ಭಾನುವಾರ ಮುಗಿದ ಐಸಿಸಿ ಟೆಸ್ಟ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿದೆ. ದಶಕ ದಶಕಗಳ ಕಾಲ ತನ್ನ ವರ್ಣಭೇದ ನೀತಿಯಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಬಹಿಷ್ಕರಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಓರ್ವ ಕರಿಯ ವ್ಯಕ್ತಿ ನಾಯಕನಾಗಿ ಈ ಟ್ರೋಫಿ ತಂದುಕೊಟ್ಟಿದ್ದು ಇಲ್ಲಿ ನಮೂದಿಸಲೇಬೇಕಾದ ಐತಿಹಾಸಿಕ ದಾಖಲೆ. ತೆಂಬಾ ಬವುಮಾ ಅನ್ನುವ ಈ ಕ್ರಿಕೆಟಿಗ ತಮ್ಮ ದೇಶದ ಕ್ರಿಕೆಟ್ ತಂಡಕ್ಕೆ ನಾಯಕನಾದ ಮೊದಲ ಕಪ್ಪು ಆಟಗಾರ!

ದಾಖಲೆಗಳಲ್ಲಿ ವರ್ಣಭೇದ ನೀತಿ ಇತಿಹಾಸದ ಪುಟ ಸೇರಿದರೂ ಜನರ ಮನಸ್ಸಿನಲ್ಲಿ ಇಂದಿಗೂ ಅದು ಹಸಿರಾಗಿಯೇ ಇದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬವುಮಾ ಅನುಭವಿಸಿದ ಹೀಗಳಿಕೆ, ಟೀಕೆಗಳು ಒಂದೆರಡಲ್ಲ. ಕಪ್ಪು ವರ್ಣೀಯ ಎಂಬ ಕಾರಣಕ್ಕೆ ಮಾತ್ರವೇ ತಂಡಕ್ಕೆ ಆಯ್ಕೆಯಾದ ʼಕೋಟಾ ಆಟಗಾರʼ ಎಂಬ ಹೀಗಳಿಕೆಯಿಂದಲೇ ವೃತ್ತಿಜೀವನ ಶುರು ಮಾಡಿದವರು ಬವುಮಾ. ಅಷ್ಟು ಮಾತ್ರವಲ್ಲ, ಕಡಿಮೆ ಎತ್ತರದ ಕಾರಣಕ್ಕೆ ಅವರ ಕ್ರಿಕೆಟ್ ಸಾಮರ್ಥ್ಯದ ಬಗ್ಗೆಯೇ ಅನುಮಾನಗಳನ್ನು ವ್ಯಕ್ತಪಡಿಸಿದವರಿದ್ದರು. ಇಂತಹ ನೂರಾರು ಟೀಕೆಗಳನ್ನು ಕೇಳಿರಬಹುದು ಬವುಮಾ. ಅಂತರರಾಷ್ಟ್ರೀಯ ಆಟದ ಒತ್ತಡದ ಜತೆಗೆ ನಿರೀಕ್ಷೆಗಳ ಭಾರ, ಅವಮಾನದ ಸಂಕಟ ಎಲ್ಲವೂ ಸೇರಿದರೂ ಬವುಮಾ ಕುಗ್ಗಲಿಲ್ಲ. ಬದಲಿಗೆ ತಮ್ಮನ್ನು ತಾವು ಗಟ್ಟಿಯಾಗಿಸಿಕೊಂಡರು. ಟೀಕೆಗಳಿಗೆ ದಪ್ಪ ಚರ್ಮ ಬೆಳೆಸಿಕೊಂಡುಬಿಟ್ಟೆ ಎನ್ನುವ ಬವುಮಾ ದಿನಂಪ್ರತಿ ತಮ್ಮನ್ನು ತಾವು ಸುಧಾರಿಸಿಕೊಳ್ಳುವತ್ತ ಗಮನ ಕೊಟ್ಟರು. ಒಬ್ಬ ನಾಯಕನಾಗಿ ತಂಡವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಿದರು. ಬವುಮಾ ನಾಯಕತ್ವ ವಹಿಸಿದ ಯಾವ ಟೆಸ್ಟ್ನಲ್ಲೂ ದಕ್ಷಿಣ ಆಫ್ರಿಕಾ ಸೋತಿಲ್ಲ! ಟ್ವೆಂಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್ಗಳಲ್ಲೂ ನಾಯಕರಾಗಿ ಒಳ್ಳೆಯ ಸಾಧನೆಯನ್ನೇ ಮಾಡಿದ್ದಾರೆ! ಈ ಸಲದ ಟೆಸ್ಟ್ ವಿಶ್ವಕಪ್ ಗೆಲ್ಲುವುದರ ಮೂಲಕ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರು ಶಾಶ್ವತವಾಗಿ ನಮೂದಿಸಲ್ಪಡುವಂತೆ ನೋಡಿಕೊಂಡಿದ್ದಾರೆ ತೆಂಬಾ ಬವುಮಾ!

ಬವುಮಾ ಅವರ ಸಮುದಾಯ ವರ್ಣಭೇದ ನೀತಿಯಿಂದ ನಿರಂತರ ಸಂಕಷ್ಟ ಎದುರಿಸುತ್ತಿದ್ದಾಗ ಸಹಾಯಕ್ಕೆ ಬಾರದ ಮಂದಿ ಅವರು ಸಾಧನೆಯ ದಾರಿಯಲ್ಲಿ ಹೊರಟಾಗ ಟೀಕಿಸಿದರು. ಆದರೆ ಅವಮಾನ ಮಾಡಿದವರಿಗೆ ಬವುಮಾ ಅವರಲ್ಲಿನ ಹೋರಾಟದ ಕಿಚ್ಚನ್ನು ಆರಿಸಲಾಗಲಿಲ್ಲ, ಅವರ ಸಾಧನೆಯ ಹಟವನ್ನು ಕಸಿದುಕೊಳ್ಳಲಾಗಲಿಲ್ಲ. ಸಮಾಜ ಮಾಡುವ ಸಣ್ಣ ಸಣ್ಣ ಅವಮಾನಗಳಿಗೆ ಹಿಂಜರಿದು ತಮ್ಮ ಪ್ರಯತ್ನವನ್ನೇ ಕೈಬಿಡುವ, ಇನ್ನೂ ಕೆಲವೊಮ್ಮೆ ಬದುಕಿಗೇ ವಿದಾಯ ಹೇಳಿಬಿಡುವ ಯುವಜನತೆಗೆ ಬವುಮಾ ಅವರ ಸಾಧನೆ ಒಂದು ಪಾಠ. ತಮ್ಮ ಕಡಿಮೆ ಎತ್ತರದ ಕಾರಣಕ್ಕೆ ಟೀಕೆಗೊಳಗಾದ ವ್ಯಕ್ತಿ ತಮ್ಮ ವ್ಯಕ್ತಿತ್ವವನ್ನು ಹಿಮಾಲಯದೆತ್ತರಕ್ಕೆ ಬೆಳೆಸಿಕೊಂಡ ರೀತಿ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.