ಪಹಲ್ಗಾಮ್ನಲ್ಲಿ ಉಗ್ರರ ದಾಳಿ, ಅದಕ್ಕೆ ಪ್ರತಿಕ್ರಿಯೆಯಾಗಿ ನಡೆಸಿದ ‘ಸಿಂಧೂರ ಕಾರ್ಯಾಚರಣೆ’ ಮತ್ತು ಭಯೋತ್ಪಾದನೆಯನ್ನು ಸರ್ಕಾರದ ನೀತಿಯಾಗಿಸಿಕೊಂಡಿರುವ ಪಾಕಿಸ್ತಾನದಂತಹ ವಿಚಾರಗಳಲ್ಲಿ ಭಾರತದ ನಿಲುವನ್ನು ವಿವರಿಸಲು ಬಹುಪಕ್ಷಗಳ ಸಂಸದೀಯ ನಿಯೋಗವನ್ನು ನಿಯೋಜನೆ ಮಾಡಿ ಸರ್ಕಾರವು ಉತ್ತಮ ಕೆಲಸ ಮಾಡಿದೆ. ಈ ಪ್ರಕ್ರಿಯೆಯು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಮತ್ತು ಬಾಹ್ಯ ಬೆದರಿಕೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ದೃಢ ನಿರ್ಧಾರವನ್ನು ತೋರಿಸುತ್ತದೆ. ರಾಜತಂತ್ರಜ್ಞರು, ಪರಿಣತರು, ದೇಶದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ಪ್ರತಿನಿಧಿಗಳು ನಿಯೋಗದ ಭಾಗವಾಗಿದ್ದಾರೆ. ಅಮೆರಿಕ, ಐರೋಪ್ಯ ಒಕ್ಕೂಟದ ದೇಶಗಳು, ರಷ್ಯಾ, ಜಪಾನ್, ಸೌದಿ ಅರೇಬಿಯಾ ಮತ್ತು ಕೊಲ್ಲಿಯ ಇತರ ರಾಷ್ಟ್ರಗಳು, ಇಂಡೊನೇಷ್ಯಾ ಹಾಗೂ ಆಫ್ರಿಕಾದ ದೇಶಗಳಿಗೆ ನಿಯೋಗಗಳು ಭೇಟಿ ನೀಡಲಿವೆ. ಆದರೆ, ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಚೀನಾ ಮತ್ತು ಟರ್ಕಿಯನ್ನು ನಿಯೋಗಗಳ ಭೇಟಿಯಿಂದ ಹೊರಗೆ ಇರಿಸಿರುವುದು ಗಮನಾರ್ಹ. ಪಾಕಿಸ್ತಾನವು ಅತಿಕ್ರಮಣಕಾರಿ ದೇಶ ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬಿಂಬಿಸುವ ಭಾರತದ ಪ್ರಯತ್ನಗಳಿಗೆ ನಿಯೋಗಗಳ ವಿವರಣೆಯು ಪೂರಕವಾಗಬಹುದು.

ರಾಜತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿ ಸರ್ವಪಕ್ಷ ನಿಯೋಗಗಳನ್ನು ಇತರ ದೇಶಗಳಿಗೆ ಭಾರತವು ಈ ಹಿಂದೆಯೂ ಕಳುಹಿಸಿತ್ತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಂದೆ ಪಾಕಿಸ್ತಾನವು ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಣಯ ಮಂಡಿಸಿದ್ದರ ವಿರುದ್ಧ ವಿವರಗಳನ್ನು ನೀಡಲು ಅಟಲ್ ಬಿಹಾರಿ ವಾಜಪೇಯಿ ಮತ್ತು ಫಾರೂಕ್ ಅಬ್ದುಲ್ಲಾ ಅವರಿದ್ದ ನಿಯೋಗವನ್ನು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು 1994ರಲ್ಲಿ ಕಳುಹಿಸಿದ್ದರು. ಮುಂಬೈ ಮೇಲೆ 2008ರಲ್ಲಿ ದಾಳಿಯಾದ ಬಳಿಕ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರು ಸರ್ವ ಪಕ್ಷ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸಿದ್ದರು. ತಪ್ಪು ಗ್ರಹಿಕೆಗಳನ್ನು ನಿವಾರಿಸುವುದು ಮತ್ತು ಭಾರತದ ನಿಲುವನ್ನು ಪರಿಣಾಮಕಾರಿಯಾಗಿ ತಿಳಿಸುವುದು ಈಗಿನ ನಿಯೋಗಗಳ ಹೊಣೆಯಾಗಿದೆ. ಪಹಲ್ಗಾಮ್ ದಾಳಿಯ ನಂತರದ ಸಂಘರ್ಷದಲ್ಲಿ ಭಾರತಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಬೆಂಬಲ ಸಿಕ್ಕಿಲ್ಲ. ಭಾರತ ಮತ್ತು ಪಾಕಿಸ್ತಾನವನ್ನು ಸಮಾನವಾಗಿ ಕಾಣುವ ಪ್ರವೃತ್ತಿ ಕೆಲವು ದೇಶಗಳಿಗೆ ಇದೆ. ಆದರೆ, ಹೀಗೆ ನೋಡುವುದರಲ್ಲಿಯೇ ಲೋಪ ಇದೆ ಎಂಬುದನ್ನು ಜಗತ್ತಿಗೆ ತಿಳಿಸಬೇಕಿದೆ– ಭಾರತವು ಭಯೋತ್ಪಾದನೆಯ ಸಂತ್ರಸ್ತ ದೇಶವಾದರೆ, ಪಾಕಿಸ್ತಾನವು ಭಯೋತ್ಪಾದನೆಯ ಮೂಲವಾಗಿದೆ. ಅಲ್ಲಿನ ಸರ್ಕಾರ ಮತ್ತು ಸೇನೆಯು ಭಯೋತ್ಪಾದನೆಗೆ ಬೆಂಬಲವಾಗಿ ನಿಂತಿವೆ. ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಾದರೆ, ಪಾಕಿಸ್ತಾನವನ್ನು ಸಶಸ್ತ್ರ ಪಡೆಗಳು ಮುನ್ನಡೆಸುತ್ತವೆ. ಈ ವ್ಯತ್ಯಾಸಗಳು ಬಹಳ ಮುಖ್ಯವಾದವು ಮತ್ತು ಅವು ಜಗತ್ತಿನ ಕಣ್ಣಿನಿಂದ ಮರೆಯಾಗಬಾರದು.

ನಿಯೋಗಗಳಿಗೆ ಸದಸ್ಯರ ಆಯ್ಕೆ ವಿಚಾರದಲ್ಲಿ ಅದರಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿರುವುದು ದುರದೃಷ್ಟಕರ. ಸದಸ್ಯರನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಜೊತೆಗೆ ಸಮಾಲೋಚನೆ ನಡೆಸಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ಗೆ ಇದೆ. ಕಾಂಗ್ರೆಸ್ ಸೂಚಿಸಿದ ನಾಲ್ಕು ಹೆಸರುಗಳ ಪೈಕಿ ಒಂದನ್ನು ಮಾತ್ರ ಸರ್ಕಾರ ಸ್ವೀಕರಿಸಿದೆ. ಒಂದು ನಿಯೋಗದ ನೇತೃತ್ವವನ್ನು ಶಶಿ ತರೂರ್ ಅವರಿಗೆ ವಹಿಸುವ ಮೂಲಕ ಸರ್ಕಾರವು ರಾಜಕಾರಣ ಮಾಡಿದೆ. ಈ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಲೋಭನೆಯನ್ನು ಸರ್ಕಾರವು ಮೀರಿ ನಿಲ್ಲಬೇಕಿತ್ತು. ‘ಸಿಂಧೂರ ಕಾರ್ಯಾಚರಣೆ’ಯೂ ಸೇರಿದಂತೆ ವಿವಿಧ ವಿಚಾರಗಳಲ್ಲಿ ತರೂರ್ ಅವರು ಇತ್ತೀಚೆಗೆ ವ್ಯಕ್ತಪಡಿಸಿದ ವಿಚಾರಗಳು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವಿಗೆ ಅನುಗುಣವಾಗಿ ಇರಲಿಲ್ಲ. ಅದೇನೇ ಇದ್ದರೂ ತರೂರ್ ಅವರು ವಿಚಾರಗಳನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಬಲ್ಲ ನಾಯಕ. ಹಾಗೆಯೇ ಅಂತರರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆಯಲ್ಲಿ ಅನುಭವಿಯೂ ಹೌದು. ಒಟ್ಟಾರೆ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಪರಿಗಣನೆ ಆಗಿರಬೇಕಿದ್ದ ಈಗಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಅತಿರೇಕದ್ದೂ ಒರಟುತನದಿಂದ ಕೂಡಿದ್ದೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.