ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊರೊನಾ ಕೃಪೆ

Last Updated 11 ಆಗಸ್ಟ್ 2020, 20:45 IST
ಅಕ್ಷರ ಗಾತ್ರ

ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ಮನೆಗಳಲ್ಲಿ ಏನೇನು ಅರೇಂಜ್‍ಮೆಂಟ್ಸ್ ಮಾಡಿಕೊಂಡಿದ್ದಾರೆ ಎಂದು ತಿಳಿಯಲು ಸ್ಕೂಲ್ ಟೀಚರ್ ಇನ್‌ಸ್ಪೆಕ್ಷನ್‍ಗೆ ಬಂದರು.

‘ಮಗಳಿಗೆ ಸೆಪರೇಟ್ ರೂಮಿನ ವ್ಯವಸ್ಥೆ ಮಾಡಿದ್ದೀವಿ. ಕಂಪ್ಯೂಟರ್, ಲ್ಯಾಪ್‍ಟಾಪ್ ಕೊಡಿಸಿದ್ದೀವಿ, ಮೊಬೈಲ್ ಯೂಸ್ ಮಾಡಿಕೊಳ್ಳಬಹುದು...’ ಶಂಕ್ರಿ ವ್ಯವಸ್ಥೆ ತೋರಿಸಿ ವಿವರಿಸಿದ.

‘ಸದ್ಯಕ್ಕಂತೂ ಸ್ಕೂಲ್ ಓಪನ್ ಆಗೋದಿಲ್ಲ. ಆನ್‍ಲೈನ್‍ನಲ್ಲೇ ಹೈಟೆಕ್ ಎಜುಕೇಷನ್ ಕೊಡ್ತೀವಿ’ ಅಂದರು ಟೀಚರ್.

‘ಕೊರೊನಾ ಕೃಪೆಯಿಂದ ಈ ವರ್ಷ ಮಗಳಿಗೆ ಯೂನಿಫಾರಂ, ಲಂಚ್‍ಬಾಕ್ಸ್, ಸ್ಕೂಲ್ ಬಸ್, ಶೂ-ಸಾಕ್ಸ್ ಖರ್ಚು ಇಲ್ಲ. ಸ್ಕೂಲ್ ಬಿಲ್ಡಿಂಗ್ ಫಂಡ್ ಇಲ್ಲ, ಸ್ಟೂಡೆಂಟ್‍ಗೆ ಪುಸ್ತಕದ ಹೊರೆ, ಪೇರೆಂಟ್ಸ್‌ಗೆ ದುಡ್ಡಿನ ಹೊರೆ ಕಮ್ಮಿಯಾಗಿದೆ’ ಶಂಕ್ರಿಗೆ ಸಮಾಧಾನ.

‘ಯಾಕೆ ನಿಮ್ಮ ಮಗಳ ಕಾಲಿಗೆ ಗಾಯವಾಗಿದೆ?’ ಟೀಚರ್‌ಗೆ ಕಳವಳ.

‘ಅಕ್ಕಪಕ್ಕದ ಮನೆ ಮಕ್ಕಳ ಜೊತೆ ರಸ್ತೆಯಲ್ಲಿ ಆಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾಳೆ’ ಸುಮಿ ಹೇಳಿದಳು.

‘ಕೊರೊನಾ ಟೈಮಿನಲ್ಲಿ ಮಗು ಹೊರ ಹೋದರೆ ವೈರಸ್ ಅಟ್ಯಾಕ್ ಆಗಬಹುದು, ಇನ್‌ಡೋರ್ ಗೇಮ್ ಆಡಿಸಿ. ಮುಂದಿನ ವಾರದಿಂದ ಸ್ಕೂಲಿನಿಂದ ಆನ್‍ಲೈನ್ ಗೇಮ್ಸ್ ಇಂಟ್ರೊಡ್ಯೂಸ್‌ ಮಾಡ್ತೀವಿ. ಇಂಡಿಪೆಂಡೆನ್ಸ್‌ ಡೇಗೆ ಕಲ್ಚರಲ್ ಆ್ಯಕ್ಟಿವಿಟೀಸ್ ಕಾಂಪಿಟೇಷನ್ ಮಾಡ್ತಿದ್ದೀವಿ. ನಿಮ್ಮ ಮಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನದೊ, ಒನಕೆ ಓಬವ್ವನದೊ ವೇಷ ಹಾಕಿಸಿ, ಪರ್‍ಫಾರ್ಮೆನ್ಸ್ ವಿಡಿಯೊ ವಾಟ್ಸ್‌ಆ್ಯಪ್ ಮಾಡಿ’ ಟೀಚರ್ ಸಲಹೆ ಕೊಟ್ಟರು.

‘ಹೇಗೋ ನಮ್ಮ ಮಗಳ ಎಜುಕೇಷನ್ ಇಂಪ್ರೂವ್‌ ಮಾಡಿ, ಮುಂದೆ ಇವಳನ್ನು ಮೆಡಿಕಲ್ ಓದಿಸಬೇಕು’ ಸುಮಿಯ ಆಸೆ.

‘ಮಕ್ಕಳ ಆನ್‍ಲೈನ್ ಎಜುಕೇಷನ್‍ನಲ್ಲಿ ಪೇರೆಂಟ್ಸ್ ನಾಲೆಡ್ಜ್ ಕೂಡಾ ಮುಖ್ಯವಾಗುತ್ತದೆ. ಪೇರೆಂಟ್ಸ್‌ಗೂ ನಾಲೆಡ್ಜ್ ಟೆಸ್ಟ್ ನಡೆಸಲು ಸ್ಕೂಲ್ ಕಮಿಟಿ ಚಿಂತನೆ ನಡೆಸಿದೆ. ನೀವೂ ನಾಲೆಡ್ಜ್ ಬೆಳೆಸಿಕೊಳ್ಳಬೇಕು...’ ಎಂದು ಹೇಳಿ ಟೀಚರ್ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT