ಕೊರೊನಾ ಸೋಂಕು ಪ್ರಸಾರ ತಡೆಗಟ್ಟುವ ದಿಸೆಯಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ರಾತ್ರಿ ಕರ್ಫ್ಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಪ್ರಿಲ್ 10ರಿಂದ 20ರವರೆಗೆ ಬೆಂಗಳೂರು ಸಹಿತ ರಾಜ್ಯದ ಎಂಟು ನಗರಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ವಿಧಿಸಿರುವುದರಿಂದ ನಿಜಕ್ಕೂ ಸೋಂಕು ಪ್ರಸಾರ ತಡೆ ಸಾಧ್ಯವಿದೆಯೇ? ಕೊರೊನಾ ಸಾಂಕ್ರಾಮಿಕವು ರಾತ್ರಿ 10ರ ಬಳಿಕ ದಾಳಿ ಮಾಡಿ ಬೆಳಿಗ್ಗೆ ಐದು ಗಂಟೆಗೆಲ್ಲಾ ಮಾಯ ಆಗಿಬಿಡುತ್ತದೆಯೇ? ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ, ತುಮಕೂರು, ಕಲಬುರ್ಗಿ, ಬೀದರ್ ನಗರಗಳಲ್ಲಿ ಮಾತ್ರ ರಾತ್ರಿಯ ವೇಳೆ ಕೊರೊನಾ ಹೆಚ್ಚು ವ್ಯಾಪಿಸುತ್ತಿದೆಯೇ? ಸರ್ಕಾರದ ಈ ನಿರ್ಧಾರವು ತರ್ಕಹೀನ ಮತ್ತು ಅವೈಜ್ಞಾನಿಕ ಎನ್ನದೇ ನಿರ್ವಾಹವಿಲ್ಲ. ಈ ಹಿಂದೆಯೂ ಹೀಗೆ ಕೆಲವು ಕಡೆ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು. ಆದರೆ ಅದರಿಂದ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲ ಎನ್ನುವ ವಾಸ್ತವವನ್ನು ಸರ್ಕಾರ ಮರೆಯಬಾರದು. ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಆದರೆ, ಈ ದಿಸೆಯಲ್ಲಿ ನಿರೀಕ್ಷಿತ ವೇಗದಲ್ಲಿ ಕೆಲಸ ಆಗುತ್ತಿಲ್ಲ.ರಾತ್ರಿ 10ರ ಬಳಿಕ ಊಟ– ತಿಂಡಿಗೆಂದು ಹೊರಗೆ ಓಡಾಡುವವರಿಂದ ಕೊರೊನಾ ಹೆಚ್ಚುತ್ತಿದೆ ಎಂದು ಸರ್ಕಾರ ತಿಳಿದುಕೊಂಡಿದ್ದರೆ ಅದರಷ್ಟು ಮೂರ್ಖತನ ಇನ್ನೊಂದಿಲ್ಲ. ರಾಜ್ಯದ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ತಡೆಯಿಲ್ಲದೆ ನಡೆದಿವೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಒಂದು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಪಕ್ಷದ ನಾಯಕರು ಹಾಗೂ ಸಚಿವರು ಬೀಡು ಬಿಟ್ಟು ಸಾವಿರಾರು ಜನರನ್ನು ಗುಂಪು ಸೇರಿಸುತ್ತಿದ್ದಾರೆ. ವಿರೋಧ ಪಕ್ಷಗಳೂ ಭರ್ಜರಿ ಮೆರವಣಿಗೆ, ರೋಡ್ ಷೋಗಳನ್ನು ಹಮ್ಮಿಕೊಂಡಿವೆ. ಈ ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಸಮಾವೇಶಗಳಿಂದ ಕೊರೊನಾ ಹರಡುವುದಿಲ್ಲ ಎಂದು ಸರ್ಕಾರ ಭಾವಿಸಿದೆಯೇ? ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಪ್ರತ್ಯೇಕ ಐ.ಟಿ. ಘಟಕಗಳನ್ನೇ ಹೊಂದಿರುವ ರಾಜಕೀಯ ಪಕ್ಷಗಳು, ಈಗ ಚುನಾವಣಾ ಪ್ರಚಾರಕ್ಕೆ ಸಾವಿರಾರು ಜನರನ್ನು ಸೇರಿಸುವ ಬದಲು ಮತದಾರರನ್ನು ವಾಟ್ಸ್ಆ್ಯಪ್, ಮೊಬೈಲ್ ದೂರವಾಣಿ ಕರೆ, ಸಾಮಾಜಿಕ ಜಾಲತಾಣಗಳ ಮೂಲಕವೇ ತಲುಪಿದರೆ ಒಳ್ಳೆಯದಲ್ಲವೇ? ಅಂತಹ ನಿರ್ಧಾರ ಕೈಗೊಳ್ಳುವ ಮೂಲಕ ಕೊರೊನಾ ಸೋಂಕು ಪ್ರಸಾರ ತಡೆಯಲು ಎಲ್ಲ ರಾಜಕಾರಣಿಗಳೂ ತಮ್ಮ ಬದ್ಧತೆಯನ್ನು ಪ್ರದರ್ಶಿಸಬಹುದಲ್ಲವೇ? ಸಾರ್ವಜನಿಕರು ಕೂಡ ತಮ್ಮ ಹೊಣೆಯರಿತು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಈ ಮಧ್ಯೆ ಕೊರೊನಾ ತಡೆಗೆ ಹಲವು ಜಿಲ್ಲಾಧಿಕಾರಿಗಳು ಮನಸೋ ಇಚ್ಛೆ ಕ್ರಮಗಳನ್ನು ಕೈಗೊಂಡ ವರದಿಗಳು ಬಂದಿವೆ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯು ಖುದ್ದಾಗಿ ರಸ್ತೆಗಳಲ್ಲಿ, ಬಸ್ ನಿಲ್ದಾಣ
ಗಳಲ್ಲಿ ಅಡ್ಡಾಡಿ ಮಾಸ್ಕ್ ಇಲ್ಲದವರನ್ನು ದಂಡಿಸಿದ ಚಿತ್ರಗಳು ಪ್ರಕಟವಾಗಿವೆ. ಅದೇ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಮಂಗಳೂರಿನ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣ್ಯರ ಸಹಿತ ನೂರಾರು ಜನ ಸೇರಿದ್ದರು. ಹೀಗೆ ಜನ ಒಟ್ಟಿಗೆ ಸೇರುವುದು ಸೋಂಕು ಪ್ರಸಾರಕ್ಕೆ ಕಾರಣವಾಗಬಹುದು ಎಂದು ಜಿಲ್ಲಾ ಆಡಳಿತಕ್ಕೆ ಅನ್ನಿಸಿಲ್ಲ. ಕೊಡಗು ಜಿಲ್ಲಾಧಿಕಾರಿಯು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಜನರ ಪ್ರವೇಶವನ್ನು ನಿಷೇಧಿಸಿ ಆಜ್ಞೆ ಹೊರಡಿಸಿ, ಬಳಿಕ ವಾಪಸು ಪಡೆದ ಪ್ರಸಂಗವೂ ನಡೆದಿದೆ. ‘ಮೈಸೂರಿಗೆ ಬೆಂಗಳೂರು ಮತ್ತಿತರ ನಗರಗಳಿಂದ ಬರುವ ಜನರು 72 ಗಂಟೆಗಳ ಅವಧಿಯೊಳಗೆ ಪಡೆದಿರುವ ಆರ್ಟಿ ಪಿಸಿಆರ್ ನೆಗೆಟಿವ್ ವರದಿಗಳನ್ನು ತೋರಿಸಬೇಕು’ ಎಂದು ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವು ವಿವಾದಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅನುಮತಿಯಿಲ್ಲದೆ ಜಿಲ್ಲಾಡಳಿತವು ಕೋವಿಡ್ ನಿಯಂತ್ರಣದ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಖುದ್ದು ಸರ್ಕಾರವೇ ಪ್ರಕಟಿಸಿದ ಬಳಿಕವೂ ಹಲವು ಜಿಲ್ಲೆಗಳಲ್ಲಿ ಇಂತಹ ಕ್ರಮಗಳನ್ನು ಕೈಗೊಂಡಿದ್ದುದು, ಸೋಂಕು ಪ್ರಸರಣ ತಡೆಯಲ್ಲಿ ಸರ್ಕಾರದ ಅಂಗಸಂಸ್ಥೆಗಳ ಮಧ್ಯೆಯೇ ಸಮನ್ವಯವಿಲ್ಲ ಎನ್ನುವುದನ್ನು ಸೂಚಿಸುತ್ತದೆ.ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಆದರೆ ಅದರ ನಿಯಂತ್ರಣದ ವಿಷಯದಲ್ಲಿ ಹೊಂದಿರುವ ಗೊಂದಲಗಳಿಂದ ಸರ್ಕಾರ ಮೊದಲು ಹೊರಬರಬೇಕು. ರಾತ್ರಿ ಕರ್ಫ್ಯೂವಿನಂತಹ ಅರ್ಥಹೀನ ಕ್ರಮಗಳನ್ನು ಕೈಬಿಟ್ಟು ಎಲ್ಲರಿಗೂ ಶೀಘ್ರವೇ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈ ಮಧ್ಯೆ ಬೆಂಗಳೂರಿನಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೋವಿಡ್ ರೋಗಿಯೊಬ್ಬರು ಮೃತಪಟ್ಟ ದಾರುಣ ಘಟನೆಯೂ ಆಡಳಿತದಲ್ಲಿ ಸಮನ್ವಯದ ಕೊರತೆ ಇದೆ ಎನ್ನುವುದನ್ನೇ ಬಿಂಬಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.