ಭಾರತದ ಪ್ರದೇಶ ಚೀನಾಕ್ಕೆ
ರಷ್ಯದ ತಪ್ಪು ಭೂಪಟ: ರಾಜ್ಯಸಭೆಯಲ್ಲಿ ಗಲಭೆ, ಗೊಂದಲ, ಸಭ್ಯಾತ್ಯಾಗ

ನವದೆಹಲಿ, ಆ.6– ರಷ್ಯ, ತನ್ನ ಭೂಪಟಗಳಲ್ಲಿ ಭಾರತದ ಬಹು ಭಾಗಗಳನ್ನು ಚೀನಾಕ್ಕೆ ಸೇರಿದೆಯೆಂದು ತೋರಿಸಿ ನಡೆಸಿರುವ ‘ಭೂಪಟಾಕ್ರಮಣ’ವನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿರುವುದರ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಗಿ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಮತ್ತು ಜನಸಂಘ ಸದಸ್ಯರು ಸಭಾತ್ಯಾಗ ಮಾಡಿದರು.

ಇಂಥ ಭೂಪಟಗಳನ್ನು ರಷ್ಯವು ಕಳೆದ ಹದಿನಾಲ್ಕು ವರ್ಷಗಳಿಂದ ಮುದ್ರಿಸುತ್ತಿದೆಯೆಂದೂ, ಅದನ್ನು ರಷ್ಯವು ಸರಿಪಡಿಸುವಂತೆ ಮಾಡುವುದರಲ್ಲಿ ಭಾರತದ ಸರ್ಕಾರ ವಿಫಲವಾಗಿದೆಯೆಂದೂ ಅವರು ಆಪಾದಿಸಿದರು.

ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ: ಲೋಕಸಭೆ ಸದಸ್ಯರ ಅಸಮಾಧಾನ

ನವದೆಹಲಿ, ಆ.6– ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಲೋಕಸಭೆ ಇಂದು ನಲವತ್ತು ನಿಮಿಷಗಳ ಚರ್ಚೆ ನಡೆಸಿದಾಗ ಗೊಂದಲಮಯ ವಾತಾವರಣ ಉಂಟಾಯಿತು.

ಯೋಜನಾ ಆಯೋಗದ ಜತೆ ಸಮಾಲೋಚಿಸಿ ಸಂಪುಟ ಕಾರ್ಯಾಲಯದ ಉದ್ಯೋಗ ಕಮಿಷನರ್ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುತ್ತಿರುವರೆಂದು ಪ್ರಶ್ನೋತ್ತರ ವೇಳೆಯಲ್ಲಿ ಕಾರ್ಮಿಕ ಸಚಿವ ಡಿ. ಸಂಜೀವಯ್ಯನವರಿತ್ತ ಉತ್ತರ ಸದಸ್ಯರಿಗೆ ಸಮಾಧಾನ ತರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.