ನೆರೆಯ ನೇಪಾಳದ ಪಾಲಿಗೆ ರಾಜಕೀಯ ಸ್ಥಿರತೆಯನ್ನು ಕಂಡುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕೆ.ಪಿ. ಶರ್ಮಾ ಓಲಿ ಅವರು ದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು, ನೇಪಾಳವು ಗಣರಾಜ್ಯವಾಗಿ ಬದಲಾದ ದಿನದಿಂದಲೂ ಸಮಸ್ಯೆಯಾಗಿ ಕಾಡುತ್ತಿರುವ ರಾಜಕೀಯ ಅಸ್ಥಿರತೆ
ಯನ್ನು ಎತ್ತಿತೋರಿಸಿದೆ. ಈ ಹಿಂದಿನ ಪ್ರಧಾನಿ ಹಾಗೂ ನೇಪಾಳದ ಕಮ್ಯುನಿಸ್ಟ್ ಪಕ್ಷ (ಎಂಸಿ) ನಾಯಕ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಅವರಿಗೆ 275 ಸದಸ್ಯ ಬಲದ ಸದನದಲ್ಲಿ ಜುಲೈ 12ರಂದು 63 ಸದಸ್ಯರ ಬೆಂಬಲವನ್ನು ಮಾತ್ರ ಸಾಬೀತು ಮಾಡಲು ಸಾಧ್ಯವಾದಾಗ, ಓಲಿ ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವುದು ಅನಿವಾರ್ಯವಾಯಿತು. ಓಲಿ ಅವರ ಸಿಪಿಎನ್–ಯುಎಂಎಲ್ ಪಕ್ಷದ ಬೆಂಬಲದೊಂದಿಗೆ ಪ್ರಚಂಡ ಅವರು ಆಡಳಿತ ನಡೆಸುತ್ತಿದ್ದರು. ಆದರೆ ಓಲಿ ಅವರ ಪಕ್ಷವು ಪ್ರಚಂಡ ಅವರಿಗೆ ನೀಡಿದ್ದ ಬೆಂಬಲ ಹಿಂಪಡೆಯಿತು. ಬೆಂಬಲ ಹಿಂಪಡೆಯುವುದಕ್ಕೂ ಮೊದಲು ಓಲಿ ಅವರು, ಪ್ರಚಂಡ ಅವರಿಗೆ ತಿಳಿಯದಂತೆ ನೇಪಾಳಿ ಕಾಂಗ್ರೆಸ್ ಪಕ್ಷದ ಶೇರ್ ಬಹದ್ದೂರ್ ದೇಉಬಾ ಅವರೊಂದಿಗೆ ಕೈಜೋಡಿಸಿದ್ದರು. ಹೊಸ ಸರ್ಕಾರವನ್ನು ರಚಿಸಲು ಓಲಿ ಅವರು ರಾಷ್ಟ್ರಪತಿ ರಾಮಚಂದ್ರ ಪೌದೇಲ್ ಅವರಲ್ಲಿ ಹಕ್ಕು ಮಂಡಿಸುವ ಹೊತ್ತಿನಲ್ಲಿ 165 ಸಂಸದರ ಬೆಂಬಲ ಇರುವ ಪತ್ರವನ್ನು ಸಲ್ಲಿಸಿದ್ದರು. ಓಲಿ ಅವರ ಪಕ್ಷವು 77 ಸದಸ್ಯ ಬಲ ಹೊಂದಿದೆ. ನೇಪಾಳಿ ಕಾಂಗ್ರೆಸ್ ಪಕ್ಷವು 88 ಸದಸ್ಯರನ್ನು ಹೊಂದಿದೆ. ಈ ಎರಡು ಪಕ್ಷಗಳು ಒಟ್ಟಾಗಿರುವ ಕಾರಣ, ಸರ್ಕಾರ ರಚಿಸಲು ಅಗತ್ಯವಿರುವ ಸದಸ್ಯ ಬಲವನ್ನು ಒಗ್ಗೂಡಿಸಿದಂತೆ ಆಗಿದೆ. ನೇಪಾಳದಲ್ಲಿ ಸರ್ಕಾರ ರಚಿಸಲು ಕನಿಷ್ಠ 138 ಸದಸ್ಯರ ಬೆಂಬಲ ಅಗತ್ಯ.

ಇಲ್ಲಿ ಗಮನಾರ್ಹ ಅಂಶವೆಂದರೆ, ಓಲಿ ಅವರ ಪಕ್ಷವು ಮೈತ್ರಿಕೂಟದಲ್ಲಿ ನೇಪಾಳಿ ಕಾಂಗ್ರೆಸ್ಸಿಗೆ ಇರುವ ಸದಸ್ಯ ಬಲಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಸದಸ್ಯರನ್ನು ಹೊಂದಿದೆ. ಇದು ಹೊಸದಾಗಿ ರಚನೆ ಆಗಿರುವ ಸರ್ಕಾರದ ದೌರ್ಬಲ್ಯವನ್ನು ಹೇಳುತ್ತಿದೆ. 2027ರಲ್ಲಿ ನೇಪಾಳದಲ್ಲಿ ಚುನಾವಣೆ ನಡೆಯಬೇಕಿದೆ. ಅಲ್ಲಿಯವರೆಗಿನ ಅವಧಿಯಲ್ಲಿ ಪ್ರಧಾನಿ ಹುದ್ದೆಯನ್ನು ಸಮಾನ ಅವಧಿಗೆ ಎರಡೂ ಪಕ್ಷಗಳು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿವೆ. ಆದರೆ ರಾಜಕಾರಣದಲ್ಲಿ ಇಂತಹ ಒಪ್ಪಂದಗಳಿಗೆ ಹೆಚ್ಚಿನ ಅರ್ಥ ಇರುವುದಿಲ್ಲ. ಪ್ರಧಾನಿ ಹುದ್ದೆಯಲ್ಲಿ ತಮ್ಮ ಅವಧಿ ಪೂರ್ಣಗೊಂಡ ನಂತರ ಓಲಿ ಅವರು ದೇಉಬಾ ಅವರಿಗೆ ಹುದ್ದೆಯನ್ನು ಬಿಟ್ಟುಕೊಡುತ್ತಾರೆ ಎಂಬುದು ಖಚಿತವೇನೂ ಅಲ್ಲ. ದೇಉಬಾ ಅವರೂ ಓಲಿ ಅವರಂತೆಯೇ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ರಾಜಕಾರಣಿ. ಓಲಿ ಹಾಗೂ ದೇಉಬಾ ಅವರ ಪಕ್ಷಗಳ ನಡುವೆ ಸೈದ್ಧಾಂತಿಕ ಸಾಮ್ಯತೆ ಹೆಚ್ಚೇನೂ ಇಲ್ಲವಾಗಿರುವ ಕಾರಣ, ಎರಡೂ ಪಕ್ಷಗಳು ಒಟ್ಟಾಗಿ ಉಳಿಯಲಿವೆ ಎಂಬುದನ್ನು ಖಚಿತವಾಗಿ ಹೇಳಲಾಗದು. ಓಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವುದು ಇದು ನಾಲ್ಕನೆಯ ಬಾರಿ. ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಮೈತ್ರಿಧರ್ಮದ ಪಾಲನೆಯ ಸಾಮರ್ಥ್ಯ ತಮಗೆ ಇದೆ ಎಂಬುದನ್ನು ಓಲಿ ಅವರು ಇನ್ನಷ್ಟೇ ತೋರಿಸಿಕೊಡಬೇಕಿದೆ. ಈಗ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಮಾಡಬೇಕಾಗಿದೆ.

ಓಲಿ ಅವರು ಅಧಿಕಾರಕ್ಕೇರಿರುವುದು ಭಾರತಕ್ಕೆ ಒಂದಿಷ್ಟು ಕಳವಳ ಮೂಡಿಸುವಂಥ ವಿಚಾರವೇ. ಪ್ರಧಾನಿ ನರೇಂದ್ರ ಮೋದಿ ಅವರು ಓಲಿ ಅವರಿಗೆ ಶುಭಾಶಯ ಕೋರಿದ್ದಾರಾದರೂ ಓಲಿ ಅವರು ಭಾರತಕ್ಕಿಂತಲೂ ಹೆಚ್ಚಾಗಿ ಚೀನಾದ ಪರ ಒಲವು ಹೊಂದಿದ್ದಾರೆ ಎಂಬುದು ಗೊತ್ತಿರುವ ಸಂಗತಿ. ಭಾರತವು ನೇಪಾಳದ ವಿಚಾರದಲ್ಲಿ ಹೊಂದಿರುವ ನೀತಿಗಳ ವಿರುದ್ಧವಾಗಿ ಓಲಿ ಅವರು ಪ್ರಚಾರ ನಡೆಸಿದ್ದರು. ಭಾರತವು ಈ ಪ್ರದೇಶದಲ್ಲಿ ಪ್ರಭಾವವನ್ನು ಬೀರಲು ಯತ್ನಿಸುವ, ತೊಂದರೆಗಳನ್ನು ಸೃಷ್ಟಿಸುವ ದೊಡ್ಡಣ್ಣನಂತೆ ವರ್ತಿಸುತ್ತದೆ ಎಂಬ ಚಿತ್ರಣ ಮೂಡಿಸಲು ಯತ್ನಿಸಿದ್ದರು. ಓಲಿ ಅವರು ಈ ಹಿಂದೆ
ಪ್ರಧಾನಿಯಾಗಿದ್ದಾಗ, ಭಾರತ ಮತ್ತು ನೇಪಾಳದ ನಡುವೆ ಅಂತರ ಸೃಷ್ಟಿಸಲು ಬಹಳಷ್ಟು ಶ್ರಮಪಟ್ಟಿದ್ದರು. 2020ರಲ್ಲಿ ಓಲಿ ಅವರು ಭಾರತದ ಕೆಲವು ಪ್ರದೇಶಗಳು ನೇಪಾಳಕ್ಕೆ ಸೇರಬೇಕು ಎಂಬ ಆಧಾರರಹಿತ ಹಾಗೂ ಅನಿರೀಕ್ಷಿತ ಹೇಳಿಕೆ ನೀಡಿದ್ದರು. ಈ ಬಾರಿ ಓಲಿ ಅವರು ಮೈತ್ರಿಕೂಟದ ಸರ್ಕಾರದ ನಾಯಕತ್ವ ವಹಿಸಿದ್ದಾರೆ ಹಾಗೂ ಮೈತ್ರಿಕೂಟದಲ್ಲಿ ಅತಿಹೆಚ್ಚಿನ ಸದಸ್ಯ ಬಲ ಹೊಂದಿರುವ ನೇಪಾಳಿ ಕಾಂಗ್ರೆಸ್ ಪಕ್ಷವು ಭಾರತದ ಜೊತೆ ಹಿಂದಿನಿಂದ ಉತ್ತಮ ಸಂಬಂಧ ಹೊಂದಿದೆ ಎಂಬುದು ಈ ಬಾರಿ ಸಮಾಧಾನ ತರುವ ವಿಚಾರ. ನೇಪಾಳದ ರಾಜನು ಪಕ್ಷಕ್ಕೆ ಕಿರುಕುಳ ನೀಡಿದ್ದಾಗ, ಪಕ್ಷದ ನಾಯಕರು, ಅದರಲ್ಲೂ ಮುಖ್ಯವಾಗಿ ಕೊಯಿರಾಲಾ ಕುಟುಂಬದವರು ಭಾರತದಲ್ಲಿ ಆಶ್ರಯ ಪಡೆದಿದ್ದರು. ಹೀಗಾಗಿ, ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಭಾರತ–ನೇಪಾಳ ಸಂಬಂಧ ಚೆನ್ನಾಗಿರಬೇಕಾದುದರ ಮಹತ್ವ ಗೊತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.