ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಹಾಗೂ ಕೆಲವು ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ ನಂತರದಲ್ಲಿ ದೇಶದ ಎಲ್ಲೆಡೆ ಚುನಾವಣಾ ಕಾವು ಏರಿದೆ. ಲೋಕಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಆಯೋಗವು ಘೋಷಿಸಿದೆ. ಮೊದಲ ಹಂತವು ಏಪ್ರಿಲ್ 19ರಂದು ನಡೆಯಲಿದೆ, ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದೆ. ಮತಗಳ ಎಣಿಕೆಯು ಜೂನ್ 4ರಂದು ನಡೆಯಲಿದೆ. ದೇಶದ ಜನಜೀವನದ ಮೇಲೆ, ದೇಶದಲ್ಲಿನ ಚರ್ಚೆಗಳ ಮೇಲೆ ಚುನಾವಣೆಯು ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ದಟ್ಟವಾದ ಪ್ರಭಾವ ಬೀರಲಿದೆ. ಚುನಾವಣೆಯು ರಾಜಕಾರಣ ಹಾಗೂ ಆಡಳಿತಕ್ಕೆ ನೇರವಾಗಿ ಸಂಬಂಧಿಸಿದ್ದು. ಆದರೆ ಅದರ ವ್ಯಾಪ್ತಿ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. ರಾಜಕಾರಣ ಹಾಗೂ ಆಡಳಿತದ ಆಚೆಗೂ ಹತ್ತು ಹಲವು ಸಂಗತಿಗಳ ಮೇಲೆ ಚುನಾವಣೆಯು ಪ್ರಭಾವ ಬೀರುತ್ತದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಸಾಂಸ್ಕೃತಿಕ ಅಭಿವ್ಯಕ್ತಿಗಳೂ ಹೌದು. ಚುನಾವಣಾ ಪ್ರಚಾರ ಕಾರ್ಯಗಳು ಪಕ್ಷಗಳು, ಅಭ್ಯರ್ಥಿಗಳ ಕಡೆಯಿಂದ ವಿಶಿಷ್ಟವಾದ ಹಾಗೂ ವಿಭಿನ್ನವಾದ ಬಗೆಗಳಲ್ಲಿ ನಡೆಯುತ್ತವೆ. ಚುನಾವಣಾ ಅಭಿಯಾನದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಯಾರು, ಅವರು ಮಾತನಾಡುವ ವಿಷಯಗಳು ಯಾವುವು, ಅವರು ಏನನ್ನು ಮಾತನಾಡಬಹುದು ಎಂಬುದರ ಸ್ಥೂಲ ಚಿತ್ರಣ ಹಲವರ ಮನಸ್ಸಿನಲ್ಲಿ ಇರುತ್ತದೆಯಾದರೂ
ಮುಂದಿನ ದಿನಗಳಲ್ಲಿ ಅದು ಹೆಚ್ಚು ಸ್ಪಷ್ಟವಾದ ರೂಪ ಪಡೆದುಕೊಳ್ಳಲಿದೆ.

ಚುನಾವಣಾ ಪ್ರಕ್ರಿಯೆಯು ದೀರ್ಘಾವಧಿಗೆ ಇರಲಿರುವುದರ ಬಗ್ಗೆ ಕೆಲವು ಕಳವಳಗಳು ವ್ಯಕ್ತವಾಗಿವೆ. ದೀರ್ಘ ಅವಧಿಯ ಈ ಪ್ರಕ್ರಿಯೆಯು ಚುನಾವಣಾ ಅಭಿಯಾನದ ಮೇಲೆ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುತ್ತದೆ. ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನದ ಹಂತಗಳು 36 ದಿನಗಳಲ್ಲಿ ಪೂರ್ಣಗೊಂಡಿದ್ದವು. ಈ ಬಾರಿ ಅದು 46 ದಿನಗಳಿಗೆ ವಿಸ್ತರಿಸಿಕೊಂಡಿದೆ. ಚುನಾವಣಾ ಪ್ರಚಾರ ಕಾರ್ಯವು ಈಗಾಗಲೇ ಆರಂಭ ಆಗಿಬಿಟ್ಟಿದೆ. ಪ್ರಚಾರ ಕಾರ್ಯಕ್ಕೆ ಹೆಚ್ಚಿನ ದಿನಗಳು ದೊರೆತರೆ, ಹೆಚ್ಚು ಸಂಪನ್ಮೂಲ ಇರುವ ಪಕ್ಷಗಳಿಗೆ ಹೆಚ್ಚು ಅನುಕೂಲ ಆಗುತ್ತದೆ. ಕಡಿಮೆ ಸಂಪನ್ಮೂಲಗಳು ಇರುವ ಪಕ್ಷಗಳ ಪಾಲಿಗೆ ಅದು ಅನನುಕೂಲಕರ ಆಗುತ್ತದೆ. ಅಂದರೆ, ಸಮಾನ ಅವಕಾಶಗಳನ್ನು ನಿರಾಕರಿಸಿದಂತೆ ಆಗುತ್ತದೆ. ದೇಶದಲ್ಲಿ ಈಗಷ್ಟೇ ಬೇಸಿಗೆ ಕಾಲ ಶುರುವಾಗಿದೆ. ಬೇಸಿಗೆಯುದ್ದಕ್ಕೂ ಚುನಾವಣಾ ಅಭಿಯಾನ ನಡೆಯಲಿದೆ. ಬಿಸಿಲಿನ ಝಳ ತೀವ್ರವಾಗಿರುವ ಹೊತ್ತಿನಲ್ಲಿ ಪ್ರಚಾರ ಕಾರ್ಯ ನಡೆಸುವುದು
ಅಭ್ಯರ್ಥಿಗಳಿಗೆ, ಕಾರ್ಯಕರ್ತರಿಗೆ ಬಹಳ ಸವಾಲಿನ ಕೆಲಸವಾಗಲಿದೆ. ಚುನಾವಣೆ ಸಂದರ್ಭದಲ್ಲಿ ಭದ್ರತೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅಂದರೆ, ಭದ್ರತಾ ಸಿಬ್ಬಂದಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸುವುದಕ್ಕೆ, ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದಕ್ಕೆ ಹೆಚ್ಚಿನ ಸಮಯಾವಕಾಶದ ಅಗತ್ಯ ಇರುತ್ತದೆ. ಹೀಗಾಗಿಯೇ ಚುನಾವಣಾ ಪ್ರಕ್ರಿಯೆಯು ಸುದೀರ್ಘವಾಗಿರುತ್ತದೆ ಎಂಬ ವಾದವೊಂದು ಇದೆ. ಆದರೆ ಈ ವಾದವು ಹಿಂದಿನಷ್ಟು ಈಗ ಸಂಗತವಾಗಿ ಉಳಿದಿಲ್ಲ. ಚುನಾವಣಾ ಪ್ರಕ್ರಿಯೆಯು
ಸುದೀರ್ಘವಾದಷ್ಟೂ ಚುನಾವಣಾ ವೆಚ್ಚ ಹೆಚ್ಚಾಗುತ್ತದೆ. ಚುನಾವಣಾ ನೀತಿ ಸಂಹಿತೆಯು ಈಗ ದೇಶದಾದ್ಯಂತ ಜಾರಿಗೆ ಬಂದಿದೆ. ನೀತಿ ಸಂಹಿತೆಯು ಚುನಾವಣಾ ಪ್ರಕ್ರಿಯೆಯ ದೀರ್ಘ ಅವಧಿಗೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಹೊಣೆ ಈಗ ಚುನಾವಣಾ ಆಯೋಗದ ಮೇಲೆ ಇದೆ. ನೀತಿ ಸಂಹಿತೆಯು ಜಾರಿಯಲ್ಲಿ ಇರುವಷ್ಟು ಕಾಲ ಸರ್ಕಾರಗಳ ಮಾಮೂಲಿನ ಕೆಲಸಗಳಿಗೂ ತಡೆ ಬಿದ್ದಂತೆ ಆಗುತ್ತದೆ. ಅಲ್ಲದೆ, ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ಇನ್ನೊಂದು ರಾಜ್ಯದಲ್ಲಿ ಸರ್ಕಾರಿ ಕೆಲಸಗಳಿಗೆ ಅಡೆತಡೆಗಳು ಎದುರಾಗುವುದು ಸರಿಯಲ್ಲ. ಕೆಲವು ಪ್ರದೇಶಗಳ ಮತದಾರರು ಹಾಗೂ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಬರುವುದಕ್ಕೆ ಬಹಳ ಕಾಲ ಕಾಯಬೇಕು. ಕೆಲವು ರಾಜ್ಯಗಳ ಮತದಾರರು ಫಲಿತಾಂಶಕ್ಕಾಗಿ ಹಲವು ವಾರಗಳವರೆಗೆ ಕಾಯಬೇಕು.

ಈಚಿನ ವರ್ಷಗಳಲ್ಲಿ ದೇಶದ ಚುನಾವಣಾ ಪ್ರಕ್ರಿಯೆಯ ಅವಧಿಯು ಹೆಚ್ಚಾಗುತ್ತ ಬಂದಿದೆ. 2004ರಲ್ಲಿ ಚುನಾವಣಾ ಪ್ರಕ್ರಿಯೆಯು 21 ದಿನಗಳಲ್ಲಿ ಪೂರ್ಣಗೊಂಡಿತ್ತು. 2009ರಲ್ಲಿ ಅದು 28 ದಿನಗಳಲ್ಲಿ, 2014ರಲ್ಲಿ 37 ದಿನಗಳಲ್ಲಿ ಹಾಗೂ 2019ರಲ್ಲಿ 36 ದಿನಗಳಲ್ಲಿ ಪೂರ್ಣಗೊಂಡಿತ್ತು. ಈ ಬಾರಿಯ ಚುನಾವಣೆಯು 46 ದಿನಗಳ ಅವಧಿಯಲ್ಲಿ ನಡೆಯಲಿದೆ. ಇಷ್ಟು ದೀರ್ಘಾವಧಿಯು ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು ಎಂಬ ತತ್ವಕ್ಕೆ ಪೂರಕವಾಗಿಲ್ಲ. ಚುನಾವಣೆ
ಅಂದರೆ ಅದು ಮನುಷ್ಯ ಪ್ರಯತ್ನದ ಫಲ. ದೈಹಿಕ, ಮಾನಸಿಕ, ಭಾವನಾತ್ಮಕ, ಆರ್ಥಿಕ ಅಂಶಗಳು ಮನುಷ್ಯನ ವರ್ತನೆಯ ಮೇಲೆ ಪರಿಣಾಮ ಉಂಟುಮಾಡುವ ರೀತಿಯಲ್ಲಿಯೇ ಚುನಾವಣೆಗಳ ಮೇಲೆಯೂ ಪ್ರಭಾವ ಬೀರುತ್ತವೆ. ಇಲ್ಲಿ ಹವಾಮಾನ ಕೂಡ ಪರಿಗಣಿಸಬೇಕಾದ ಒಂದು ಅಂಶ. ಇವೆಲ್ಲವನ್ನೂ ಪರಿಗಣಿಸಿ ಚುನಾವಣಾ ಆಯೋಗವು ಅತ್ಯಂತ ಹೆಚ್ಚು ಸೂಕ್ತವಾದ, ಚುನಾವಣೆಯನ್ನು ಅತ್ಯಂತ ಹೆಚ್ಚು ನ್ಯಾಯಸಮ್ಮತವಾಗಿ ಹಾಗೂ ಅತ್ಯಂತ ಹೆಚ್ಚು ದಕ್ಷವಾಗಿ ನಡೆಸಲು ಅನುವು ಮಾಡಿಕೊಡುವ ವೇಳಾಪಟ್ಟಿಯನ್ನು ರೂಪಿಸಬೇಕು. ಈ ಬಾರಿಯ ಚುನಾವಣೆಯ ವೇಳಾಪಟ್ಟಿಯನ್ನು ಆಯೋಗವು ಇನ್ನಷ್ಟು ಹೆಚ್ಚು ಸಮಂಜಸವಾಗಿ ಸಿದ್ಧಪಡಿಸಬಹುದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.