‘ನಿಮ್ಮ ಮನೇಲಿ ಹಳೇ ಪೇಪರ್ರು, ಹಳೆ ಕಬ್ಬಿಣ, ಹಳೆ ಪಾತ್ರೆ, ಸ್ಕ್ರ್ಯಾಪು ಇದ್ದರೆ ಬೈ–ಬ್ಯಾಕ್ ಸ್ಕೀಮಿನಲ್ಲಿ ಒಳ್ಳೆ ರೇಟಿದ್ದಾಗ ಮಾರಿಬುಡಿ ಸಾ’ ತುರೇಮಣೆಗೆ ಅಡ್ವೈಸು ಕೊಟ್ಟೆ.

‘ಬೊಡ್ಡಿಹೈದ್ನೆ ನೀನು ಹೇಳ್ತಿರದು ಮನೇಲಿರ ಹಳೆ ಸಾಮಾನು ಬಗ್ಗೆನೋ, ಇಲ್ಲ ರಾಜಕೀಯದ ಸ್ಕ್ರ್ಯಾಪುಗಳ ಬಗ್ಗೆನೋ?’ ನನಗೇ ವಾಪಸ್ ಪ್ರಶ್ನೆ ಹಾಕಿದರು. ನಾನು ಅರೀದ ಮುಕ್ಕನ ಥರ ಕೂಕಂದೆ.

‘ಬೈ–ಬ್ಯಾಕ್ ಅಂದ್ರೆ ಗೊತ್ಲಾ ನಿನಗೆ? ತನ್ನ ರಾಜಕೀಯ ವಿರೋಧೀನ ಅವನ ಬೆನ್ನ ಹಿಂದೆ ಕಂಡಾಬಟ್ಟೆ ಬಯ್ಯೋದನ್ನ ಬೈ–ಬ್ಯಾಕ್ ಅಂತರೆ. ಕಾಂಗ್ರೇಸು, ಬೀಜೆಪೀಲಿ ಅಧಿಕಾರ ಇಲ್ಲದ ಸಂಕಟಕ್ಕೆ ಬೈ-ಬ್ಯಾಕ್ ಸ್ಕ್ಯಾಮು ನಡೀತಾ ಅದೆ ಕಪ್ಪಾ’ ಅಂತ ವಿವರಿಸಿದರು.

‘ಯತ್ನಾಳಣ್ಣ–ಇಜಿಯಣ್ಣ, ರಾಮುಲಣ್ಣ–ರೆಡ್ಡಿಯಣ್ಣನ ಬೈ–ಬ್ಯಾಕ್ ಬೋದಾಟ ಯಾವ ಪ್ರಕಾರದಲ್ಲಿ ಬತ್ತದೆ?’ ಅಂತಂದೆ.

‘ಅದು ಬೋಗುಳ ಕಾಂಡದಲ್ಲಿ ಬರೋ ಮುಸುಡಿಯುದ್ಧದ ಜಗಳಗೀತೆ ಕಲಾ. ರಾಜಕಾರಣಿಗಳು ಆಗಾಗ ಇಂತೇ ಬೈ–ಬ್ಯಾಕ್ ಬೋಗುಳಗಳನ್ನ ಉದುರಿಸಿದ್ರೂ ‘ನಾನು ಹಂಗಂದೇ ಇಲ್ಲ ಕನ್ರಿ. ನನ್ನನ್ನ ಬೋದೋರಿಗೆ ಒಳ್ಳೇದಾಗಲಿ’ ಅಂತ ದಡ್ಡಸ್ತಿಕೆ ತೋರಿಸ್ತರೆ’ ಅಂದ್ರು.

‘ಸಾ... ರಾಜಕೀಯದ ಸ್ಕ್ರ್ಯಾಪು ಅಂತೇನೋ ಅಂದ್ರಿ’ ಅಂತ ವಿಷಯ ಬದಲಾಯಿಸಿದೆ.

‘ಯಾವುದೇ ಯವಸ್ಥೆಲಿ ಸ್ಕ್ರ್ಯಾಪುಗಳೇ ಜಾಸ್ತಿ ತುಂಬಿಕ್ಯಂದಾಗ ಅಭಿವೃದ್ಧಿಗೆ, ನ್ಯಾಯಕ್ಕೆ ತುಕ್ಕು ಹಿಡಿದು ಬ್ಯಾರೆ ಪಕ್ಸಕ್ಕೆ ಜಂಪುಗಾರಿಕೆ ಸುರುವಾತದೆ’ ಅಂತಂದ್ರು.

‘ಅದ್ಯಾಕೆ ಸಾ ಹಂಗೆ?’ ತುರೇಮಣೆಯನ್ನ ಕೇಳಿದೆ.

‘ಎಲ್ಲಾ ಪಕ್ಸಗಳ ರಾಜಕಾರಣಿಗಳಿಗೂ ಅಧಿಕಾರ ವ್ಯಾಧಿ ಅಮರಿಕ್ಯಂಡಿರತದೆ ಕನೋ. ಪಕ್ಸದಲ್ಲಿ ಅಧಿಕಾರ ಕೊಡದೇ ತಮ್ಮನ್ನ ತಾತ್ಸಾರ ಮಾಡ್ತಾವ್ರೆ ಅನ್ನಿಸಿದಾಗ ಬೈ–ಬ್ಯಾಕ್ ಜೊತೆಗೆ ಬಣರಾಜ್ಯೋತ್ಸವ ಸುರು ಮಾಡ್ತವೆ’ ಅಂತಂದ್ರು.

‘ಬಡಜನ ಮೈಕ್ರೊ ಫೈನಾನ್ಸ್ ಕಂಪನಿ ಬಡ್ಡಿ ಹೈಕ್ಳ ಕುಣಿಕೇಲಿ ಸಿಗಾಕ್ಕಂದು ಒಣರಾಜ್ಯೋತ್ಸವ
ಆಯ್ತಿರೋ ಶಾಪಾರಾಧನೆ ಇವುರ ಕಣ್ಣಿಗೆ ಕಾಣಕ್ಕೇ ಇಲ್ಲವೇನೋ?’ ಅಂತ ಶರಾ ಬರೆದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.