ಕಾಡು ಎಂಬ ಪದಕ್ಕೆ ಅಟವಿ, ಅರಣ್ಯ, ವನ, ವಿಪಿನ, ಕಾನನ ಎಂಬಿತ್ಯಾದಿ ಹಲವು ಅರ್ಥಗಳಿವೆ. ಗಿಡ, ಮರ, ಬೆಟ್ಟ, ಗುಡ್ಡ, ಗುಹೆ, ನದಿ, ಝರಿ, ಕಣಿವೆಗಳನ್ನು ಒಳಗೊಂಡ ಕಾಡು-ಸಸ್ಯಸಂಕುಲ, ಕೀಟ ಸಂಕುಲ, ವನ್ಯಜೀವಿ ಸಂಕುಲದ ನೆಲೆವೀಡು. ಮಾನವನ ಅತಿಯಾದ ಹಸ್ತಕ್ಷೇಪ ಇಲ್ಲದಿದ್ದರೆ ಕಾಡು ಸಮೃದ್ಧವಾಗಿ ಬೆಳೆಯುತ್ತದೆ. ಹಸಿರು ಹೊದಿಕೆ ಹೆಚ್ಚುತ್ತದೆ. ಸಮೃದ್ಧವಾದ ಕಾಡುಗಳು ಮಾನವನ ಆರೋಗ್ಯಪೂರ್ಣ ಜೀವನಕ್ಕೆ ಸೋಪಾನ. ಪ್ರಾಣವಾಯು ನೀಡುವ ವನ ಇದ್ದರೆ ಮಾತ್ರವೇ ಮನುಷ್ಯನ ಜೀವನ ಎಂಬುದು ನಿರ್ವಿವಾದ. ಅಮೆಜಾನ್ ಮಳೆ ಕಾಡುಗಳನ್ನು ವಿಶ್ವದ ಆಮ್ಲಜನಕದ ಕಣಜ ಎಂದು ಕರೆಯುತ್ತಾರೆ. ಜಗತ್ತಿನ ಶೇ 30ರಷ್ಟು ಜೀವವೈವಿಧ್ಯವಿರುವ ಅಮೆಜಾನ್ ಕಾಡುಗಳು ವಿಶ್ವದ ಶೇ 20ರಷ್ಟು ಆಮ್ಲಜನಕ ಉತ್ಪಾದಿಸುತ್ತವೆ. ಕಾಡು ನಾಶವಾದರೆ ಪರೋಕ್ಷವಾಗಿ ನಾಡೇ ನಾಶವಾದಂತೆ. ಕಾಡು ನಾಶವಾದರೆ ಮನುಷ್ಯನ ನಾಶ ನಿಶ್ಚಿತ. ಹೀಗಾಗಿಯೇ ಭೌಗೋಳಿಕ ಪ್ರದೇಶದ ಶೇ 33ರಷ್ಟು ಹಸಿರು ಹೊದಿಕೆ ಇರಬೇಕು ಎಂಬುದು ಜಾಗತಿಕ ಮಾನದಂಡ. ಕರ್ನಾಟಕದಲ್ಲಿ ಸುಮಾರು ಶೇ 21ರಷ್ಟು ಹಸಿರು ಹೊದಿಕೆ ಇದೆ. ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯ ವಿಸ್ತರಣೆ ಅಸಾಧ್ಯ. ಹೀಗಾಗಿ, ಇರುವ ಅರಣ್ಯ ನಾಶವಾಗದಂತೆ, ಒತ್ತುವರಿ ಆಗದಂತೆ ರಕ್ಷಿಸುವ ಹೊಣೆ ಸರ್ಕಾರದ್ದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನದೂ ಆಗಿದೆ.

ನಮ್ಮ ಪೂರ್ವಿಕರು ಊರಿನ ಮಧ್ಯೆ ಅತಿ ಹೆಚ್ಚು ಆಮ್ಲಜನಕ ನೀಡುವ ಅರಳಿಮರ ನೆಟ್ಟು ಅದಕ್ಕೆ ಒಂದು ಕಟ್ಟೆ ಕಟ್ಟಿ ಪಕ್ಕದಲ್ಲೊಂದು ಬೇವಿನ ಮರ ನೆಟ್ಟು, ಅಶ್ವತ್ಥಕಟ್ಟೆ ಎಂದು ಪೂಜಿಸುತ್ತಿದ್ದರು. ವನಮಹೋತ್ಸವ ಆಚರಿಸುತ್ತಿದ್ದರು. ದೇವರ ಕಾಡು ಎಂದು ಹೆಸರಿಟ್ಟು, ಬೆಟ್ಟ, ಗುಡ್ಡಗಳ ಮೇಲೆ ದೇವಾಲಯಗಳನ್ನು ಕಟ್ಟಿ ಪ್ರಕೃತಿ ಪರಿಸರ ನಾಶವಾಗದಂತೆ ರಕ್ಷಿಸಿದ್ದರು. ಇದು ನಮ್ಮ ಪೂರ್ವಿಕರು ಸಹಸ್ರಾರು ವರ್ಷಗಳ ಹಿಂದೆ ತಾವೇ ರೂಪಿಸಿಕೊಂಡ ಸಂವಿಧಾನ. ಇದನ್ನೇ ನಮ್ಮ ಪವಿತ್ರ ಸಂವಿಧಾನದಲ್ಲೂ ಉಲ್ಲೇಖಿಸಲಾಗಿದೆ: ‘ಭಾರತದ ಪ್ರಜೆಯಾಗಿ ನಾನು ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತೇನೆ ಮತ್ತು ಸುಧಾರಿಸುತ್ತೇನೆ. ಭಾರತದ ಸಂವಿಧಾನದ 51 (ಎ) ಕಲಂನಲ್ಲಿರುವಂತೆ ನಾನು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುತ್ತೇನೆ’. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವನ್ನು ನೆನಪಿಸುತ್ತದೆ. ಗಾಂಧೀಜಿಯವರು ‘ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’ ಎಂದು ಹೇಳಿದ್ದಾರೆ. ಆದರೆ, ಇಂದು ಮಾನವನ ಅತಿಯಾಸೆಗೆ ಅವ್ಯಾಹತವಾಗಿ ನೈಸರ್ಗಿಕ ಸಂಪನ್ಮೂಲದ ದುರ್ಬಳಕೆ ಆಗುತ್ತಿದೆ. ನಾವು ಪ್ರಕೃತಿದತ್ತವಾದ ಸಂಪನ್ಮೂಲವನ್ನು ಹಿತಮಿತವಾಗಿ ಬಳಕೆ ಮಾಡಬೇಕು. ಮರುಬಳಕೆಗೂ ಒತ್ತು ನೀಡಬೇಕು. ಆದರೆ, ಈ ಪರಿವೆಯೇ ಇಲ್ಲದೆ ನಾವು ವರ್ತಿಸುತ್ತಿದ್ದೇವೆ ಎಂಬುದು ನೋವಿನ ಸಂಗತಿ.

ಹುಲಿ ಯೋಜನೆ ಜಾರಿಗೆ ಬಂದು 50 ವರ್ಷಗಳಾಗಿವೆ. ಈ ಯೋಜನೆ ಆರಂಭವಾದಾಗ ದೇಶದಲ್ಲಿದ್ದ ಹುಲಿಗಳ ಸಂಖ್ಯೆ 1,827 ಮಾತ್ರ. 2022ರ ಗಣತಿಯಂತೆ ಈಗ ಕರ್ನಾಟಕದಲ್ಲಿ 563 ಹುಲಿಗಳಿವೆ. ದೇಶದಲ್ಲಿ ಒಟ್ಟು 3,682 ಹುಲಿಗಳಿವೆ. ಆದರೆ, ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಕಾನನ ಪ್ರದೇಶದ ಹೂಗ್ಯಂನಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳ ದಾರುಣವಾಗಿ ಸತ್ತದ್ದು ಹೃದಯ ವಿದ್ರಾವಕ. ವನ್ಯಜೀವಿಯೊಂದು ತಮ್ಮ ದನವನ್ನು ತಿಂದಿದೆ ಎಂಬ ಕಾರಣದಿಂದ ಆಕ್ರೋಶಗೊಂಡ ಕೆಲವರು ಸತ್ತ ದನಕ್ಕೆ ಕಾರ್ಬೊಫ್ಯುರಾನ್ ಕೀಟನಾಶಕವನ್ನು ಸಿಂಪಡಿಸಿದ್ದರು. ವಿಷಲೇಪಿತ ಮೃತ ದನವನ್ನು ತಿಂದ ಐದು ಹುಲಿಗಳು ಸಾವಿಗೀಡಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾಡಿನಲ್ಲಿ ದನಗಳನ್ನು ಮೇಯಿಸುವ ವಿಚಾರ ಈ ಪ್ರಕರಣದಿಂದ ಮುನ್ನೆಲೆಗೆ ಬಂದಿದೆ. ಮಲೆಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ 33,043 ಜಾನುವಾರುಗಳು ಇವೆ ಎಂದು ಪಶುಸಂಗೋಪನಾ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. ಇವುಗಳ ಪೈಕಿ ಕೆಂದುಬಟ್ಟ, ಹಳ್ಳಿಕಾರ್, ಬರಗೂರು, ಹುಲಿಕಲ್ ಜಾತಿಯ ದನಗಳೇ ಹೆಚ್ಚು.

ಸಾಕಿದ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವುದನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ 2022ರಲ್ಲಿ ಆದೇಶ ನೀಡಿದ ಬಳಿಕ, ತಮಿಳುನಾಡಿನ ಬರಗೂರು ಜಾತಿ ಜಾನುವಾರುಗಳನ್ನು ನಮ್ಮ ಕಾಡಿನಲ್ಲಿ ಮೇಯಿಸುವ ದೊಡ್ಡ ಜಾಲವೇ ಹುಟ್ಟಿಕೊಂಡಿದೆ. ಕಾಡಿನಲ್ಲಿ ಸಾವಿರಾರು ಸಂಖ್ಯೆಯ ಜಾನುವಾರುಗಳನ್ನು ಮೇಯಲು ಬಿಡುವುದರಿಂದ ಕಾಡಿನ ದಟ್ಟಣೆ ಕ್ಷೀಣಿಸುತ್ತಿದೆ, ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದು ಜೀವವೈವಿಧ್ಯವನ್ನು ನಾಶ ಮಾಡುತ್ತದೆ. ಕಾಡುಗಳಲ್ಲಿ ಅತಿಯಾಗಿ ದನ, ಕರು, ಎಮ್ಮೆ, ಕುರಿ, ಮೇಕೆ ಇತ್ಯಾದಿ ಸಾಕುಪ್ರಾಣಿಗಳನ್ನು ಮೇಯಿಸುವುದರಿಂದ ಸ್ವಾಭಾವಿಕವಾದ ಪರಿಸರ ವ್ಯವಸ್ಥೆಗೆ ಅಡ್ಡಿಯಾಗಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳನ್ನು ಕಾಡಿಗೆ ಮೇಯಲು ಬಿಟ್ಟರೆ ಅವು ಕಾಡಿನಲ್ಲಿನ ಸಮೃದ್ಧ ಹುಲ್ಲು, ಗರಿಕೆ, ಆಗಷ್ಟೇ ಮೊಳೆತ ಸಸ್ಯಗಳನ್ನು ತಿನ್ನುವ ಕಾರಣ, ಹೊಸ ಗಿಡಗಳು ಬೆಳೆಯದೆ ಸೆನ್ನಾ, ಲಂಟಾನದಂತಹ ಕಳೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅರಣ್ಯ ಪುನರುಜ್ಜೀವನ, ವೃಕ್ಷ ಸಂವರ್ಧನೆ ಆಗದಿದ್ದಾಗ, ಕಾಡಿನಲ್ಲಿ ಹರಿಯುವ ನದಿಗಳ ಮೇಲೂ ಪ್ರಭಾವ ಬೀರುತ್ತದೆ. ಇದು ಕಾಡಿನಲ್ಲಿರುವ ಸಸ್ಯಾಹಾರಿ ವನ್ಯಜೀವಿಗಳು ಅಂದರೆ ಆನೆ, ಕಡವೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ ಮೊದಲಾದ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗುವಂತೆ ಮಾಡುತ್ತದೆ. ಜೊತೆಗೆ ಎಲ್ಲ ಪ್ರಾಣಿಗಳೂ ನೀರು ಅರಸಿ ನಾಡಿಗೆ ಬರುವಂತೆ ಮಾಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಕಾಡಿನಲ್ಲಿ ಓಡಾಡಿದರೆ, ಅವು ಸಂಚರಿಸಿದ ಪ್ರದೇಶದಲ್ಲಿ ಅವುಗಳ ಗೊರಸುಗಳ ತುಳಿತದಿಂದ ನೆಲ ಸಂಕುಚಿತಗೊಳ್ಳುತ್ತದೆ. ಅಲ್ಲಿ ಭೂಮಿಗೆ ನೀರು ಇಳಿಯದೆ ಗಟ್ಟಿಯಾಗಿ, ಆ ಪ್ರದೇಶದಲ್ಲಿ ಯಾವುದೇ ಗಿಡ ಮರ ಬೆಳೆಯದಂತೆ ಆಗುತ್ತದೆ. ವಿಶೇಷವಾಗಿ ಇಳಿಜಾರುಗಳಲ್ಲಿ ಸವೆತಕ್ಕೆ ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಜಾನುವಾರುಗಳಿಗೆ ಕಾಲುಬಾಯಿ ರೋಗ, ಚರ್ಮಗಂಟು ಅಥವಾ ಬಾವು (ಲಂಪಿ ಸ್ಕಿನ್), ನೆರಡಿ (ಆಂಥ್ರಾಕ್ಸ್) ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ಬರುತ್ತವೆ. ಸಾಕುಪ್ರಾಣಿಗಳಿಗೆ ಕಾಯಿಲೆ ಬಂದರೆ, ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಬಹುದು. ಆದರೆ, ಈ ಕಾಯಿಲೆಗಳಿಂದ ಬಳಲುತ್ತಿರುವ ಜಾನುವಾರುಗಳು ಕಾಡಿನಲ್ಲಿ ಮೇಯುವ, ಅಲ್ಲಿನ ಕೆರೆ, ಗುಂಡಿಗಳಲ್ಲಿ ನೀರು ಕುಡಿಯುವ ಕಾರಣ, ಅವುಗಳ ಸೋಂಕು ವನ್ಯಜೀವಿಗಳಿಗೆ ಹರಡಿದರೆ, ಕಾಡಿನ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಕಾಡಿನಲ್ಲಿಯೇ ಜೀವಿಸುವ ಆದಿವಾಸಿಗಳು ತಮ್ಮ ಅಗತ್ಯಕ್ಕೆ ಕೆಲವು ಹಸು, ಕರು, ಕುರಿ, ಮೇಕೆಗಳನ್ನು ಇಟ್ಟುಕೊಳ್ಳುತ್ತಾರೆ. ಅವು ನಾಡಿಗೆ ಬರುವುದಿಲ್ಲ. ಹೀಗಾಗಿ ಅವುಗಳಿಂದ ವನ್ಯಜೀವಿಗಳಿಗೆ ಸಾಂಕ್ರಾಮಿಕ ರೋಗ ಹರಡುವುದಿಲ್ಲ. ಆದರೆ ನೂರಾರು ಕಿ.ಮೀ ದೂರದಿಂದ ಸಾವಿರಾರು ದನಕರುಗಳನ್ನು ತಂದು ಕಾಡಿನಲ್ಲಿ ಬಿಟ್ಟಾಗ ಸಾಂಕ್ರಾಮಿಕ ರೋಗ ವನ್ಯಜೀವಿಗಳಿಗೂ ಬರುವ ಅಪಾಯ ಇದೆ. ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಬಹುದು, ಚಿಕಿತ್ಸೆ ಕೊಡಿಸಬಹುದು. ಆದರೆ, ವನ್ಯಜೀವಿಗಳಿಗೆ ಚಿಕಿತ್ಸೆ ಕೊಡುವುದಾದರೂ ಹೇಗೆ? ಸಾವಿರಾರು ದನಕರುಗಳನ್ನು ತಿಂಗಳುಗಟ್ಟಲೆ ಕಾಡಿನಲ್ಲಿ ಮೇಯಿಸುವುದರಿಂದ ಕಾಡಿನಲ್ಲಿರುವ ನಿರ್ದಿಷ್ಟ ಹುಲ್ಲುಗಾವಲುಗಳು ಕೆಲವೇ ದಿನಗಳಲ್ಲಿ ನಾಶವಾಗುತ್ತವೆ. ಮಣ್ಣು ಸಂಕುಚಿತವಾಗಿ ವನಸಮೃದ್ಧಿ ಬರಡಾಗುತ್ತದೆ. ಹೀಗಾಗಿಯೇ ಸ್ಥಳೀಯರಿಗೆ ಮತ್ತು ಅರಣ್ಯವಾಸಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಹೊರರಾಜ್ಯದಿಂದ ತಂದು ನಮ್ಮ ಕಾಡಿನಲ್ಲಿ ಮೇಯಿಸುವ ಜಾನುವಾರುಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಲೇಖಕ: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

‘We have not inherited the world from our forefathers - we have borrowed it from our children’

– ಈ ಜಗತ್ತು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ ಬದಲಾಗಿ ನಮ್ಮ ಮುಂದಿನ ಪೀಳಿಗೆಯಿಂದ ನಾವು ಪಡೆದಿರುವ ಸಾಲ ಎಂಬುದು ಇದರ ಅರ್ಥ. ಈ ಜಗತ್ತನ್ನು ಜತನವಾಗಿ ಕಾಪಾಡಿ ಅವರಿಗೆ ಮರಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಈ ಸಾಲುಗಳು ನಾವು ಈ ಭೂಮಿ ಮತ್ತು ಭೂಮಿಯಿಂದ ನಮಗೆ ದೊರೆತಿರುವ ಸಂಪನ್ಮೂಲವನ್ನು ಹೇಗೆ ಹಿತಮಿತವಾಗಿ ಬಳಕೆ ಮಾಡಬೇಕು ಎಂಬುದನ್ನು ಸಾರಿ ಹೇಳುತ್ತವೆ. ಆದಾಗ್ಯೂ ಮನುಷ್ಯನ ಲೋಲುಪತೆಗೆ ಸ್ವಾರ್ಥಕ್ಕೆ ಅರಣ್ಯ ನಾಶವಾಗಿದೆ. ಹಲವು ವನ್ಯಜೀವಿಗಳು ಇಂದು ಅವಸಾನವಾಗಿವೆ. ಹಿಂದೆ ಮೋಜಿಗಾಗಿ ಬೇಟೆಯ ಹೆಸರಲ್ಲಿ ವನ್ಯಜೀವಿಗಳ ಮಾರಣಹೋಮವೇ ನಡೆಯುತ್ತಿತ್ತು. ಪ್ರಕೃತಿ ಪರಿಸರ ಸಮತೋಲನವಾಗಿರಲು ವನ್ಯಜೀವಿಗಳಷ್ಟೇ ಅಲ್ಲ ಕೀಟಗಳೂ ಮುಖ್ಯ ಎಂಬುದನ್ನು ಮನಗಂಡು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದ ಫಲವಾಗಿ ಇಂದು ಅರಣ್ಯ ಉಳಿದಿದೆ. ವನ್ಯಜೀವಿಗಳು ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.