ಓದು, ಅಧ್ಯಯನ, ನಿರಂತರವಾದ ಚರ್ಚೆಗಳು, ಅಪಾರವಾದ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ತಾವು ಅಂದುಕೊಂಡಿದ್ದನ್ನು ಸಾಧ್ಯಮಾಡಿದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ನಾಡು ಕಂಡ ಅದ್ಭುತ ಶಿಕ್ಷಕ. ‘ಶಿಕ್ಷಣ ಸ್ವಾಭಿಮಾನವನ್ನು ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ನೆಲದ ಜ್ಞಾನ ಬಹುದೊಡ್ಡದು. ಬುದ್ಧ ಬಸವಾದಿ ತತ್ವಜ್ಞಾನಿಗಳು ಜಗತ್ತಿಗೆ ಬಿಟ್ಟುಹೋದ ಬೆಳಕು ಅಮೂಲ್ಯ’ ಎಂದು ವಿಶ್ವಕ್ಕೆ ತೋರಿದ ಮಹನೀಯರು. ಅವರ ಮಾತುಗಳನ್ನು ಕೇಳಲಿಕ್ಕೆ ವಿದ್ಯಾರ್ಥಿಯಾಗಿದ್ದಾಗ ಮೈಸೂರಿಗೆ ಹೋಗುತ್ತಿದ್ದೆ ಎಂದು ನಾಡಿನ ಪ್ರಜ್ಞಾವಂತ ರಾಜಕಾರಣಿ ಎಸ್.ನಿಜಲಿಂಗಪ್ಪನವರು ತಮ್ಮ ಸಂದರ್ಶನವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ. ಅವರ ಶಿಷ್ಯರಾಗಬೇಕೆಂದು ಹಂಬಲಿಸುತ್ತಿದ್ದ ವಿದ್ಯಾರ್ಥಿಗಳು ಅಪಾರ.

‘ಭಾರತದ ನೆಲದಲ್ಲಿ ಬರಿಯ ಅಧ್ಯಾತ್ಮ ಅಲ್ಲ, ಜ್ಞಾನದ ಬಹುದೊಡ್ಡ ಭಂಡಾರವೇ ಅಡಗಿದೆ. ಅದು ಜಗತ್ತಿಗೆ ಬೇಕಿದೆ’ ಎಂದು ನಂಬಿದವರು ರಾಧಾಕೃಷ್ಣನ್. ಅವರನ್ನು ವಿದ್ಯಾರ್ಥಿಯೊಬ್ಬ ಕೇಳಿದನಂತೆ, ‘ನೀವೇಕೆ ಆಕ್ಸ್ಫರ್ಡ್ಗೆ ಓದಲಿಕ್ಕೆ ಹೋಗಲಿಲ್ಲ’. ಆಗ ಆಕ್ಸ್ಫರ್ಡ್ನಲ್ಲಿ ಓದುವುದು, ಭಾರತದಲ್ಲಿನ ಬ್ರಿಟಿಷರ ಆಧಿಪತ್ಯ, ಪಶ್ಚಿಮದ ಮೋಹ ಎಲ್ಲವೂ ಸೇರಿ ಅಲ್ಲಿಂದ ಪದವಿ ತೆಗೆದುಕೊಳ್ಳುವುದು ಎಂದರೆ ಆ ಕಾಲದಲ್ಲಿ ಬಹಳ ಘನತೆಯ ವಿಷಯವಾಗಿತ್ತು. ಅಂಥ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆದರೆ ರಾಧಾಕೃಷ್ಣನ್ ನಗುತ್ತಾ ಹೇಳಿದರು, ‘ನಾನು ಆಕ್ಸ್ಫರ್ಡ್ಗೆ ಹೋಗುತ್ತೇನೆ. ಕಲಿಯಲು ಅಲ್ಲ. ಕಲಿಸಲು’. ಅವರ ಆ ಮಾತುಗಳು ಸುಮ್ಮನೆ ಹುಟ್ಟಿದ್ದಲ್ಲ, ಅದು ಬರಿಯ ಮಾತೂ ಆಗಿರಲಿಲ್ಲ. ಮುಂದೆ ಬರಿಯ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒಂದೇ ಅಲ್ಲ; ಪಶ್ಚಿಮದ ಎಲ್ಲ ದೇಶಗಳಲ್ಲೂ ಅವರು ಉಪನ್ಯಾಸಗಳನ್ನು ಕೊಟ್ಟರು. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ‘ಮೈಂಡ್’ ಪತ್ರಿಕೆ ಇವರ ಲೇಖನಗಳನ್ನು ಪ್ರಕಟಿಸಿತು.

ಒಮ್ಮೆ ರಾಧಾಕೃಷ್ಣನ್ ಅವರನ್ನು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಒಂದು ವಾರದ ಉಪನ್ಯಾಸಕ್ಕಾಗಿ ಹೋದಾಗ ಅಲ್ಲೊಬ್ಬ ಅಮೆರಿಕದ ವಿದ್ಯಾರ್ಥಿ ಕೇಳಿದನಂತೆ, ‘ನಿಮ್ಮ ನಂಬಿಕೆಯಂತೆ ಪ್ರಪಂಚವನ್ನು ಮುಕ್ತಗೊಳಿಸುವ ಸಂದೇಶ ಭಾರತದ್ದಾಗಿದ್ದರೆ ಬ್ರಿಟಿಷರಿಂದ ಯಾಕೆ ಮುಕ್ತರಾಗಲಿಲ್ಲ’ ಎಂದು. ಅದಕ್ಕೆ ಅವರು ನಗುತ್ತಾ, ‘ಏಸು ತನ್ನನ್ನು ತಾನು ಮುಕ್ತಗೊಳಿಸಲು ಹುಟ್ಟಿದನೇ’ ಎಂದು ಪ್ರಶ್ನಿಸಿದರಂತೆ. ಆ ಅಮೆರಿಕದ ವಿದ್ಯಾರ್ಥಿ , ‘ಏಸು ದೇವದೂತ. ಪಾಪದ ಛಾಯೆಯೂ ಇಲ್ಲದವನು. ಅವನಿಗೆ ಎಂಥ ಮುಕ್ತಿ? ಜಗತ್ತಿನ ಉದ್ಧಾರಕ್ಕಾಗಿ ಅವನ ಜನನವಾಯಿತು’ ಎಂದನಂತೆ. ‘ಏಸು ಉಳಿದವರನ್ನು ಮುಕ್ತಗೊಳಿಸಲು ಹುಟ್ಟಿದ ಎನ್ನುವುದನ್ನು ನೀವು ನಂಬುತ್ತೀರಿ ಎಂದಾದರೆ, ಭಾರತದ ಜ್ಞಾನವು ಜಗತ್ತಿನ ಅಜ್ಞಾನವನ್ನು ಮುಕ್ತಗೊಳಿಸಲಿಕ್ಕೆ ಇದೆ ಎನ್ನುವುದನ್ನು ನಂಬಲೇಬೇಕು’ ಎಂದು ಬೈಬಲ್ನಿಂದಲೇ ಉದಾಹರಣೆಗಳನ್ನು ತೆಗೆದುಕೊಂಡು ಪಾಶ್ಚಾತ್ಯದ ಮನಸ್ಸಿನಲ್ಲಿ ಭಾರತೀಯ ತತ್ವವನ್ನು ಅರ್ಥ ಮಾಡಿಸುತ್ತಾರೆ. ಬಿಡುಗಡೆ ಎಂದರೆ ಅದು ದೈಹಿಕವಾಗಿ ಮಾತ್ರವಲ್ಲ, ನಾವು ಮಾನಸಿಕವಾಗಿ ದೃಢತೆ ಹೊಂದಬೇಕು. ಗುಲಾಮಿತನದ ಮನಃಸ್ಥಿತಿಯಿಂದ ಹೊರಬಂದರೆ ಅದೇ ಬಿಡುಗಡೆ ಎಂದು ಜಗತ್ತಿಗೆ ತೋರಿದ ಈ ಭಾರತೀಯನಿಗೆ ಬೆಳಗಿನ ನಮಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.