ಇರುವೆಯೊಂದು ತನಗಿಂತ ದೊಡ್ಡದಾದ ಕಾಳೊಂದನ್ನು ಹೊರಲಾರದೇ ಹೊತ್ತುಕೊಂಡು ಹೋಗುತ್ತಿತ್ತು. ಬಹಳ ದೂರದಿಂದ ಅದು ಆ ಕಾಳನ್ನು ತರುತ್ತಿತ್ತು. ಇರುವೆಗೆ ಸುಸ್ತಾಗಿಹೋಗಿತ್ತು. ಕಷ್ಟಪಟ್ಟು ಹಾಗೆಯೇ ಹೋಗುತ್ತಿರುವಾಗ ಒಂದು ಹಕ್ಕಿಯ ಗರಿಯೊಂದು ಹಾರಿ ಬಂದು ಇರುವೆಯ ಪಕ್ಕ ಬಿದ್ದಿತು. ಗಾಳಿಯಲ್ಲಿ ತೇಲಿ ಬಂದು ನೆಲದ ಮೇಲೆ ಬಿದ್ದ ಆ ಗರಿಯನ್ನು ನೋಡಿ ಇರುವೆಗೆ ಸ್ವಲ್ಪ ಅಸೂಯೆಯಾಯಿತು. ಅಲ್ಲ, ನಾನು ನೋಡಿದರೆ ಹೀಗೆ ನನ್ನ ಆಹಾರವನ್ನು ಎಳೆದುಕೊಂಡು ಹೋಗುತ್ತಿದ್ದೇನೆ. ಈ ಗರಿ ನೋಡು ಹೇಗೆ ಆರಾಮಾಗಿ ಎಲ್ಲ ಕಡೆ ಹಾರಿಕೊಂಡು ಹೋಗುತ್ತಿದೆ ಅಂದುಕೊಂಡಿತು. ಮತ್ತು ಅದನ್ನೇ ಆ ಗರಿಗೆ ಹೇಳಿತು, ‘ನೀನೆಷ್ಟು ಹಗುರ, ನಿನಗೆ ಯಾವುದೇ ನಿರ್ಬಂಧಗಳಿಲ್ಲ, ನೀನೇ ಅದೃಷ್ಟವಂತ’.

ಆಗ ಆ ಗರಿ ಜೋರಾಗಿ ನಕ್ಕು ಹೇಳಿತು, ‘ನೀನು ಹೇಳಿದ್ದು ಸರಿ, ಆದರೆ ಗಾಳಿ ಮನಸ್ಸಿಗೆ ಬಂದ ಕಡೆ ನನ್ನನ್ನು ತೆಗೆದುಕೊಂಡು ಹೋಗಿ ಬಿಸಾಕುತ್ತದಲ್ಲ... ನಾನೆಲ್ಲಿಗೆ ಹೋಗಬೇಕು ಅನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯ ನನಗಿಲ್ಲವಲ್ಲ. ನೀನೇ ಅದೃಷ್ಟವಂತೆ, ನಿನಗೆ ನಿನ್ನದೇ ಆದ ಮನೆ ಇದೆ. ಕಷ್ಟಪಟ್ಟು ಆಹಾರ ಸಂಗ್ರಹಿಸುತ್ತೀ, ಮಳೆಗಾಲದಲ್ಲಿ ಬೆಚ್ಚಗೆ ನಿನ್ನ ಗೂಡೊಳಗೆ ಕೂತು ತಿನ್ನುತ್ತೀ, ವಿಶ್ರಾಂತಿ ಪಡೆಯುತ್ತೀ. ಆದರೆ ನಾನು? ನನಗೆ ನನ್ನದೇ ಆದ ಮನೆಯೂ ಇಲ್ಲ, ಗುರಿಯೂ ಇಲ್ಲ. ಗಾಳಿ ಕೊಂಡೊಯ್ದತ್ತ ಹೋಗುತ್ತ ಇರುವುದು, ನನ್ನ ಮುಂದಿನ ನಿಲ್ದಾಣ ಯಾವುದೆಂಬ ಊಹೆಯೂ ನನಗಿಲ್ಲ’. ಮತ್ತೇನನ್ನೋ ಹೇಳಲಿಕ್ಕೆ ಹೊರಟಿತ್ತು ಅಷ್ಟು ಹೊತ್ತಿಗೆ ಬಲವಾದ ಗಾಳಿ ಬೀಸಿ ಗರಿಯನ್ನು ಹಾರಿಸಿಕೊಂಡು ಹೋಗಿ ದೂರದ ಒಂದು ಮುಳ್ಳಿನ ಪೊದೆಯ ಮೇಲೆ ಬೀಳಿಸಿತು.

ಇರುವೆ ರಸ್ತೆ ಬದಿಯಲ್ಲಿ ತನ್ನ ಪ್ರಯಾಣ ಮುಂದುವರಿಸಿತು.

ನಿಜ, ಬದುಕಿಗಾಗಿ ಕಷ್ಟಪಡುವುದು, ಒತ್ತಡ ಅನುಭವಿಸುವುದು ಇದ್ದೇ ಇರುತ್ತದೆ. ಆದರೆ ಗುರಿಯಿಲ್ಲದ ಸ್ವಾತಂತ್ರ್ಯ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಸ್ವಚ್ಛಂದವಾಗಿ ವಿಹರಿಸುತ್ತಿರುವಂತೆ ಕಂಡ ಗರಿಗೆ ತನ್ನ ದಾರಿಯನ್ನಾಗಲೀ ಗುರಿಯನ್ನಾಗಲೀ ನಿರ್ಧರಿಸುವ ಸ್ವಾತಂತ್ರ್ಯವಿಲ್ಲ... ಇರುವೆ ಕಷ್ಟಪಡುತ್ತಿದ್ದರೂ ಅದಕ್ಕೊಂದು ಗುರಿಯಿದೆ, ಅದರದ್ದೇ ಆದ ಒಂದು ಬದುಕಿದೆ. ಸ್ವಾತಂತ್ರ್ಯವೆಂದರೆ ಬೇಕಾಬಿಟ್ಟಿ ಇರುವುದಲ್ಲ, ಬದುಕಿಗೊಂದು ಗಮ್ಯವಿರಬೇಕು. ಅದನ್ನು ಸಾಧಿಸಲು ಶಿಸ್ತಿರಬೇಕು, ಸತತ ಪ್ರಯತ್ನವಿರಬೇಕು. ಯಾರದ್ದೋ ಬದುಕು ಸುಲಭ ಎಂದುಕೊಂಡು ನಮ್ಮ ಬದುಕನ್ನು ನೋಡಿ ಅಳುತ್ತ ಕೂರುವುದು ಮೂರ್ಖತನ. ಹಗುರವಾಗಿ ಹಾರುವ ಆ ಪುಟ್ಟ ರೆಕ್ಕೆಯ ಬದುಕಿನಂತೆ ಸುಖಿಗಳೆಂದು ಕಾಣುವ ಜನರ ಬದುಕಿನಲ್ಲಿ ನಡೆಯುತ್ತಿರುವ ತಲ್ಲಣಗಳು ಬೇರೆಯವರಿಗೆ ಕಾಣುವುದಿಲ್ಲ. ಹೀಗಾಗಿ ನಮ್ಮ ಬದುಕನ್ನು ಬೇರೆಯವರಿಗೆ ಹೋಲಿಸಿಕೊಳ್ಳದೇ ನಮ್ಮ ಬದುಕಿನ ಸವಾಲುಗಳನ್ನು ಎದುರಿಸುತ್ತ, ಸಂತೃಪ್ತಿಯಿಂದ ಮುನ್ನಡೆಯುವುದು ಅತ್ಯುತ್ತಮ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.