ಮಧ್ಯಪ್ರದೇಶ ತಂಡವು ಇದೇ ಮೊದಲ ಬಾರಿ ಮಹತ್ವದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿದೆ. 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಮಣಿಸಿದ ಆದಿತ್ಯ ಶ್ರೀವಾಸ್ತವ ನಾಯಕತ್ವದ ಮಧ್ಯಪ್ರದೇಶ ಬಳಗವು ಟ್ರೋಫಿಗೆ ಮುತ್ತಿಕ್ಕಿತು. ಪೃಥ್ವಿ ಶಾ ನಾಯಕತ್ವದ ಮುಂಬೈ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿತು. ಆದರೆ ಸಂಯಮ ಮತ್ತು ಯೋಜನಾಬದ್ಧವಾದ ಆಟದ ಮೂಲಕ ಮಧ್ಯಪ್ರದೇಶ ಮೇಲುಗೈ ಸಾಧಿಸಿತು. ಟ್ವೆಂಟಿ–20 ಕ್ರಿಕೆಟ್ ಅಬ್ಬರದಲ್ಲಿ ಸಿಕ್ಸರ್, ಬೌಂಡರಿಗಳಷ್ಟೇ ಕ್ರಿಕೆಟ್ ಅಲ್ಲ ಎನ್ನುವ ಸಂದೇಶವನ್ನು ನೀಡಿದ್ದು ಈ ಪಂದ್ಯದ ಹೆಗ್ಗಳಿಕೆ. ಏಳು ದಶಕಗಳಿಂದ ಆಡುತ್ತಿರುವ ಮಧ್ಯಪ್ರದೇಶವು ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದು ಇದು ಎರಡನೇ ಸಲ. 23 ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ನಲ್ಲಿ ಕರ್ನಾಟಕದ ಎದುರು ಸೋತಿತ್ತು. ಆಗ ಮಧ್ಯಪ್ರದೇಶ ತಂಡಕ್ಕೆ ಚಂದ್ರಕಾಂತ್ ಪಂಡಿತ್ ನಾಯಕರಾಗಿದ್ದರು. ಇದೀಗ ಅವರು ಮುಖ್ಯ ಕೋಚ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. ಅವರ ವೃತ್ತಿಜೀವನದಲ್ಲಿ ಇದೊಂದು ಅವಿಸ್ಮರಣೀಯ ಸಾಧನೆ.

ಈ ಬಾರಿಯ ರಣಜಿ ಟೂರ್ನಿ ಇನ್ನೂ ಕೆಲವು ಕಾರಣಗಳಿಗಾಗಿ ನೆನಪಿನಲ್ಲಿ ಉಳಿಯುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂರನೇ ರಣಜಿ ಪಂದ್ಯ ಇದಾಗಿತ್ತು. ಅಲ್ಲದೆ ಜೂನ್ನಲ್ಲಿ ನಡೆದ ಮೊದಲ ರಣಜಿ ಹಣಾಹಣಿಯೂ ಹೌದು. ಈ ಹಿಂದೆ ಟೂರ್ನಿಯು ನವೆಂಬರ್ನಿಂದ ಫೆಬ್ರುವರಿಯವರೆಗೆ ಆಯೋಜನೆಗೊಳ್ಳುತ್ತಿತ್ತು. ಆದರೆ ಕೋವಿಡ್ ಬಿಕ್ಕಟ್ಟು, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮೆಗಾ ಹರಾಜು ಮತ್ತು ಈ ಲೀಗ್ನ 15ನೇ ಆವೃತ್ತಿಯ ಟೂರ್ನಿಯ ಆಯೋಜನೆಯಿಂದಾಗಿ ರಣಜಿ ಟೂರ್ನಿಯ ವೇಳಾಪಟ್ಟಿ ಬದಲಾಯಿತು. ಲೀಗ್ ಹಂತದ ಪಂದ್ಯಗಳು ಫೆಬ್ರುವರಿ– ಮಾರ್ಚ್ನಲ್ಲಿ ನಡೆದಿದ್ದವು. ಸುಮಾರು ಎರಡು ತಿಂಗಳು ನಡೆದ ಐಪಿಎಲ್ ಅಬ್ಬರದ ನಂತರ ರಣಜಿ ನಾಕೌಟ್ ಪಂದ್ಯಗಳನ್ನು ಆಯೋಜಿಸಲಾಯಿತು. ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ
ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದಿದ್ದು ಅಭೂತಪೂರ್ವ. ಇನ್ನೊಂದು ಪಂದ್ಯ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಎಂಟರ ಘಟ್ಟದಲ್ಲಿ ಎರಡು ವಿಶ್ವದಾಖಲೆಗಳಿಗೂ ಉದ್ಯಾನನಗರಿ ಸಾಕ್ಷಿಯಾಯಿತು. ಉತ್ತರಾಖಂಡದ ಎದುರು 725 ರನ್ಗಳಿಂದ ಜಯಿಸಿದ ಮುಂಬೈ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತಿ ದೊಡ್ಡ ಅಂತರದ ಗೆಲುವಿನ ದಾಖಲೆ ಬರೆಯಿತು. ಜಾರ್ಖಂಡ್ ಎದುರಿನ ಪಂದ್ಯದ ಒಂದೇ ಇನಿಂಗ್ಸ್ನಲ್ಲಿ ಬಂಗಾಳದ ಒಂಬತ್ತು ಬ್ಯಾಟರ್ಗಳು ಅರ್ಧಶತಕಗಳನ್ನು ಗಳಿಸಿದ್ದು ಕೂಡ ದಾಖಲೆ. ಕೆಲವು ಪ್ರತಿಭಾನ್ವಿತ ಆಟಗಾರರೂ ಗಮನ ಸೆಳೆದರು. ಟೂರ್ನಿಯಲ್ಲಿ ಒಟ್ಟು 982 ರನ್ ಗಳಿಸಿದ ಮುಂಬೈನ ಸರ್ಫರಾಜ್ ಖಾನ್, ಸ್ಪಿನ್ನರ್ ಶಮ್ಸ್ ಮಲಾನಿ, 658 ರನ್ ಗಳಿಸಿದ ಮಧ್ಯಪ್ರದೇಶದ ರಜತ್ ಪಾಟೀದಾರ್ ಮತ್ತು ಬೌಲರ್ ಕುಮಾರ್ ಕಾರ್ತಿಕೇಯ ಸಿಂಗ್ ಅದರಲ್ಲಿ ಪ್ರಮುಖರು. ಇವರೆಲ್ಲರೂ ಈಗ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ.

ಈ ಸಾಧನೆಗಳು ಒಂದೆಡೆಯಾದರೆ, ರಣಜಿ ಟೂರ್ನಿಯ ಪ್ರಮುಖ ಘಟ್ಟದ ಪಂದ್ಯಗಳಿಗೆ ಆತಿಥ್ಯ ನೀಡಿದ ಕರ್ನಾಟಕದ ತಂಡ ಮಾತ್ರ ನಿರಾಸೆ ಮೂಡಿಸಿತು. ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಅವರಂತಹ ಅನುಭವಿಗಳು ತಂಡದಲ್ಲಿದ್ದೂ ಎಂಟರ ಘಟ್ಟದಲ್ಲಿ ಜಯದ ಅವಕಾಶವನ್ನು ಕೈಚೆಲ್ಲಿತು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಸೋತ ರೀತಿಯು ಬೇಸರ ತರಿಸಿದೆ ಎಂದು ನಾಯಕ ಮನೀಷ್ ಪಾಂಡೆ ಅವರೇ ಹೇಳಿದ್ದಾರೆ. ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎನ್ನುವುದು ದಿಟ. ತಂಡದ ಆಯ್ಕೆಯ ಕುರಿತು ಅಪಸ್ವರಗಳೆದ್ದಿವೆ. ವೇಗದ ಬೌಲರ್ ಪ್ರಸಿದ್ಧಕೃಷ್ಣ ಮತ್ತು ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರಿಗೆ ವಿಶ್ರಾಂತಿ ನೀಡಿದ್ದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ. 2015ರಲ್ಲಿ ಪ್ರಶಸ್ತಿ ಗೆದ್ದ ನಂತರ ನಡೆದ ಟೂರ್ನಿಗಳಲ್ಲಿ ತಂಡವು ನಾಕೌಟ್ ಹಂತದಲ್ಲಿ ಇಂತಹ ಸೋಲುಗಳನ್ನು ಅನುಭವಿಸುತ್ತಿದೆ. ಇದಕ್ಕೆ ಕಾರಣಗಳನ್ನು ಪತ್ತೆ ಮಾಡಿ ಸರಿಪಡಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಡಬೇಕು. ಇನ್ನು ಕೆಲವೇ ತಿಂಗಳುಗಳಲ್ಲಿ ಮುಂದಿನ ದೇಶಿ ಕ್ರಿಕೆಟ್ ಋತು ಆರಂಭವಾಗಲಿದೆ. ಆ ಹೊತ್ತಿಗಾದರೂ ಎಲ್ಲ ಲೋಪಗಳನ್ನು ಸರಿಪಡಿಸಿಕೊಂಡು ತಂಡವನ್ನು ಬಲಪಡಿಸಬೇಕು. ರಾಜ್ಯ ಕ್ರಿಕೆಟ್ ತಂಡದ ಭವ್ಯ ಪರಂಪರೆ ಮರುಕಳಿಸುವಂತೆ ಆಗಬೇಕು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಎಚ್ಚೆತ್ತುಕೊಳ್ಳಬೇಕು. ಐಪಿಎಲ್ಗೆ ನೀಡುವಷ್ಟೇ ಮಹತ್ವವನ್ನು ದೇಶಿ ಕ್ರಿಕೆಟ್ಗೂ ಕೊಡಬೇಕು. ರಣಜಿ ಟೂರ್ನಿಯಲ್ಲಿ ಅಂಪೈರ್ ಮರುಪರಿಶೀಲನಾ ವ್ಯವಸ್ಥೆ ಜಾರಿಗೆ ದುಡ್ಡಿನ ಕೊರತೆ ಇದೆ ಎಂದು ಹೇಳುವುದು ಶ್ರೀಮಂತ ಮಂಡಳಿಗೆ ಶೋಭೆ ತರುವುದಿಲ್ಲ. ಈ ಟೂರ್ನಿಯ ಪಂದ್ಯಗಳಲ್ಲಿ ಹಲವು ಅನುಮಾನಾಸ್ಪದ ತೀರ್ಪುಗಳನ್ನು ಕೆಲವು ಅಂಪೈರ್ಗಳು ನೀಡಿದ್ದಾರೆ. ಉತ್ತಮ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ತಂತ್ರಜ್ಞಾನದ ಬಳಕೆ ಅನಿವಾರ್ಯ. ಭಾರತದ ಕ್ರಿಕೆಟ್ ಬೆಳವಣಿಗೆಯಲ್ಲಿ ರಣಜಿ ಟೂರ್ನಿ ಪಾತ್ರ ದೊಡ್ಡದು. ಅದನ್ನು ಉಳಿಸಿ ಬೆಳೆಸುವುದು ಮಂಡಳಿಯ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.