ರಂಗಸ್ವಾಮಿ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವನು. ತನ್ನ ಬಡ ಕುಟುಂಬದ ಬವಣೆಗಳನ್ನು ದಿಕ್ಕರಿಸಿ, ಮನೆಯವರ ಅಂಕೆ ಆಜ್ಞೆಗಳಿಗೆ ಬೆನ್ನುಹಾಕಿ ತನ್ನಿಷ್ಟದಂತೆ ಬದುಕುತ್ತೇನೆಂದು ನಿರ್ಧರಿಸಿ ಊರು ಬಿಟ್ಟು ಬಂದವನು. ಇಷ್ಟು ವರ್ಷ ಒಂಟಿಯಾಗಿ ಯಾರ ಹಂಗಿಲ್ಲದೇ ಸುಂದರ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಿಂದ ಜೀವನವನ್ನು ಆನಂದಿಸುತ್ತಾ ಬದುಕಿದ. ಆದರೆ, ಈಗ ವಯಸ್ಸು ಅರವತ್ತಾದ ಮೇಲೆ ಹೆಸರು ಹೇಳಲಾಗದ ಕಾಯಿಲೆಗಳು ಬಂದು ಅವುಗಳ ನಿವಾರಣೆ ಕಷ್ಟ ಅನಿಸಿ, ಜೊತೆಯಲ್ಲಿ ನನ್ನವರು ಅಂತ ಯಾರಾದರೂ ಇರಬೇಕಿತ್ತು ಎಂಬ ಕೊರಗನ್ನೇ ಹೆಚ್ಚುಮಾಡಿಕೊಂಡು ಖಿನ್ನತೆಗೆ ಜಾರಿದ್ದಾನೆ.

ಇನ್ನೊಂದೆಡೆ ಅವಿಭಕ್ತ ಕುಟುಂಬವೊಂದರಲ್ಲಿ ಮನೆ, ಮಕ್ಕಳು, ನೆಂಟರು, ಸ್ನೇಹಿತರು ಎಲ್ಲರೂ ತನಗೆ ಬೇಕೇ ಬೇಕು. ಅವರೊಂದಿಗಿನ ಬದುಕೇ ತನ್ನ ಬದುಕು ಎಂದುಕೊಂಡು ತನ್ನ ಅರವತ್ತನೇ ವಯಸ್ಸಿನವರೆಗೆ ತನ್ನದು ಅಂತ ಒಂದೇ ಒಂದು ಇಷ್ಟವನ್ನೂ ವ್ಯಕ್ತಪಡಿಸದೆ, ಈಡೇರಿಸಿಕೊಳ್ಳುವ ಯೋಚನೆಯನ್ನೂ ಮಾಡದೇ ಗಾಣದ ಎತ್ತಿನಂತೆ ದುಡಿದ ಗೀತಾ ಈಗ ಮಕ್ಕಳು ಮರಿಗಳೆಲ್ಲಾ ಅವರವರ ಬದುಕಿನ ಬಂಡಿಯೇರಿ ದೂರ ದೂರವಾದ ಮೇಲೆ ವರ್ಷಕ್ಕೊಮ್ಮೆ ಹಬ್ಬಕ್ಕಾದರೂ ಬಂದರೇನೋ ಎಂದು ಆಸೆಗಣ್ಣು ಬಿಟ್ಟುಕೊಂಡು ನಗರದಿಂದ ದೂರವಾದ ಹಳ್ಳಿಯೊಂದರ ಒಂಟಿಮನೆಯಲ್ಲಿ ತಾನೂ ಒಂಟಿಯಾಗಿ ಕಾಯುತ್ತಾ ಕುಳಿತಿದ್ದಾಳೆ.

ಈ ಎರಡೂ ವೈರುಧ್ಯಗಳಿಗೆ ಉತ್ತರ ಏನು? ಬದುಕಿನಲ್ಲಿ ಯಾವ ಆಯ್ಕೆ ಸರಿ, ಯಾವುದು ತಪ್ಪು, ಹೀಗೇ ಎಂದು ರೂಪಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ.

ಮಾನವ, ಕುಟುಂಬ ವ್ಯವಸ್ಥೆ ರಚಿಸಿಕೊಂಡ ಲಕ್ಷಾಂತರ ವರ್ಷಗಳ ನಂತರ ಕೂಡ ತುಂಬ ಮುಂದುವರಿದ ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ತಿಳಿದುಕೊಂಡಿರುವ ಈ ಕಾಲಘಟ್ಟದಲ್ಲೂ ಇನ್ನೂ ಬದುಕಿನ ಬಗ್ಗೆ ಇದಮಿತ್ತಂ ಎಂಬ ಸೂತ್ರಗಳನ್ನು ತರಲಾಗಿಲ್ಲ. ಕಾರಣ ಬದುಕು ಎಷ್ಟು ವೈಯಕ್ತಿಕವೋ ಅಷ್ಟೇ ಬದುಕು ಎಂದ ತಕ್ಷಣ ನಾನು, ನನ್ನವರು ಹಾಗೂ ಇತರರು ಎಂಬ ಪಾತ್ರಗಳು ಬರುತ್ತವೆ. ಇದರಲ್ಲಿ ನಾನು ಎಂಬ ಪಾತ್ರ ಬಹುಮುಖ್ಯವಾದದ್ದು. ಬಹಳ ಒತ್ತಡದ ಇಂದಿನ ಕಾಲದಲ್ಲಿ ನಾವು ಹಿಂದಿನವರ ಬದುಕಿನ ಬಗ್ಗೆ ಹಳಹಳಿಯುತ್ತಾ, ಹೊಸತರ ಬಗ್ಗೆ ಗೊಂದಲವನ್ನೂ ತೋರುತ್ತಾ ನಡುವಿನಲ್ಲಿ ಗೊಂದಲದ ಬದುಕಿಗೆ ಒಡ್ಡಿಕೊಂಡಿದ್ದೇವೆ. ಸಂಬಂಧ- ಬಾಂಧವ್ಯದ- ನೈತಿಕತೆಯ ಬೇಲಿಯನ್ನು ದಾಟಲೂ ಆಗದೆ, ಒಳಗೆ ಬದುಕಲೂ ಆಗದೆ ಒದ್ದಾಡುತ್ತಿದ್ದೇವೆ. ಪ್ರತಿ ವ್ಯಕ್ತಿಯೂ ನೈತಿಕತೆಯ ಮುಸುಕಿನ ಒಳಗೆ ತನ್ನ ಆಸೆಗಳನ್ನು ತೀರಿಸಿಕೊಳ್ಳುವುದಕ್ಕೆ ಆಗುತ್ತದಾ ಎಂದು ಯೋಚಿಸುತ್ತಾನೆ. ಮಾನಸಿಕವಾಗಿ ಸಾವಿರ ಬಾರಿ ಮೀರಿದ ಎಲ್ಲೆಯನ್ನು ದೈಹಿಕವಾಗಿ ಮೀರದೇ ಇರಲು ಒದ್ದಾಡುತ್ತಾ ತಾನು ಸಂಬಂಧಗಳ ಎಲ್ಲೆ ಮೀರಿಲ್ಲ ಅಂತ ತನ್ನನ್ನು ತಾನೇ ನಂಬಿಸಿಕೊಂಡು ಭ್ರಮೆಯ ಬದುಕು ಬದುಕುತ್ತಾನೆ. ಹಾಗೆಂದು ಮನಸಲ್ಲೇ ಮಂಡಿಗೆ ತಿನ್ನುವುದನ್ನೂ ನಿಲ್ಲಿಸಲಾರ. ಅವನಿಗೆ ಸಂಬಂಧಗಳ ಬೇಲಿಯೂ ಬೇಕು - ಅವಕಾಶವಾದರೆ ಅದರಾಚೆಗಿನ ಸುಖಭೋಗಗಳೂ ಬೇಕು.

ಇಂಥ ಸಂದಿಗ್ಧ ಸಮಯದಲ್ಲಿ ನಮ್ಮಿಷ್ಟದಂತೆ ಬದುಕುವುದು ಅಷ್ಟು ಸುಲಭವಾ? ನಮ್ಮಿಷ್ಟ ಅಂದರೆ ಏನು? ಸ್ವತಂತ್ರವಾ, ಸ್ವೇಚ್ಛೆಯಾ, ಬಂಧನವಾ, ಬಿಡುಗಡೆಯಾ ಎಂಬುದನ್ನು ಯೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.