ನಾಡಿನ ಹಿರಿಯ ವಿಚಾರವಾದಿ ಬರಹಗಾರರಾಗಿದ್ದ ಗೌರೀಶ ಕಾಯ್ಕಿಣಿ ತಮ್ಮ ಪ್ರಸಿದ್ಧ ‘ವಾಲ್ಮೀಕಿ ತೂಕಡಿಸಿದಾಗ’ ವಿಮರ್ಶಾ ಲೇಖನದಲ್ಲಿ ಆಶಾವಾದದ ಬಗ್ಗೆ ಹೇಳುತ್ತಾರೆ: ಅಶೋಕ ವನದಲ್ಲಿ ನಿಟ್ಟುಸಿರಿನ ಮೇಲೆ ಕಂಬನಿಗಳನ್ನು ಪೋಣಿಸುತ್ತ, ವಿಯೋಗದ ದಿನಗಳನ್ನು ಎಣಿಸುತ್ತ ಕುಳಿತ ಸೀತೆಗೂ ಇದೇ ಆಶೆಯೇ ಒಂದು ಆಧಾರ. ಆಶಾವಾದಿಯಾದವನಿಗೆ ನೂರು ವರ್ಷ ಕಾದರೂ ಆನಂದ ಲಭಿಸುತ್ತದಂತೆ. ಸುಮಿತ್ರೆ, ಭರತ, ಸೀತೆ, ಶಬರಿ, ಅಹಲ್ಯೆ ಮುಂತಾದವರು ಇದೇ ಒಂದು ಆಶಾವಾದದಿಂದ ಉತ್ಸಾಹ ತಾಳಿ ಬದುಕಿದರು. ಹೀಗೆ ಬದುಕಿಗೆ ಶ್ವಾಸವಿದ್ದಂತೆ ಬಾಳಿಗೆ ವಿಶ್ವಾಸ. ಅದುವೇ ಶ್ರದ್ಧೆಯಾಗಿ ನಿಷ್ಠೆಯಾಗಿ ಭಕ್ತಿಯಾಗಿ ಮೊಗ ಪಡೆಯುತ್ತದೆ– ಶ್ರದ್ಧಾಮಯಃ ಅಯಂ ಪುರುಷಃ. ಇದುವೇ ರಾಮನ ಕರ್ತವ್ಯನಿಷ್ಠೆ. ಸೀತೆಯ ಪತಿಭಕ್ತಿ, ಹನುಮಂತನ ಸ್ವಾಮಿನಿಷ್ಠೆ. ಈ ಶ್ರದ್ಧೆಯ ಹೊರಮೈ (ಸಹನೆ) ತಿತೇಕ್ಷೆ- ತಾಳುವ ತ್ರಾಣ. ಇದನ್ನು ತೋರಿದವರು ರಾಮಾಯಣದಲ್ಲಿ ಯಶಸ್ವಿಯಾದರು, ಕೃತಾರ್ಥರಾದರು. ಅಹಲ್ಯೆ ಕಾದು ನಿಂತಳು. ಭರತ ಕಾದು ನಿಂತನು. ಸೀತೆ ಕಾದು ನಿಂತಳು. ಶಬರಿ ಕಾದು ನಿಂತಳು. ಸಂಪಾತಿ ಕಾದು ನಿಂತನು. ಈ ಕಾಯುವ ಕೆಚ್ಚಿನಿಂದ ತಿತೀಕ್ಷೆಯ ಒರೆಗಲ್ಲ ಮೇಲೆ ಅವರ ತತ್ವಪರೀಕ್ಷೆ ಆಯಿತು. ಆದರೆ, ಇದಕ್ಕೆ ಎರುದ್ಧವಾಗಿ ತಾಳ್ಮೆಗೆಟ್ಟವರು ಗೋಳಿಗೆ ಕೇಡಿಗೆ ಗುರಿಯಾದರು...’

ವರ್ತಮಾನದ ‘ಅಚ್ಚೇ ದಿನ’ಗಳನ್ನು ಗಮನಿಸುವಾಗ, ಪ್ರಪಂಚದ ಇತರ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧದ ಸರ್ವನಾಶವನ್ನು ನೋಡಿದಾಗ ಈ ಕಾಲ ಯಾವ ಮನ್ವಂತರಕ್ಕಾಗಿ ಕಾಯುತ್ತಿದೆ, ಈ ಲೋಕದ ಮನುಷ್ಯರು ಎದುರುನೋಡುತ್ತಿರುವ ಒಳ್ಳೆಯ ಕಾಲ, ಒಳ್ಳೆಯ ದಿನಗಳು ಯಾವುವು ಹಾಗಾದರೆ ಎಂಬ ಜಿಜ್ಞಾಸೆ ಹುಟ್ಟುತ್ತದೆ. ಯುದ್ಧ ರಾಜ್ಯಕ್ಕೆ, ರಾಜಕೀಯಕ್ಕೆ ಬೇಕೇ ಹೊರತು ಅಲ್ಲಿ ವಾಸಿಸುವವರಿಗೆ ಬೇಕಿಲ್ಲ. ಜನರು ಬಯಸುವುದು ನೆಮ್ಮದಿಯ ಬದುಕು ಮಾತ್ರ. ಸಂಪತ್ತು ಸಮೃದ್ಧಿಯಿಲ್ಲದಿದ್ದರೂ ಅಡ್ಡಿಯಿಲ್ಲ. ಆದರೆ, ಶಾಂತಿಯುತ ಬದುಕು ಬೇಕು. ಅದಕ್ಕಾಗಿ ಎಷ್ಟು ಜನ್ಮವಾದರೂ ಕಾಯಬಲ್ಲ, ಎಷ್ಟೇ ಕಷ್ಟಗಳನ್ನು ಸಹಿಸಬಲ್ಲ ತಾಳ್ಮೆ ಮನುಷ್ಯರಿಗಿದೆ. ರಷ್ಯಾ– ಉಕ್ರೇನ್ ಯುದ್ಧ, ಗಾಜಾ ಪಟ್ಟಿಯ ಸರ್ವನಾಶಗಳನ್ನು ನೋಡಿದರೆ ಇಡೀ ಊರಿಗೆ ಊರೇ, ಪಟ್ಟಣಗಳೇ ನೆಲಸಮವಾಗಿವೆ. ಯುದ್ಧದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ ನರಮೇಧಗಳನ್ನು ಇತಿಹಾಸವೆಂದಾದರೂ ಮರೆಯಬಹುದೇ? ಒಂದು ದೇಶ ಇನ್ನೊಂದು ದೇಶವನ್ನು ಧ್ವಂಸಮಾಡಿ ದಿಗ್ವಿಜಯವನ್ನು ಸಾಧಿಸಿದರೇನಂತೆ, ಎಲ್ಲಾ ಆಧಿಪತ್ಯಗಳಿಗೂ ಕೊನೆಯೆಂಬುದಿದೆ. ಪರಾಕ್ರಮಿ, ಸಕಲಕಲಾ ಪಾಂಡಿತ್ಯವಿದ್ದ ಪರಮಶಿವಭಕ್ತ ರಾವಣನ ಅಂತ್ಯವಾಗಲಿಲ್ಲವೇ? ಹಿಟ್ಲರ್ ಕೂಡ ಹೊರತಾಗಲಿಲ್ಲವಲ್ಲ.

ಈ ಜಗತ್ತೂ ಕಾಯುತ್ತಿದೆ, ಶಾಂತಿಸ್ಥಾಪನೆಗಾಗಿ. ಆದರೆ ಕಾಯುವವರನ್ನು ಕಾಣದಂತೆ ಅಧಿಕಾರ ಸೂತ್ರ ಹಿಡಿದ ರಾಜಕಾರಣಿಗಳು ದುರಹಂಕಾರ, ದರ್ಪದಲ್ಲಿ ತಾವೂ ಮನುಷ್ಯರು ಎಂಬುದನ್ನೇ ಮರೆತಂತಿದೆ. ಯಾವ ಸಹನೆಯ ಒರೆಗಲ್ಲ ಮೇಲೆ ಮನುಷ್ಯರ ಸತ್ವಪರಿಕ್ಷೆ ಆಗುತ್ತಿದೆ ಇಲ್ಲಿ? ಉತ್ತರ ಭಾರತದಲ್ಲಿ ದಸರೆಯ ರಾವಣನ ಪ್ರತಿಮೆಯೇನೋ ಸುಟ್ಟುಭಸ್ಮವಾಗುತ್ತದೆ. ಮನುಷ್ಯನೊಳಗಿನ ರಾವಣ ಮಾತ್ರ ಕಾಯುತ್ತಿದ್ದಾನೆ, ರಾಮನಿಗಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.