ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಎಲ್ಲವೂ ಲಭ್ಯ

ಆನಂದ
Published 6 ಏಪ್ರಿಲ್ 2024, 0:13 IST
Last Updated 6 ಏಪ್ರಿಲ್ 2024, 0:13 IST
ಅಕ್ಷರ ಗಾತ್ರ

‘ಬೆಂಗಳೂರಿನಲ್ಲಿ ಏನುಂಟು ಏನಿಲ್ಲ?’ ಮಡದಿಯ ಪ್ರಶ್ನೆ. ‘ಸದ್ಯಕ್ಕೆ ಬಿಸಿಲುಂಟು ನೀರಿಲ್ಲ’ ಎಂದೆ.

‘ಆದರೆ ಬೇರೆಲ್ಲವೂ ಲಭ್ಯ. ಫಾರ್‌ ಎಕ್ಸಾಂಪಲ್‌ ತಂಬುಳಿ’.

‘ತಂಬುಳಿ?! ಸೊ ಸಿಂಪಲ್ ಟು ಮೇಕ್. ಅನೇಕ ಮನೆಗಳಲ್ಲಿ ಮಾಡ್ತಾರೆ. ಏನು ಅತಿಶಯ?’

‘ಈಗ ಅದು ಆನ್‍ಲೈನ್‍ನಲ್ಲೂ ಲಭ್ಯರೀ’ ಎಂದಾಗ ಆಶ್ಚರ್ಯವಾಯಿತು. ಒಲೆ ಹಚ್ಚದೆ ಮಾಡಬಹುದಾದ ಈ ವಿಶಿಷ್ಟ ಆರೋಗ್ಯಕರ ಪದಾರ್ಥ ಈಗ ಮಾರ್ಕೆಟಬಲ್ ಕಮಾಡಿಟಿ!

‘ಹೌದೂರಿ, ಬೆಂಗಳೂರಿನಲ್ಲೊಬ್ಬರು 50 ಬಗೆಯ ತಂಬುಳಿಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ತಂಪು ಪೇಯದಂತೆ ಲಭ್ಯ’.

‘ಮೊನ್ನೆ ‘ಸಾಂಬಾರ್ ಬಾಕ್ಸ್’ ನೋಡಿದೆ. ಅಲ್ಲಿ 15-20 ಬಗೆಯ ತರಾವರಿ ರೆಡಿಮೇಡ್ ಸಾಂಬಾರ್ ಸಿಗುತ್ತೆ. ಮನೇಲಿ ಅನ್ನ ಮಾಡಿಕೊಂಡು ಇಲ್ಲಿಂದ ಸಾಂಬಾರ್ ಕೊಂಡೊಯ್ದರೆ ಊಟ ಆದಂತೆ’.

‘ಸಾಂಬಾರ್ ಬಾಕ್ಸ್‌ನಂತೆ ಯಾರಾದರೂ ‘ಅನ್ನ ಗೃಹ’ ಅಂತ ತೆರೆದರೆ ಮನೇಲಿ ಅನ್ನ ಮಾಡಿಕೊಳ್ಳೋದೂ ತಪ್ಪುತ್ತೆ. ಆದರೆ ಈ ಅನ್ನ ಗೃಹ ಅಥವಾ ರೈಸ್ ಬಾಕ್ಸ್ ಸಾಂಬಾರ್ ಬಾಕ್ಸ್ ಪಕ್ಕದಲ್ಲೇ ಇದ್ದರೆ ಲಾಜಿಸ್ಟಿಕ್ಸ್ ವರ್ಕ್‍ಔಟ್ ಆಗುತ್ತೆ’.

‘ಅನ್ನ ಗೃಹದಲ್ಲಿ ಹುಳಿ ಅಥವಾ ತಂಬುಳಿ ಜತೆ ಕಲಸಿಕೊಂಡು ತಿನ್ನೋದಿಕ್ಕೆ ಬರೇ ವೈಟ್ ರೈಸ್ ಅಂದರೆ ಪ್ಲೇನ್ ರೈಸ್ ಇದ್ದರೆ ಸಾಲದು. ಯೆಲ್ಲೋ ರೈಸ್ ಜತೆಗೆ...’

‘ಯಲ್ಲೊ ರೈಸ್..?’

‘ಚಿತ್ರಾನ್ನ, ಲೆಮನ್ ರೈಸ್‌, ಅದರೊಟ್ಟಿಗೆ ಜೀರಾ ರೈಸ್, ಪಲಾವ್, ಬಿರಿಯಾನಿ ಹೀಗೆ ರೈಸ್ ವೆರೈಟಿ ಮಾರಾಟಕ್ಕಿಟ್ಟರೆ ಅಡುಗೆ ಮಾಡೋದಿಕ್ಕೆ ಬೇಜಾರಾದಾಗಲೆಲ್ಲ ಇಲ್ಲಿಂದ ತರಬಹುದು’.

‘ತರೋದೆ? ತರಿಸಬಹುದು ತರೋದಲ್ಲ. ಅದೇನೋ ಸ್ವಿಗ್ಗೀನೋ ಸುಗ್ಗೀನೋ, ಜೊಮಾಟೋನೋ ಟೊಮಾಟೋನೋ ಇದೆಯಲ್ಲ ಹೋಂ ಡೆಲಿವರೀಗೆ’.

‘ನಮ್ಮ ಕಾಲದಲ್ಲಿ ಇವೇನೂ ಇರಲಿಲ್ಲ. ನಾವೇ ಬೇಯಿಸಿಕೋಬೇಕಿತ್ತು ನೋಡು’.

‘ಆರ್ಡರ್ ಮಾಡೋದಿಕ್ಕೆ ದುಡ್ಡೂ
ಇರಲಿಲ್ಲವಲ್ಲ ಆಗ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT