ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಅಲ್ಲಿನ ರಾಜ್ಯ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆಯು, ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ರಾಜ್ಯದಾದ್ಯಂತ ಎಲ್ಲ ಸಮುದಾಯಗಳ ಜನರೂ ಸರ್ಕಾರಿ ಭೂಮಿ ಹಾಗೂ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರದ ಕಂದಾಯ ಭೂಮಿ, ಗೋಮಾಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸರ್ಕಾರ ಹೇಳಿದೆ. ಮನುಷ್ಯ ಹಾಗೂ ವನ್ಯಮೃಗಗಳ ನಡುವಣ ಸಂಘರ್ಷವನ್ನು ಕಡಿಮೆ ಮಾಡಲು ಸಹಕಾರಿ ಆಗುವಂತೆ ಒತ್ತುವರಿಯನ್ನು ತೆರವುಗೊಳಿಸಲು ಗುವಾಹಟಿ ಹೈಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ, ಕೆಲವು ನಿರ್ದಿಷ್ಟ ಪ್ರದೇಶಗಳು ಹಾಗೂ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಯುತ್ತಿರುವುದು ಹಾಗೂ ಕ್ಷಿಪ್ರಗತಿಯಲ್ಲಿ ತೆರವು ಪ್ರಕ್ರಿಯೆ ನಡೆಯುತ್ತಿರುವುದು, ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಕೋಮು ಉದ್ದೇಶ ಇರುವುದರ ಸ್ಪಷ್ಟ ಸೂಚನೆಯಾಗಿದೆ. ಒತ್ತುವರಿ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ 2021ರಿಂದಲೂ ನಡೆಯುತ್ತಿದೆ. ಆ ಕಾರ್ಯಾಚರಣೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಈಗ ಇದ್ದಕ್ಕಿದ್ದಂತೆ ತೀವ್ರಗೊಳಿಸಲಾಗಿದೆ.

ಪರಿಸರ ಸಂರಕ್ಷಣೆ ಹಾಗೂ ಭೂಮಿ ನಿರ್ವಹಣೆಯ ಕಾಳಜಿಯಿಂದ ಹೈಕೋರ್ಟ್ ನೀಡಿರುವ ನಿರ್ದೇಶನ ವನ್ನು, ಅಕ್ರಮ ವಲಸೆಗಾರರು ಎಂದು ಗುರ್ತಿಸಲಾಗುವ ಹಾಗೂ ಬೆಂಗಾಲಿ ಮಾತನಾಡುವ ಮುಸ್ಲಿಮರನ್ನು ಹತ್ತಿಕ್ಕಲು ಸರ್ಕಾರ ಬಳಸುತ್ತಿದೆ. ಮುಸ್ಲಿಂ ಸಮುದಾಯ ಗಣನೀಯ ಪ್ರಮಾಣ ದಲ್ಲಿರುವ ಪ್ರದೇಶಗಳನ್ನು ಗುರ್ತಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒತ್ತುವರಿದಾರರು ಎಂದು ಗುರ್ತಿಸ ಲಾಗಿರುವ ನಾಗರಿಕರು, ಪ್ರಾಕೃತಿಕ ವಿಕೋಪಗಳಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡವರಾಗಿದ್ದಾರೆ ಹಾಗೂ ಲಭ್ಯವಿರುವ ಖಾಲಿ ಜಾಗಗಳಲ್ಲಿ ವಸತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒತ್ತುವರಿ ಕಾರ್ಯಾಚರಣೆಯ ನಂತರ
ಇವರಲ್ಲಿ ಬಹುತೇಕರಿಗೆ ವಾಸಿಸಲು ಮನೆ ಇಲ್ಲದಂತಾಗಿದೆ ಹಾಗೂ ಅವರ ಜೀವನೋಪಾಯದ ದಾರಿಗಳೂ ಮುಚ್ಚಿ ಹೋಗಿವೆ. ವಾಸಸ್ಥಳಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳನ್ನು ಹೊಂದಿರುವ ಹಾಗೂ ದಶಕಗಳಿಂದ ವಾಸಿಸುತ್ತಿರುವ ಸ್ಥಳದಿಂದ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡಲಾಗಿದೆ. ಯಾವುದೇ ಸರ್ಕಾರಿ ಕಾರ್ಯಾಚರಣೆ, ಅದೆಷ್ಟೇ ಆಡಳಿತಾತ್ಮಕ ಹಾಗೂ ಕಾನೂನುಬದ್ಧ ಆಗಿದ್ದರೂ, ಮಾನವೀಯ ಸ್ಪಂದನಗಳನ್ನು ಹೊಂದಿರುವುದು ಅಗತ್ಯ. ಅಂಥ ಮಾನವೀಯ ಆಯಾಮ ಅಸ್ಸಾಂನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲವಾಗಿದೆ.

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ತಮ್ಮ ತಾರತಮ್ಯ ಧೋರಣೆಯನ್ನೇ ಸಾರ್ವಜನಿಕ ನೀತಿಯನ್ನಾಗಿ ಅನುಸರಿಸುತ್ತಿರುವಂತಿದೆ. ಸ್ಥಳೀಯರಿಂದ ಆಗಿರುವ ಒತ್ತುವರಿ ಅಪರಾಧವಲ್ಲ ಎಂದು ಹೇಳಿರುವ ಅವರು, ವಲಸಿಗ ಮುಸ್ಲಿಮರನ್ನು ಮಾತ್ರ ಒಕ್ಕಲೆಬ್ಬಿಸುವುದಾಗಿ ಹೇಳಿದ್ದಾರೆ. ಜನರ ನಡುವೆ ತಾರತಮ್ಯ ಎಸಗುವಂತೆ ಸರ್ಕಾರದ ನೀತಿ ಇರಬಾರದು. ಒತ್ತುವರಿ ಮಾಡಿದವರು ಸ್ಥಳೀಯರಾದ ಮಾತ್ರಕ್ಕೆ ಅದು ಕಾನೂನುಬದ್ಧವೂ ಆಗುವುದಿಲ್ಲ. ಒಕ್ಕಲೆಬ್ಬಿಸಿದ ಜನಕ್ಕೆ ಆಶ್ರಯ ನೀಡುವುದು ಸೇರಿದಂತೆ ಯಾವುದೇ ರೀತಿಯ ನೆರವು ನೀಡಬಾರದೆಂದು ಮುಖ್ಯಮಂತ್ರಿ ಜನರಿಗೆ ಕರೆ ನೀಡಿದ್ದಾರೆ. ಅಸ್ಸಾಂನ ಕಾನೂನುಬದ್ಧ ನಿವಾಸಿಗಳು ಯಾರು ಹಾಗೂ ಅತಿಕ್ರಮಣಕಾರರು ಯಾರು ಎನ್ನುವುದನ್ನು ಸರ್ಕಾರ ಮತ್ತು ಅಧಿಕಾರಿಗಳು ತೀರ್ಮಾನಿಸುತ್ತಿದ್ದಾರೆ. ‘ಭೂಮಿ ಜಿಹಾದ್’ ಹಾಗೂ ‘ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಜನರಿಂದ ಜನಸಂಖ್ಯಾ ಆಕ್ರಮಣಶೀಲತೆ’ ಎನ್ನುವ ಪ್ರಚೋದನಕಾರಿ ಪದಗಳನ್ನು ಮುಖ್ಯಮಂತ್ರಿ ಬಳಸಿದ್ದಾರೆ. ಮುಖ್ಯಮಂತ್ರಿ ಬಳಸುತ್ತಿರುವ ಭಾಷೆ ಹಾಗೂ ಇಡೀ ತೆರವು ಕಾರ್ಯಾಚರಣೆ ಪ್ರಕ್ರಿಯೆಯು ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಮುಸ್ಲಿಂ ವಿರೋಧಿ ಧೋರಣೆಯ ಭಾಗವಾಗಿವೆ. 2026ರಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಡೆಯುತ್ತಿರುವ ರಾಜಕೀಯಪ್ರೇರಿತ ಕಾರ್ಯಾಚರಣೆಯ ರೂಪದಲ್ಲಿ ಅಲ್ಲಿನ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಬಹುದು. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ವಾಸಸ್ಥಳದ ಹಕ್ಕೂ ಒಂದಾಗಿದೆ. ಆ ಹಕ್ಕನ್ನು, ಸಂಕುಚಿತ ರಾಜಕೀಯ ಕಾರಣಗಳಿಗಾಗಿ ಸರ್ಕಾರ ಕಿತ್ತುಕೊಳ್ಳಬಾರದು.
.ಸಂಪಾದಕೀಯ Podcast | ಒತ್ತುವರಿ ತೆರವು ಕಾರ್ಯಾಚರಣೆ; ಕೋಮುದ್ವೇಷದ ರಾಜಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.