ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಪುನಃ ನೀಡಬೇಕು ಎಂಬ ಬೇಡಿಕೆಯನ್ನು ಅಲ್ಲಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮತ್ತೊಮ್ಮೆ
ಪ್ರಸ್ತಾಪಿಸಿದ್ದಾರೆ. ‘ರಾಜ್ಯದ ಸ್ಥಾನಮಾನ ಕುರಿತ ಚರ್ಚೆಯು ಕೊನೆಗೊಂಡಿಲ್ಲ’ ಎಂದು ಅವರು ಹೇಳಿದ್ದಾರೆ. ನೀತಿ ಆಯೋಗದ ಈಚಿನ ಕಡತವೊಂದು ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟವಾಗಿ ಪ್ರಸ್ತಾಪ ಮಾಡಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಈ ಕಡತವನ್ನು ಪ್ರಧಾನಿಯವರ ಜೊತೆ ಹಾಗೂ ನೀತಿ ಆಯೋಗದ ಸದಸ್ಯರ ಜೊತೆ ಹಂಚಿಕೊಳ್ಳಲಾಗಿದೆ ಎಂದಿದ್ದಾರೆ. ಬೇಡಿಕೆಗೆ ಬಲ ನೀಡಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂಬ ಸಲಹೆಗೆ ಅವರು ಒಪ್ಪಿಗೆ ಸೂಚಿಸಿಲ್ಲ. ಆದರೆ, ಅವರ ನಿಲುವು ಬಹಳ ಸ್ಪಷ್ಟವಾಗಿದೆ. ಅಬ್ದುಲ್ಲಾ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ ಈ ಬೇಡಿಕೆಯನ್ನು ಹಲವು ಬಾರಿ ಮಂಡಿಸಿದ್ದಾರೆ.

ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಆದಷ್ಟು ಬೇಗ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ 2023ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯದ ಸ್ಥಾನವನ್ನು ಮತ್ತೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ಇತ್ತಿದ್ದಾರೆ. ಆದರೆ, ಅವರಿಬ್ಬರೂ ಇದನ್ನು ಕಾಲಮಿತಿಯಲ್ಲಿ ಮಾಡುವುದಾಗಿ ಹೇಳಿಲ್ಲ.
ಭರವಸೆಗಳನ್ನು ನೀಡಲಾಗಿದ್ದರೂ ರಾಜ್ಯದ ಸ್ಥಾನವನ್ನು ಮತ್ತೆ ನೀಡುವ ಉದ್ದೇಶ ನಿಜವಾಗಿಯೂ ಇದೆಯೇ ಎಂಬುದರ ಬಗ್ಗೆ ಗಂಭೀರ ಅನುಮಾನಗಳು ಇವೆ.

ಪಹಲ್ಗಾಮ್ನಲ್ಲಿ ಏಪ್ರಿಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕಾರಣಕ್ಕೆ ರಾಜ್ಯದ ಸ್ಥಾನಮಾನ ಕುರಿತ ‘ಚರ್ಚೆ’ಯ ಬಗ್ಗೆ ಪ್ರಸ್ತಾಪ ಆಗಿದೆ. ಭಯೋತ್ಪಾದಕ ದಾಳಿಯು ಈ ಬೇಡಿಕೆ
ಈಡೇರಿಸುವುದನ್ನು ಕಷ್ಟವಾಗಿಸಿದೆ ಎಂಬ ದೃಷ್ಟಿಕೋನವು ತಪ್ಪು. ದಾಳಿಯ ನಂತರದಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಮತ್ತೆ ನೀಡುವ ಅಗತ್ಯವು ಮೊದಲಿಗಿಂತಲೂ ಹೆಚ್ಚಾಗಿದೆ. ಈಗಿನ
ವ್ಯವಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಸರ್ಕಾರಕ್ಕೆ ಬಹಳ ಸೀಮಿತ ಅಧಿಕಾರ ಇದೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರ, ಅಂದರೆ ಹಿರಿಯ ಅಧಿಕಾರಿಗಳ ವರ್ಗಾವಣೆ ಹಾಗೂ ಅವರ ನಿಯೋಜನೆಗೆ ಸಂಬಂಧಿಸಿದ ಅಧಿಕಾರವು ಚುನಾಯಿತರಲ್ಲದ ಲೆಫ್ಟಿನೆಂಟ್ ಗವರ್ನರ್ ಬಳಿ ಇರುತ್ತದೆ. ಈ ವಿಚಾರಗಳಲ್ಲಿ ರಾಜ್ಯ ಸರ್ಕಾರಕ್ಕೆ ಪಾತ್ರವೇ ಇಲ್ಲವಾಗಿದೆ. ಭದ್ರತೆಯನ್ನು
ಖಾತರಿಪಡಿಸುವಲ್ಲಿ ಅಗತ್ಯವಿರುವ ಒಂದು ಪ್ರಮುಖ ಹೆಜ್ಜೆ ಎಂದರೆ, ಆ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳುವುದು. ಈಗಿನ ಆಡಳಿತದಲ್ಲಿ ರಾಜ್ಯದ ಜನರಿಗೆ ಭದ್ರತೆಗೆ ಸಂಬಂಧಿಸಿದ
ವ್ಯವಸ್ಥೆಯಲ್ಲಿ ಪಾತ್ರವೇ ಇಲ್ಲ. ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ವಿಚಾರದಲ್ಲಿ ಚುನಾಯಿತ ಸರ್ಕಾರವು ಹೊರಗಿನವರಂತೆ ಇರಬೇಕಾಗಿದೆ. ಪಹಲ್ಗಾಮ್ ದಾಳಿಯ ನಂತರ ನಡೆದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಆಹ್ವಾನ ಇರಲಿಲ್ಲ.

ಕಾಶ್ಮೀರದ ಭದ್ರತಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ, ಸಶಸ್ತ್ರ ಪಡೆಗಳು, ಗುಪ್ತಚರ ವ್ಯವಸ್ಥೆ ಹಾಗೂ ಲೆಫ್ಟಿನೆಂಟ್ ಗವರ್ನರ್ ಮಾತ್ರವೇ ಭಾಗೀದಾರರಾಗಿ ಇರಬಾರದು. ಈ ವ್ಯವಸ್ಥೆಯಲ್ಲಿ ಅಲ್ಲಿನ ಜನರನ್ನು ಪ್ರತಿನಿಧಿಸುವ ಸರ್ಕಾರ ಕೂಡ ಪ್ರಮುಖ ಭಾಗೀದಾರನಾಗಿ ಇರಬೇಕು. ಕೇಂದ್ರ ಸರ್ಕಾರ ಹಾಗೂ ಜನರ ನಡುವಿನ ವಿಶ್ವಾಸವು ಬಹಳ ಮುಖ್ಯವಾಗುತ್ತದೆ. ಚುನಾಯಿತ ಸರ್ಕಾರವೊಂದಕ್ಕೆ ಅದಕ್ಕೆ ಕೊಡಬೇಕಿರುವ ಅಧಿಕಾರವನ್ನು ಕೊಡದೇ ಇದ್ದಾಗ ಅವಿಶ್ವಾಸದ ಸಂದೇಶವೊಂದನ್ನು ರವಾನಿಸಿದಂತೆ ಆಗುತ್ತದೆ.
ಭರವಸೆಗಳನ್ನು ಮಾತ್ರ ನೀಡಿ, ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳದೇ ಇದ್ದಾಗ ಆ ಅವಿಶ್ವಾಸವು ಹೆಚ್ಚಾಗುತ್ತದೆ. ಭಯೋತ್ಪಾದನೆಯು ರಾಜಕೀಯ ಸಮಸ್ಯೆಯೂ ಹೌದು. ಅದನ್ನು ರಾಜಕೀಯವಾಗಿಯೂ ನಿರ್ವಹಿಸುವ ಕೆಲಸ ಆಗಬೇಕು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ಮತ್ತೆ ನೀಡಿದರೆ ಅಲ್ಲಿನ ಪ್ರಜಾತಂತ್ರವು ವಾಸ್ತವಕ್ಕೆ ಇನ್ನಷ್ಟು ಹತ್ತಿರವಾಗುತ್ತದೆ. ಅಲ್ಲಿನ ಆಡಳಿತವು ಇನ್ನಷ್ಟು
ಜನಕೇಂದ್ರಿತವಾಗುತ್ತದೆ. ಜನರ ಭಾಗೀದಾರಿಕೆ ಹೆಚ್ಚಾಗುತ್ತದೆ. ರಾಜ್ಯದ ಸ್ಥಾನ ನೀಡುವುದನ್ನು
ರಾಷ್ಟ್ರ ಮತ್ತು ಜನರ ನಡುವಿನ ಒಪ್ಪಂದದಂತೆ ಕಾಣಬೇಕು. ಕಾಶ್ಮೀರದ ಒಳಿತಿಗಾಗಿ, ದೇಶದ ಒಳಿತಿಗಾಗಿ ಅದನ್ನು ಗೌರವಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.