‘ಅನ್ಯ ವಿಷಯ ತಜ್ಞರಿಂದ ಕನ್ನಡ ಪಠ್ಯ ಬೋಧನೆ’ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಅವರ ಪ್ರಕಾರ, ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಪಠ್ಯವನ್ನು ಬೇರೆ ವಿಷಯ ತಜ್ಞರು ಬೋಧಿಸುತ್ತಿರುವುದು ವೃತ್ತಿ ಶಿಕ್ಷಣದಲ್ಲಿ ಕನ್ನಡದ ಉಳಿವಿಗೆ ಮಾರಕ.

ಇಂತಹ ಅಭಿಮತಗಳನ್ನು ಗೌರವಿಸೋಣ. ಆದರೆ ಕನ್ನಡ ಭಾಷೆಯ ಅಳಿವಿಗೂ ಉಳಿವಿಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ನಾವು ತಿಳಿಯಬೇಕು. ಈಗ ಸಾಮಾನ್ಯವಾಗಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಕನ್ನಡವನ್ನು ಬೋಧಿಸುತ್ತಿರುವವರು ಕನ್ನಡ ವಿಷಯ ತಜ್ಞರೇ ಅರ್ಥಾತ್ ಕನ್ನಡದಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಅದಕ್ಕೂ ಹೆಚ್ಚಿನ ಪದವಿಯನ್ನು ಪಡೆದಿರುವವರು. ಇವರಿಂದ ಸಲ್ಲುವ ಸೇವೆಯು ಉಳಿಯುತ್ತಿರುವ ಕನ್ನಡಕ್ಕೋ ಬೆಳೆಯುತ್ತಿರುವ ಕನ್ನಡಕ್ಕೋ ಅಥವಾ ಅಳಿಯುತ್ತಿರುವ ಕನ್ನಡಕ್ಕೋ?

ಪದವಿಗಳು ಭಾಷೆ ಮತ್ತು ಸಾಹಿತ್ಯದ ಬೋಧನೆಗೆ ನಿರ್ಣಾಯಕವಲ್ಲ. ಅವು ರಹದಾರಿಗಳು ಮಾತ್ರ. ನೈಜ ಪ್ರೀತಿ, ಆಸಕ್ತಿ, ಪರಿಶ್ರಮ, ಪರಿಣತಿ ಇದ್ದರೆ ಯಾರೂ ಇವನ್ನು ಬೋಧಿಸಬಹುದು. ದುರದೃಷ್ಟವಶಾತ್ ಈ ಪದವಿಗಳೇ ಒಬ್ಬ ವ್ಯಕ್ತಿಯನ್ನು ‘ತಜ್ಞ’ನನ್ನಾಗಿಸುತ್ತವೆ. ಒಮ್ಮೆ ತಜ್ಞನಾದರೆ ಇಂದು ಕಾಳಿದಾಸ, ಪಂಪನ ಕುರಿತೂ ನಾಳೆ ವಿವಿಧ ಸಾಹಿತಿಗಳ ಕುರಿತೂ ನಾಡಿದ್ದು ಅನುವಾದಗಳ ಕುರಿತೂ ಆಚೆ ನಾಡಿದ್ದು ಸಂವಿಧಾನ, ಕಾನೂನು, ಭಾಷಾ ಸೂತ್ರ, ಗಡಿ, ನದಿ ವಿವಾದಗಳ ಬಗ್ಗೆಯೂ ಮಾತನಾಡಬಹುದು. ನಮ್ಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ನಗರ, ಮಹಾನಗರಗಳಲ್ಲಿ ನಡೆಯುವ ರಾಷ್ಟ್ರ, ರಾಜ್ಯ ಮಟ್ಟದ ಗೋಷ್ಠಿ, ಸಂಕಿರಣಗಳೇ ಇದಕ್ಕೆ ನಿದರ್ಶನ. ಭಾಷಾತೀತವಾದ (ಕೇಂದ್ರ) ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್, ಕರ್ನಾಟಕದ ವಿವಿಧ ಅಕಾಡೆಮಿಗಳಲ್ಲಿನ ಹುದ್ದೆಗಳು, ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವ ರೀತಿಯ ಹುದ್ದೆಗಳಿಗೆ ನಮ್ಮ ಅಚ್ಚ ಕನ್ನಡ ಭಾಷಾ ತಜ್ಞರು ಬೋಧನೆಯ ಅವಧಿಯಲ್ಲೇ, ಅಂದರೆ ನಿವೃತ್ತಿಗೆ ಮುನ್ನವೇ ವಲಸೆ ಹೋಗುತ್ತಿರುವುದೇಕೆ? ಬೋಧನೆಯಲ್ಲಿ ಆಸಕ್ತಿ ಕಳೆದುಕೊಂಡು ಹೀಗೆ ಮಾಡುತ್ತಿದ್ದಾರೆಯೇ ಅಥವಾ ಅಲ್ಲಿನ ಐಹಿಕ ಸುಖಭೋಗಗಳಿಗಾಗಿಯೇ?

ಭಾಷೆ ಮತ್ತು ಸಾಹಿತ್ಯದ ಒಟ್ಟಾರೆ ಬೆಳವಣಿಗೆ ಆಗಿದ್ದರೆ ಅದು ಈ ‘ತಜ್ಞ’ರಿಗಿಂತಲೂ ಇತರರಿಂದಲೇ ಎಂದು ನಮ್ಮ ಭಾಷಾ ಮತ್ತು ಸಾಹಿತ್ಯ ಚರಿತ್ರೆ ಹೇಳುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಪದವೀಧರ ಭಾಷಾತಜ್ಞರಲ್ಲ. ವಿ.ಸೀತಾರಾಮಯ್ಯನವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿದ್ದರೂ ಅವರನ್ನು, ಆಗ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಬಿಎಂಶ್ರೀಯವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕನ್ನಡ ಉಪನ್ಯಾಸಕರನ್ನಾಗಿ ನೇಮಿಸಿದರು. ಮುಂದೆ ಅವರು ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದರು. ಆಗ ಜ್ಞಾನ ಮುಖ್ಯವಾಗಿತ್ತೇ ವಿನಾ ಪದವಿಯಲ್ಲ. ಶಿವರಾಮ ಕಾರಂತ ಅವರು ಒಮ್ಮೆ ಕಾಲೇಜೊಂದರಲ್ಲಿ ಅತಿಥಿಯಾಗಿ ಭಾಷಣ ಮಾಡುತ್ತ ‘ನಾನು ಅರ್ಜಿ ಹಾಕಿದರೆ ನಿಮ್ಮ ಕಾಲೇಜಿನಲ್ಲಿ ನನಗೆ ಉಪನ್ಯಾಸಕ ಹುದ್ದೆ ಸಿಕ್ಕುವುದಿಲ್ಲ’ ಎಂದಿದ್ದರು.

ನನ್ನ ಅನುಭವವೊಂದನ್ನು ಹೇಳುತ್ತೇನೆ: ಒಮ್ಮೆ ಮೈಸೂರಿನಿಂದ ಒಬ್ಬ ಪರಿಣತರು ಸರ್ಕಾರ ಪ್ರಾಯೋಜಿಸಿದ್ದ ‘ಕಾವೇರಿಯಿಂದ ಗೋದಾವರಿ ವರೆಗೆ...’ ಎಂದೇನೋ ಶೀರ್ಷಿಕೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ದಾಖಲೀಕರಣಕ್ಕೆ ಛಾಯಾಗ್ರಾಹಕರೊಂದಿಗೆ ಬಂದಿದ್ದರು. ಅವರು ಸಾಂದರ್ಭಿಕವಾಗಿ ಮತ್ತು ಸಾಂಕೇತಿಕವಾಗಿ ಕಾವೇರಿಯಿಂದಲೇ ಆರಂಭಿಸೋಣ ಎಂದು ಕೊಡಗಿನ ಒಂದು ಕಾಲೇಜಿಗೆ ಹೋಗಿ, ಅಲ್ಲಿನ ಯಾವುದಾದರೂ ತರಗತಿಗೆ ಕನ್ನಡ ಉಪನ್ಯಾಸಕರು ಕವಿರಾಜಮಾರ್ಗದ ಈ ಮೇಲೆ ಉಲ್ಲೇಖಿಸಿದ ಭಾಗವನ್ನು 10-15 ನಿಮಿಷಗಳ ಕಾಲ ಬೋಧಿಸಬೇಕೆಂದೂ ಅದರ ವಿಡಿಯೊ ದೃಶ್ಯವನ್ನು ದಾಖಲಿಸಿಕೊಳ್ಳುವುದಾಗಿಯೂ ಹೇಳಿ ಸಹಕಾರ ಕೋರಿದರು. ದುರಂತವೆಂದರೆ, ಅಲ್ಲಿನ ಇಬ್ಬರು, ಮೂವರು ಕನ್ನಡ ಉಪನ್ಯಾಸಕರು ಇದಕ್ಕೆ ಹಿಂಜರಿದರು. ತಾವು ತಯಾರಿ ನಡೆಸಿಲ್ಲ, ಅದು ಪಠ್ಯ ಭಾಗದಲ್ಲಿಲ್ಲ ಎಂದೆಲ್ಲ ಸಬೂಬು ಹೇಳಿದರು. ಕೊನೆಗೆ ಆ ಕೃತಿಯೂ ಅಲ್ಲಿನ ಗ್ರಂಥಾಲಯದಲ್ಲಿ ದೊರಕಲಿಲ್ಲ. ಆಗ ಅಲ್ಲಿದ್ದ ಪತ್ರಕರ್ತರೊಬ್ಬರು ನನಗೆ ದೂರವಾಣಿ ಕರೆ ಮಾಡಿ, ಆ ಪುಸ್ತಕವಿದೆಯೇ ಮತ್ತು ಆ ಭಾಗವನ್ನು ಬೋಧಿಸಬಹುದೇ ಎಂದು ಕೇಳಿದರು. ನಾನು ನನ್ನ ವಕೀಲ ವೃತ್ತಿಯಿಂದ, ಆ ದಿನದ ಮಟ್ಟಿಗೆ ಒಂದಿಷ್ಟು ಬಿಡುವು ಮಾಡಿಕೊಂಡು, ನನ್ನಲ್ಲಿದ್ದ ಕವಿರಾಜಮಾರ್ಗ ಹೊತ್ತಗೆಯೊಂದಿಗೆ ಅಲ್ಲಿ ಹೋಗಿ ಅವರ ಹೊಣೆಯನ್ನು ತಕ್ಕಮಟ್ಟಿಗೆ ನಿಭಾಯಿಸಿದೆ.

ಹೀಗೆಂದರೆ, ಇತರರೇ ಕನ್ನಡ ಭಾಷೆಯನ್ನು ಬೋಧಿಸಬಹುದು ಎಂದಲ್ಲ. ಆದರೆ ಬಿಳಿಮಲೆ ಅವರು ಹೇಳಿದ ರೀತಿಯಲ್ಲಿ ಕಟ್ಟುಪಾಡುಗಳನ್ನು ಹೇರಿದರೆ, ಅದು ನಿರುದ್ಯೋಗಿ ಕನ್ನಡ ‘ತಜ್ಞ’ರಿಗೆ ಸಹಕಾರಿಯಾಗಬಹುದೇ ವಿನಾ ಕನ್ನಡ ಬೋಧನೆಗಲ್ಲ. ಈಗ ಕನ್ನಡ ಬೋಧನೆಗೆ ಅಂಟಿರುವ ಪದವಿ, ಅಂಕಗಳು ಎಲ್ಲವೂ ಕೃತಕ ಗಡಿರೇಖೆಗಳು. ಇವು ಇರುವವರೆಗೆ ಕನ್ನಡ ಎಂದಲ್ಲ ಯಾವುದರ ಅಭಿವೃದ್ಧಿಯೂ ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.