ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ತುಂಬುವಂತಹ ಪ್ರತಿಭೆಗಳನ್ನು ಹುಡುಕುವ ಸವಾಲು ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಮುಂದಿದೆ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಮಾದರಿಗೆ ವಿದಾಯ ಹೇಳಿರುವುದರಿಂದ ಭಾರತದ ಕ್ರಿಕೆಟ್ನಲ್ಲಿ ಒಂದು ಸುವರ್ಣ ಯುಗದ ಅಂತ್ಯವಾದಂತಾಗಿದೆ. ಈ ಹದಿನೈದು ವರ್ಷಗಳ ಅವಧಿಯಲ್ಲಿ ಈ ಇಬ್ಬರೂ ನವಪೀಳಿಗೆಯನ್ನು ಪ್ರಭಾವಿಸಿದ ರೀತಿ ಅನನ್ಯ. ಟ್ವೆಂಟಿ–20 ಕ್ರಿಕೆಟ್ ಭರಾಟೆಯ ನಡುವೆಯೂ ಟೆಸ್ಟ್ ಮಾದರಿಗೆ ಹೊಸ ಚೈತನ್ಯ ತುಂಬಿದ ಶ್ರೇಯ ಈ ದಿಗ್ಗಜರಿಗೇ ಸಲ್ಲಬೇಕು. ಕ್ರಿಕೆಟ್ನ ಮೂರೂ ಮಾದರಿಗಳಲ್ಲಿ ಈ ಆಟಗಾರರು ಒಂದೇ ರೀತಿ ಮಿಂಚಿದರೂ ಟೆಸ್ಟ್ ಕ್ರಿಕೆಟ್ ಮೇಲೆಯೇ ಅವರ ಒಲವು ಹೆಚ್ಚಾಗಿತ್ತು ಎಂಬುದನ್ನು ಅಭಿಮಾನಿಗಳೆಲ್ಲ ಬಲ್ಲರು. ಸಚಿನ್ ತೆಂಡೂಲ್ಕರ್ ಬಳಿಕ ಭಾರತೀಯ ಕ್ರಿಕೆಟ್ನ ಅಸ್ಮಿತೆಯನ್ನು ಉಜ್ವಲವಾಗಿ ಬೆಳಗಿದ ಕ್ರಿಕೆಟಿಗ ಎಂದರೆ ಅದು ಕೊಹ್ಲಿ ಅವರೇ ಎಂಬುದರಲ್ಲಿ ಎರಡು ಮಾತಿಲ್ಲ. ದಶಕಕ್ಕೂ ಮೀರಿದ ತಮ್ಮ ಆಟದಲ್ಲಿ ವಿರಾಟ್ ಬರೀ ರನ್ ಗಳಿಸಲಿಲ್ಲ – ನಿರೀಕ್ಷೆಗಳನ್ನು ಮರು ವ್ಯಾಖ್ಯಾನಿಸಿದರು, ದೊಡ್ಡ ಸವಾಲುಗಳನ್ನು ಮೆಟ್ಟಿ ನಿಂತರು, ಭಾರತೀಯ ಕ್ರೀಡಾಶಕ್ತಿಯ ಮಾನವ ರೂಪವಾಗಿ ಕಂಗೊಳಿಸಿದರು. ವಿದೇಶಿ ನೆಲದಲ್ಲೂ ಗೆಲುವಿನ ರೂವಾರಿಯಾಗಿ ಮೆರೆದರು. ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ವಿರಾಟ್ ಅಗ್ರಗಣ್ಯರು. ಅವರ ನಾಯಕತ್ವದ ಅವಧಿ ಎಂದರೆ ಅದು ಭಾರತ ತಂಡದ ಪಾಲಿಗೊಂದು ಮಹಾನ್ ‘ವಿರಾಟಪರ್ವ’. ಪ್ರತಿಯೊಬ್ಬ ಕ್ರೀಡಾಪಟುವಿನ ವೃತ್ತಿ ಜೀವನದಲ್ಲಿ ಏಳುಬೀಳುಗಳು ಸಹಜ. ಆದರೆ, ವೈಫಲ್ಯಗಳನ್ನೆಲ್ಲ ಮೆಟ್ಟಿನಿಂತು ರೋಹಿತ್ ಮತ್ತು ವಿರಾಟ್ ತೋರಿದ ಸಾಧನೆ ಅನನ್ಯವಾದುದು. ವಿಶ್ವದ ಶ್ರೇಷ್ಠ ಬ್ಯಾಟರ್ಗಳಾಗುವುದರ ಜೊತೆಗೆ ನಾಯಕತ್ವದಲ್ಲಿಯೂ ಯಶಸ್ವಿಯಾದವರು ಅವರು. ತಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯ ಮೂಲಕ ಯುವಪೀಳಿಗೆಗೆ ಮಾದರಿಯಾದವರು ಕೂಡ.

ಹೊಸ ಪೀಳಿಗೆಯ ಕ್ರಿಕೆಟಿಗರಿಗೆ ಫಿಟ್ನೆಸ್ ಹವ್ಯಾಸ ರೂಢಿಸಿದ ಕೊಹ್ಲಿ ಇನ್ನೂ ಕೆಲವು ವರ್ಷ ಆಡುವ ಸಾಮರ್ಥ್ಯ ಹೊಂದಿದ್ದಾರೆ. 14 ವರ್ಷಗಳ ಅವಧಿಯಲ್ಲಿ 123 ಟೆಸ್ಟ್ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೊಹ್ಲಿ ಅವರ ಜನಪ್ರಿಯತೆ ಮತ್ತು ಬ್ರ್ಯಾಂಡ್ ಮೌಲ್ಯ ಉತ್ತುಂಗದಲ್ಲಿದೆ. ಆದರೆ, 36 ವರ್ಷ ವಯಸ್ಸಿನ ಈ ತಾರಾ ವರ್ಚಸ್ಸಿನ ಆಟಗಾರ ಯುವ ಆಟಗಾರರಿಗೆ ದಾರಿ ಬಿಟ್ಟುಕೊಟ್ಟಿದ್ದಾರೆ. ಅವರ ಸ್ಥಾನವನ್ನು ತುಂಬುವಂತಹ ಪ್ರತಿಭೆಗಳನ್ನು ಹುಡುಕುವ ಸವಾಲು ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಮುಂದಿದೆ. ದಶಕದ ಹಿಂದೆ ರಾಹುಲ್ ದ್ರಾವಿಡ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಅಲ್ಪಸಮಯದ ಅಂತರದಲ್ಲಿ ನಿವೃತ್ತಿ ಹೊಂದಿದಾಗಲೂ ಇಂತಹದೇ ಪರಿಸ್ಥಿತಿ ಇತ್ತು. ಪ್ರಸ್ತುತ ಕಾಲಘಟ್ಟದಲ್ಲಿ ದೇಶದುದ್ದಕ್ಕೂ ನೂರಾರು ಪ್ರತಿಭಾವಂತ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ಅವರಲ್ಲಿಯೇ ಕೆಲವರು ರೋಹಿತ್–ವಿರಾಟ್ ಪರಂಪರೆ ಮುಂದುವರಿಸುವ ಸಾಮರ್ಥ್ಯ ಹೊಂದಿರಲೂಬಹುದು. ರೋಹಿತ್ ಮತ್ತು ಕೊಹ್ಲಿ ಅವರ ಆಟದ ದಾಖಲೆಗಳನ್ನು ಮುರಿಯುವಂತಹ ಆಟಗಾರರೂ ಸಿಗಬಹುದು. ಆದರೆ, ಅವರ ಬದ್ಧತೆ, ಸ್ನೇಹಪರತೆ ಮತ್ತು ಕ್ರೀಡಾಸ್ಫೂರ್ತಿಯ ವ್ಯಕ್ತಿತ್ವವನ್ನು ಸರಿಗಟ್ಟುವಂತಹವರು ಲಭಿಸುವರೇ ಎಂಬ ಪ್ರಶ್ನೆಯೂ ಮೂಡಿದೆ. ಅದಕ್ಕೆಲ್ಲ ಮುಂಬರುವ ಕಾಲವೇ ಉತ್ತರ ನೀಡಬೇಕು. ಈ ದಿಗ್ಗಜರ ನಿವೃತ್ತಿಯು ಒಂದು ಮಹತ್ವದ ಚರ್ಚೆಗೂ ಕಾರಣವಾಗಿದೆ. ಭಾರತದ ಕ್ರಿಕೆಟ್ ಬೆಳವಣಿಗೆಗೆ ಅಮೂಲ್ಯ ಕಾಣಿಕೆ ಕೊಟ್ಟ ಇಂತಹ ಆಟಗಾರರಿಗೆ ಗೌರವಯುತವಾದ ಬೀಳ್ಕೊಡುಗೆ ಲಭಿಸಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವು ಆಟಗಾರರು ಪ್ರತಿಪಾದಿಸಿದ್ದಾರೆ. 12 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರಿಗೆ ವಿದಾಯದ ಟೆಸ್ಟ್ ಸರಣಿ ಆಯೋಜಿಸುವ ಮೂಲಕ ಅರ್ಥಪೂರ್ಣ ಬೀಳ್ಕೊಡುಗೆ ನೀಡಲಾಗಿತ್ತು. ತಮ್ಮ ವಿದಾಯದ ಪಂದ್ಯಗಳ ನಂತರ ಅಭಿಮಾನಿಗಳ ಸಮ್ಮುಖದಲ್ಲಿ ನಿವೃತ್ತಿ ಪಡೆದು ಕ್ರೀಡಾಂಗಣದಿಂದ ನಿರ್ಗಮಿಸುವ ಅವಕಾಶವನ್ನು ರೋಹಿತ್ ಮತ್ತು ವಿರಾಟ್ ಅವರಿಗೂ ಬಿಸಿಸಿಐ ಕಲ್ಪಿಸಬೇಕಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಟ್ವೆಂಟಿ–20 ಕ್ರಿಕೆಟ್ ಅಬ್ಬರದಲ್ಲಿಯೂ ಟೆಸ್ಟ್ ಮಾದರಿಯ ಘನತೆ ಉಳಿಸಿ ಬೆಳೆಸಲು ಕಾರಣರಾದ ರೋಹಿತ್ ಮತ್ತು ವಿರಾಟ್ ಅವರಂತೂ ಅರ್ಥಪೂರ್ಣವಾದ ಬೀಳ್ಕೊಡುಗೆಗೆ ಹೆಚ್ಚು ಅರ್ಹರಾಗಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.