿ ಮೇಡಂ, ಸ್ನಾನ ಮಾಡಿದರೆ ಕೊಳೆ ಹೋಗುತ್ತೆ, ಕಳೆ ಮೂಡುತ್ತೆ...’ ಸೋಪು ಕೊಟ್ಟ ಅಂಗಡಿಯವನು, ‘ತಮನ್ನಾ ರಾಯಭಾರಿ ಆದಮೇಲೆ ನಮ್ಮ ಸ್ಯಾಂಡಲ್ ಸೋಪಿನ ಸ್ಕೋಪ್ ಹೆಚ್ಚಾಗಿದೆ’ ಅಂದ.

‘ತಮನ್ನಾ ನಿತ್ಯ ಮೈಸೂರ್ ಸ್ಯಾಂಡಲ್ನಲ್ಲೇ ಸ್ನಾನ ಮಾಡ್ತಾರಾ?’ ಶಂಕ್ರಿ ಕೇಳಿದ.

‘ಮಿಲ್ಕಿ ಬ್ಯೂಟಿ ಸೋಪಿನಲ್ಲಿ ಸ್ನಾನ ಮಾಡ್ತಾರೊ ಹಾಲಿನಲ್ಲಿ ಮಾಡ್ತಾರೊ ನನಗೆ ಗೊತ್ತಿಲ್ಲ, ಬೇರೆಯವರ ಬಾತ್ರೂಂ ಇಣುಕಿ ನೋಡಬಾರದು ಸಾರ್’.

‘ಸೋಪಿನ ಸುಂದರಿಯರು ಬಾತ್ರೂಮಿ ಗಿಂತ ಟಿ.ವಿಯಲ್ಲೇ ಹೆಚ್ಚು ಸ್ನಾನ ಮಾಡ್ತಾರೆ. ಪ್ರತಿದಿನ ಹತ್ತಾರು ಸೋಪು ಸುಂದರಿಯರು ನಮ್ಮ ಮನೆಯ ಟಿ.ವಿ.ಯಲ್ಲಿ ಸ್ನಾನ ಮಾಡ್ತಾರೆ’ ಎಂದು ಶಂಕ್ರಿ ಕಿಸಕ್ಕನೆ ನಕ್ಕಾಗ ಸುಮಿ ರೇಗಿದಳು.

‘ದುಬಾರಿ ದುಡ್ಡು ಕೊಟ್ಟು ತಮನ್ನಾರನ್ನು ಕೆಎಸ್ಡಿಎಲ್ ರಾಯಭಾರಿ ಮಾಡುವ ಅಗತ್ಯವಿರಲಿಲ್ಲ, ನಮ್ಮಲ್ಲೇ ಬಹಳಷ್ಟು ಸುಂದರಿಯರಿದ್ದರು ಎಂದು ಹಲವರು ಆಕ್ಷೇಪ ಮಾಡಿದ್ದಾರೆ ಕಣ್ರೀ’ ಅಂದಳು ಸುಮಿ.

‘ಇಂತಹ ವಿವಾದಗಳ ನಂತರ ನಮ್ಮ ಮೈಸೂರು ಸೋಪಿನ ಶ್ರೀಗಂಧದ ಘಮಲು ಇಂಡಿಯಾ ದಾಟಿ ಜಾಗತಿಕ ಮಾರುಕಟ್ಟೆವರೆಗೂ ಹರಡಿದೆಯಂತೆ, ವಿದೇಶಿಯರೂ ಗಂಧದ ಪರಿಮಳಕ್ಕೆ ಫಿದಾ ಆಗಿದ್ದಾರಂತೆ’ ಅಂಗಡಿಯವ ಕೊಚ್ಚಿಕೊಂಡ.

‘ವಿವಾದಗಳು ಲಾಭದಾಯಕವೇ ಆಗುತ್ತವೆ. ಆಪರೇಷನ್ ಸಿಂಧೂರ ಸಂಘರ್ಷದ ನಂತರ ನಮ್ಮ ಮೈಸೂರುಪಾಕ್ಗೂ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆಯಂತೆ’ ಎಂದಳು ಸುಮಿ.

‘ಹೌದು, ಕೆಲವು ಕಡೆ ಮೈಸೂರುಪಾಕ್ ಅನ್ನು ‘ಮೈಸೂರುಶ್ರೀ’ ಅಂತ ಹೆಸರು ಬದಲಾಯಿಸಿಕೊಂಡು ಚಪ್ಪರಿಸುತ್ತಿದ್ದಾರಂತೆ. ಹೇಗೋ ಮೈಸೂರು ಸೋಪು, ಮೈಸೂರುಪಾಕು ಪ್ರಸಿದ್ಧಿಯಾಗುತ್ತಿವೆಯಲ್ಲ’ ಎಂದು ಅಂಗಡಿಯವನು ಆನಂದಪಟ್ಟ.

ಮೈಸೂರು ಸ್ಯಾಂಡಲ್ ಸೋಪು ಖರೀದಿಸಿದ ಶಂಕ್ರಿ, ಸುಮಿ ಮೈಸೂರುಪಾಕ್ ಕೊಳ್ಳಲು ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.