‘ಡಿಜಿಟಲ್ ಸಾಕ್ಷರತೆ’ಯನ್ನು ಕೂಡ ‘ಸಾಕ್ಷರತೆ’ಯ ಭಾಗವಾಗಿಯೇ ಕಾಣಲಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ, ಶಾಲೆಗಳಲ್ಲಿ ಮಕ್ಕಳು ಸ್ಮಾರ್ಟ್ಫೋನ್ ಬಳಸುವುದರ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಆದರೆ ಶಾಲೆಗಳಲ್ಲಿ ಮಕ್ಕಳು ಸ್ಮಾರ್ಟ್ಫೋನ್ ಬಳಸುವುದು ಜವಾಬ್ದಾರಿಯುತವಾಗಿರಬೇಕು ಎನ್ನುವ ಮೂಲಕ ಹೈಕೋರ್ಟ್, ಕಾಲದ ಅಗತ್ಯಕ್ಕೆ ಸ್ಪಂದಿಸುವ ಕೆಲಸ ಮಾಡಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ಫೋನ್ ಬಳಸುವುದು ಯಾವ ಬಗೆಯಲ್ಲಿ ಇರಬೇಕು ಎಂಬ ವಿಚಾರವಾಗಿ ಹೈಕೋರ್ಟ್ ಒಂದಿಷ್ಟು ಮಾರ್ಗಸೂಚಿಗಳನ್ನು ಆದೇಶದಲ್ಲಿ ಹೇಳಿದೆ. ಈ ಮಾರ್ಗಸೂಚಿಗಳು ಸ್ಮಾರ್ಟ್ಫೋನ್ನ ಜವಾಬ್ದಾರಿಯುತ ಬಳಕೆಗೆ ಒತ್ತು ನೀಡಿವೆ. ಇವು ಸ್ವಾಗತಾರ್ಹ ವಾದ ಮಾರ್ಗಸೂಚಿಗಳು. ಸ್ಮಾರ್ಟ್ಫೋನ್ಗಳು ಇಂದು ನಿತ್ಯಜೀವನದ ಅವಿಭಾಜ್ಯ ಅಂಗ. ತಂದೆ–ತಾಯಿ ಅನುಕ್ಷಣವೂ ಬಳಕೆ ಮಾಡುವ ಸ್ಮಾರ್ಟ್ಫೋನ್ಗಳನ್ನು ಮಕ್ಕಳು ಶಾಲೆಗಳಲ್ಲಿ ಬಳಸಬಾರದು ಎಂದು ಬಯಸುವುದು ಸದ್ಯದ ಸ್ಥಿತಿಯಲ್ಲಿ ಅಪೇಕ್ಷಣೀಯ ಅಲ್ಲ. ಇಂಟರ್ನೆಟ್ ಮೂಲಕ ಲಭ್ಯವಾಗುವ ಅಗಾಧ ಮಾಹಿತಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಹಿತಮಿತವಾಗಿ ಬಳಸಿಕೊಂಡು ಕಲಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಚೇತೋಹಾರಿಯಾಗಿ ಮಾಡುವುದು, ಆನ್ಲೈನ್ ಕಲಿಕೆಯ ಸಾಧ್ಯತೆಗಳನ್ನು ಬಳಸಿ ಹಳ್ಳಿಯ ಮೂಲೆಯಲ್ಲಿ ಇರುವ ಮಕ್ಕಳಿಗೂ ಉತ್ಕೃಷ್ಟವಾದ ಕಲಿಕಾ ಸಾಮಗ್ರಿಗಳು ಸಿಗುವಂತೆ ಮಾಡುವುದು, ಸ್ಮಾರ್ಟ್ಫೋನ್ಗಳನ್ನು ಬಳಸಿ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸಿ ಕೊಳ್ಳುವುದ ರತ್ತ ಶಿಕ್ಷಣ ತಜ್ಞರ ಆಲೋಚನೆಗಳು ಹರಿಯುತ್ತಿರುವ ಈ ಹೊತ್ತಿನಲ್ಲಿ, ಶಾಲೆಗಳಲ್ಲಿ ಮಕ್ಕಳು ಸ್ಮಾರ್ಟ್ಫೋನ್ ಬಳಸುವುದರ ಮೇಲೆ ಸಂಪೂರ್ಣ ನಿಷೇಧ ಹೇರುವುದು ಪ್ರತಿಗಾಮಿ ನಡೆಯೇ ಆಗುತ್ತದೆ.

ಆದರೆ ಕೋರ್ಟ್ನ ಆದೇಶದಲ್ಲಿ ಉಲ್ಲೇಖವಾಗಿರುವಂತೆ ಸ್ಮಾರ್ಟ್ಫೋನ್ಗಳ ಬಳಕೆಯು ಬಹಳ
ಜವಾಬ್ದಾರಿಯುತವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಮಕ್ಕಳು, ಹದಿಹರೆಯದವರು ಸ್ಮಾರ್ಟ್
ಫೋನ್ಗಳನ್ನು ಬಳಸುವುದರಲ್ಲಿ ಒಳಿತೂ ಇದೆ, ಕೆಡುಕೂ ಇದೆ ಎಂಬುದು ಸತ್ಯ. ಹೀಗಿದ್ದರೂ ಕೆಡುಕು
ಗಳನ್ನು ನಿವಾರಿಸುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆಯ ಮೇಲೆ ಸಂಪೂರ್ಣವಾಗಿ ನಿಷೇಧ ಹೇರುವುದು, ಆ ತಂತ್ರಜ್ಞಾನದ ಒಳಿತುಗಳನ್ನು ಕೂಡ ನಿರಾಕರಿಸುವ ನಡೆಯಾಗುತ್ತದೆ. ಇದರಿಂದ ಲಾಭ ಇಲ್ಲ. ಶಾಲಾ ಆಡಳಿತ ವ್ಯವಸ್ಥೆಗಳು, ಶಾಲಾ ಶಿಕ್ಷಕರು ಈ ವಿಚಾರದಲ್ಲಿ ಹೊಸಕಾಲಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಸ್ಮಾರ್ಟ್ ಫೋನ್ಗಳನ್ನು ಜವಾಬ್ದಾರಿ ಯುತವಾಗಿ ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಶಿಕ್ಷಕರು ಮತ್ತು ಶಾಲೆಗಳ ಮುಖ್ಯಸ್ಥರು ಮಕ್ಕಳಿಗೆ ಪಾಠ ಹೇಳುವ ಕೆಲಸ ಮಾಡಬೇಕು. ಇದಕ್ಕಾಗಿ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸುವ ಕೆಲಸವು ಸರ್ಕಾರಗಳಿಂದ ಆಗಬೇಕು. ಸ್ಮಾರ್ಟ್ಫೋನ್ಗಳ ಜವಾಬ್ದಾರಿಯುತ ಬಳಕೆಯನ್ನು ಹೇಳಿಕೊಡುವ ಕೆಲಸದಲ್ಲಿ ಪಾಲಕರ ಹೊಣೆಗಾರಿಕೆಯೂ ಬಹಳ ದೊಡ್ಡದಿದೆ. ಆ ಜವಾಬ್ದಾರಿಯನ್ನು ಅವರು ಮುತುವರ್ಜಿಯಿಂದ ನಿಭಾಯಿಸಬೇಕು.

ಮಕ್ಕಳು ಸ್ಮಾರ್ಟ್ಫೋನ್ ಬಳಕೆ ಮಾಡುವ ಸಂದರ್ಭದಲ್ಲಿ ಎದುರಾಗಬಹುದಾದ ಬಹುದೊಡ್ಡ ಅಪಾಯಗಳಲ್ಲಿ ಒಂದು, ಅವರು ಇಂಟರ್ನೆಟ್ ಮೂಲಕ ಅಪರಿಚಿತರಿಂದ ಕಿರುಕುಳಕ್ಕೆ ಗುರಿಯಾಗುವುದು. ಇದು ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟುಮಾಡಬಹುದು. ಇಂತಹ ಪರಿಸ್ಥಿತಿ ಎದುರಾದರೆ ಅದನ್ನು ನಿರ್ವಹಿಸುವುದು ಹೇಗೆ, ಅದನ್ನು ತಕ್ಷಣ ಪಾಲಕರ ಗಮನಕ್ಕೆ ತರುವುದರ ಮಹತ್ವ ಏನು ಎಂಬುದನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು. ಅಲ್ಲದೆ, ಮಕ್ಕಳು ಇಂಟರ್ನೆಟ್ ಮೂಲಕ ವಿವಿಧ ವಿಷಯಗಳ ಬಗ್ಗೆ ಶೋಧ ನಡೆಸುವಾಗ ಅವರ ವಯಸ್ಸಿಗೆ ಸೂಕ್ತವಲ್ಲದ ವಸ್ತು–ವಿಷಯವು ಅಲ್ಲಿ ಕಾಣಿಸಿಕೊಳ್ಳದೇ ಇರುವಂತೆ ಮಾಡಲು ಅಗತ್ಯವಿರುವ ನಿಯಂತ್ರಣ ವ್ಯವಸ್ಥೆಯನ್ನು ಸ್ಮಾರ್ಟ್ಫೋನ್ಗೆ ಅಳವಡಿಸಬೇಕಿರುವುದು ಪಾಲಕರ ಕಡೆಯಿಂದ ಆಗಬೇಕಿರುವ ಮತ್ತೊಂದು ಮಹತ್ವದ ಕೆಲಸ. ತಮ್ಮ ಮಗು ಸ್ಮಾರ್ಟ್ಫೋನ್ ಅನ್ನು ಹೇಗೆ ಬಳಕೆ ಮಾಡುತ್ತಿದೆ ಎಂಬ ಬಗ್ಗೆ ಮನೆಗಳಲ್ಲಿ ಪಾಲಕರು ನಿಗಾ ಇರಿಸಬೇಕು. ಮನೆಯಲ್ಲಿ ಮಗು ಸ್ಮಾರ್ಟ್ಫೋನ್ ಬಳಕೆ ಮಾಡುವ ಬಗೆ ಹೇಗೆ ಇರುತ್ತದೆ ಎಂಬುದು ಆ ಮಗು ಅದನ್ನು ಶಾಲೆಯಲ್ಲಿ ಹೇಗೆ ಬಳಸಲು ಬಯಸುತ್ತದೆ ಎಂಬುದರ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹೀಗಾಗಿ, ಸ್ಮಾರ್ಟ್ಫೋನ್ ಬಳಕೆಗೆ ಮಗುವಿಗೆ ಅವಕಾಶ ಕೊಡುವ ಹಾಗೂ ಬಳಕೆಯ ಮೇಲೆ ಸದಾಶಯದಿಂದ ಕೆಲವು ನಿರ್ಬಂಧಗಳನ್ನು ವಿಧಿಸುವ ಕೆಲಸದಲ್ಲಿ ಪಾಲಕರು ಮತ್ತು ಶಿಕ್ಷಕರು ಸಮನ್ವಯದಿಂದ ಮುಂದಕ್ಕೆ ಸಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.