ಜೀವನ ಎನ್ನುವುದು ನಿಸರ್ಗದ ದೊಡ್ಡ ಕೊಡುಗೆ. ನಿಮಗೆ ಯಾರಾದರೂ ಗಿಫ್ಟ್ ಕೊಟ್ಟರೆ ಅದನ್ನು ನೀವು ನಿಮ್ಮ ಶೋಕಸ್ನಲ್ಲಿ ಇಡುತ್ತೀರಿ. ಚೆನ್ನಾಗಿ ನೋಡಿಕೊಳ್ಳುತ್ತೀರಿ. ಗಿಫ್ಟ್ ಅನ್ನು ನೀವು ಚೆನ್ನಾಗಿ ಇಟ್ಟುಕೊಂಡಿರುವುದನ್ನು ನೋಡಿದರೆ ನಿಮಗೆ ಇನ್ನೊಂದು ಬಾರಿ ಗಿಫ್ಟ್ ಕೊಡಬೇಕು ಎಂದು ನಿಮಗೆ ಗಿಫ್ಟ್ ಕೊಟ್ಟವರಿಗೆ ಅನ್ನಿಸುತ್ತದೆ. ಅದೇ ರೀತಿ ನಿಮಗೆ ಕೊಟ್ಟ ಗಿಫ್ಟ್ ಅನ್ನು ಕೆಡಿಸಿ ಒಗೆದಿರಿ ಎಂದರೆ ಇನ್ನೊಮ್ಮೆ ಇವರಿಗೆ ಗಿಫ್ಟ್ ಕೊಡಬಾರದು ಎನ್ನಿಸುತ್ತದೆ ಅವರಿಗೆ. ಹಾಗೆಯೇ ಜೀವನ ಎನ್ನುವುದು ದೇವರು ಕೊಟ್ಟ ಗಿಫ್ಟ್. ಈ ಬದುಕನ್ನು ನಾವು ಚೆಂದ ಬದುಕಿದ್ವಿ ಅಂದ್ರೆ ಮತ್ತೊಮ್ಮೆ ಗಿಫ್ಟ್ ಕೊಟ್ಟು ಕಳಿಸುತ್ತಾನೆ ದೇವರು. ದೇವರು ಕೊಟ್ಟ ಈ ಬದುಕನ್ನು ನಾವು ಚಲೋ ಬದುಕದಿದ್ದರೆ ಇದಕ್ಕೆ ಗಿಫ್ಟ್ ಕೊಡಬಾರದು ಎಂದುಕೊಳ್ಳುತ್ತಾನೆ.

ಮನುಷ್ಯ ಹೇಗೆ ಬದುಕಬೇಕು ಎಂದು ನಮ್ಮ ಋಷಿಗಳು ವಿಚಾರ ಮಾಡಿದರು. ‘ಜೀವನವನ್ನು ಕೊಟ್ಟ ದೇವರಿಗೇ ಸಂತೋಷವಾಗಬೇಕು, ಹಾಗೆ ಮನುಷ್ಯ ಬದುಕಬೇಕು’ ಎಂದು ಅವರು ಹೇಳಿದರು. ನಿಮಗೆ ಬ್ಯಾಂಕ್ನಲ್ಲಿ ಸಾಲ ಬೇಕು ಎಂದರೆ ಬ್ಯಾಂಕ್ನವರು ಶ್ಯೂರಿಟಿ ಇಟ್ಟುಕೊಳ್ಳುತ್ತಾರೆ; ಮನೆ, ಹೊಲ ಎಲ್ಲ ಇಟ್ಟುಕೊಳ್ಳುತ್ತಾರೆ. ಗ್ಯಾರಂಟಿ ಇಲ್ಲದೇ ಅವರು ಏನನ್ನೂ ಕೊಡುವುದಿಲ್ಲ. ಒಂದು ನೂರು ವರ್ಷದ ಬದುಕು ಯಾವ ಗ್ಯಾರಂಟಿ ಇಲ್ಲದೆ ನಮ್ಮ ಮೇಲಿನ ಭರವಸೆಯ ಮೇಲೆ ದೇವರು ನಮಗೆ ಕೊಟ್ಟಿದ್ದಾನೆ. ಏನೂ ಇಸಗೊಂಡಿಲ್ಲ. ಪುಕ್ಕಟೆಯಾಗಿ ಕೊಟ್ಟಿದ್ದಾನೆ. ಹೀಗಿರುವಾಗ ಹೇಗೆ ಬದುಕಬೇಕು ಎಂದು ಯೋಚನೆ ಮಾಡಿ. ಪುಕ್ಕಟೆಯಾಗಿ ಕೆರೆ ಹಳ್ಳ ಬಾವಿಗಳನ್ನು ತುಂಬಿಸಿದ್ದಾನೆ. ಬೆಳಕಿಗಾಗಿ ಎಂದೆಂದಿಗೂ ಆರದ ದೀಪಗಳಾದ ಸೂರ್ಯ ಚಂದ್ರರನ್ನು ಪುಕ್ಕಟೆ ತೇಲಿಬಿಟ್ಟಿದ್ದಾನೆ. ಎಂದೂ ಬಿಲ್ ಕೇಳಿಲ್ಲ. ಭೂಮಿತಾಯಿ ಲಕ್ಷ ಲಕ್ಷ ಜನರಿಗೆ ಅನ್ನ ಹಾಕಿದರೂ ಸಹಿತ ತನ್ನ ಅಕ್ಷಯಪಾತ್ರೆ ಖಾಲಿಯಾಗಿದೆ ಎಂದು ಯಾರನ್ನೂ ಉಪವಾಸ ಹಾಕಿಲ್ಲ. ಇಷ್ಟೆಲ್ಲಾ ದೇವರು ಕರುಣಿಸಿದ. ಆದರೂ ಮನುಷ್ಯ ಅಳುವುದನ್ನು ಬಿಟ್ಟಿಲ್ಲ. ನಿಸರ್ಗ ಸಂತೋಷವಾಗಿದ್ದರೂ ಮನುಷ್ಯ ಅಳೋದು ಬಿಟ್ಟಿಲ್ಲ. ಎಲ್ಲರೂ ನಮಗೆ ಕೈಬಿಟ್ಟಾರೆ ಅಂತಾರೆ.

ನೀವು ಸೈಕಲ್ ಕಲಿಯುತ್ತೀರಿ. ನಿಮಗೆ ಕಲಿಸುವವರು ಎಲ್ಲಿಯವರೆಗೆ ಸೈಕಲ್ ಹಿಡಿದುಕೊಳ್ಳುತ್ತಾರೆ ಎಂದರೆ, ನಿಮಗೆ ಸೈಕಲ್ ಹೊಡೆಯಲು ಬರುವವರೆಗೆ ಮಾತ್ರ. ಸೈಕಲ್ ಕಲಿಸುವವರು ನಮ್ಮ ಕೈಬಿಟ್ಟಾಗಲೇ ನಮಗೆ ಸೈಕಲ್ ನಡೆಸುವುದು ಹೇಗೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಜೀವನದಲ್ಲಿಯೂ ನಮ್ಮ ಕೈಹಿಡಿದವರು ನಮ್ಮ ಕೈಬಿಟ್ಟಾಗಲೇ ನಮಗೆ ಜೀವನ ಹೇಗೆ ನಡೆಸಬೇಕು ಎನ್ನುವುದು ಗೊತ್ತಾಗುತ್ತದೆ. ಎಲ್ಲ ಕಳೆದುಕೊಂಡಿದ್ದೇವೆ ಎಂದು ಗೊಣಗಬಾರದು ಮನುಷ್ಯ. ಚಳಿಗಾಲದ ದಿನದಲ್ಲಿ ಗಿಡ ಎಲ್ಲ ಎಲೆಗಳನ್ನು ಕಳೆದುಕೊಳ್ಳುತ್ತದೆ. ಎಲ್ಲ ಎಲೆ ಹೋಗಿವೆ ಎಂದು ಗಿಡ ದುಃಖಪಟ್ಟಿಲ್ಲ. ವಸಂತ ಕಾಲ ಬಂದ ಮೇಲೆ ಮತ್ತೆ ಚಿಗುರು ಬರುತ್ತದೆ, ಹೂವು ಬರುತ್ತದೆ ಹಣ್ಣೂ ಆಗುತ್ತದೆ ಎಂಬ ಭರವಸೆಯಿಂದ ಗಿಡ ಬದುಕುತ್ತದೆ. ಬೇಸಿಗೆಯಲ್ಲಿ ನದಿ ಬತ್ತಿ ಹೋಗುತ್ತದೆ. ಆದರೆ ಮಳೆ ಬಂದರೆ ಮತ್ತೆ ತುಂಬಿ ಹರಿಯುತ್ತೇನೆ ಎನ್ನುವ ಭರವಸೆ ನದಿಗೆ. ಅದಕ್ಕೆ ಮನುಷ್ಯ ಭರವಸೆಯೊಂದಿಗೆ ಬದುಕಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.