ಒಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದಕ್ಕೆ ಬೇಸಿಗೆಯೆಂದರೆ ತುಂಬ ಇಷ್ಟ. ಎಳೆಬಿಸಿಲಿನಲ್ಲಿ ಹುಲ್ಲುಗಾವಲಿನಲ್ಲಿ ಹಾರಾಡುತ್ತ, ಚಿಟ್ಟೆಗಳೊಂದಿಗೆ ಆಟವಾಡುತ್ತ, ಎಳೆಗರಿಕೆಯನ್ನು ಮೆಲ್ಲುತ್ತ ಜಿಗಿದಾಡಿಕೊಂಡು ಕುಣಿದಾಡಿಕೊಂಡು ಇರುವುದೆಂದರೆ ಅದಕ್ಕೆ ಬಲು ಇಷ್ಟ. ಆದರೆ ಕಪ್ಪುಮೋಡಗಳು ದಟ್ಟೈಸಿದಾಗಲೆಲ್ಲ ಮೊಲಕ್ಕೆ ಬೇಸರ. ನಾಲ್ಕು ಹನಿ ಮಳೆ ಬಿದ್ದರೆ ಕಳವಳ. ಮಳೆಗಾಲ ಆರಂಭವಾದರಂತೂ ಹೇಳತೀರದ ಸಂಕಟ.

ಒಂದು ಮಧ್ಯಾಹ್ನ ಮೊಲ ಬಿಸಿಲಲ್ಲಿ ಆಡುತ್ತಿರುವಾಗಲೇ ಮಳೆ ಹನಿಗಳು ಬೀಳಲು ಶುರುವಾದವು. ‘ಥೋ ನಾನೀಗ ಏನೂ ಮಾಡುವಂತಿಲ್ಲ, ಈ ಮಳೆಯಲ್ಲಿ ಮಜವೂ ಇಲ್ಲ ಖುಷಿಯೂ ಇಲ್ಲ’ ಎಂದು ಗೊಣಗುತ್ತ ಒಂದು ಮೂಲೆಯಲ್ಲಿ ಬೆಚ್ಚಗಿನ ಜಾಗ ನೋಡಿ ಕುಳಿತಿತ್ತು ಮೊಲ. ಅಷ್ಟು ಹೊತ್ತಿಗೆ ಅದರ ಗೆಳೆಯ ಕಪ್ಪೆ ಅಲ್ಲಿಗೆ ಬಂತು. ‘ಅದೇನು ಮಾರಾಯ, ನೀನು ಮಳೆ ಅಂದರೆ ಗೊಣಗುತ್ತೀಯಲ್ಲ. ಬಾ ಮಳೆಗಾಲವೂ ಎಷ್ಟು ಅದ್ಭುತ ಅಂತ ತೋರಿಸ್ತೀನಿ’ ಎಂದು ಮೊಲವನ್ನು ಒತ್ತಾಯ ಮಾಡಿ ಅದನ್ನು ಎಬ್ಬಿಸಿ ಕರೆದುಕೊಂಡು ಹೋಯಿತು.

ರಸ್ತೆಯ ಮೇಲೆ ನೀರು ತುಂಬಿದ ಸಣ್ಣ ಸಣ್ಣ ಗುಂಡಿಗಳಿದ್ದವು. ಅದರ ಮೇಲೆ ಹಾರಿ ತೋರಿಸಿದ ಕಪ್ಪೆ, ‘ಹೀಗೆಯೇ ಹಾರು’ ಎಂದಿತು ಮೊಲಕ್ಕೆ. ಆ ಮಣ್ಣು ನೀರಲ್ಲಿ ಏನು ಹಾರುವುದೆಂದು ಮೊಲ ಮೂಗು ಮುರಿಯುತ್ತ ಸುಮ್ಮನೆ ನಿಂತಿತ್ತು. ಆದರೆ ಕಪ್ಪೆಯ ಕುಣಿತ ಜಿಗಿತ ಅದರ ನಿಲ್ಲದ ನಗುವನ್ನು ನೋಡಿ ಮೊಲಕ್ಕೆ ಈ ಕೊಳಕು ನೀರಿನ ಗುಂಡಿ ಹಾರುವುದರಲ್ಲಿ ಅದೇನು ಮಜವಿದೆಯೋ ನೋಡೋಣವೆಂದು ತಾನೂ ಕಪ್ಪೆಯನ್ನು ಸೇರಿಕೊಂಡಿತು. ಕೆಸರನ್ನು ತುಳಿದು ನೀರನ್ನು ಎರಚಾಡಿ ಖುಷಿಪಟ್ಟವು ಕಪ್ಪೆ ಮತ್ತು ಮೊಲ. ಮಣ್ಣಿನಲ್ಲಿರುವ ಪುಟ್ಟ ಪುಟ್ಟ ಹುಳುಗಳನ್ನು ನೋಡಿ ಅಚ್ಚರಿಪಟ್ಟವು. ಮೊಲ ಅದೆಷ್ಟು ಸಂಭ್ರಮಿಸಿತೆಂದರೆ ಅರೇ, ಬೆಚ್ಚನೆಯ ಬಿಸಿಲಿನ ದಿನಗಳಲ್ಲೂ ತಾನು ಇಷ್ಟು ಸಂತೋಷ ಪಟ್ಟಿರಲಿಲ್ಲವಲ್ಲ ಎಂದು ಅದಕ್ಕೆ ಅನ್ನಿಸಿತು. ಇದು ತನ್ನ ಬದುಕಿನ ಅತ್ಯಂತ ಖುಷಿಯ ದಿನಗಳಲ್ಲಿ ಒಂದು ಎಂದು ಅದಕ್ಕೆ ಅರ್ಥವಾಗಿತ್ತು. ಕಪ್ಪೆಗೆ ಧನ್ಯವಾದ ಹೇಳಿ ವಾಪಸು ಹೊರಟ ಮೊಲದ ಕುಪ್ಪಳಿಸುವಿಕೆಯಲ್ಲಿ ಹೊಸ ಉಲ್ಲಾಸವಿತ್ತು. ಈ ಸಾಹಸದ ನಂತರ ಮೊಲ ಮಳೆಯ ಬಗ್ಗೆ ಮೋಡದ ಬಗ್ಗೆ ಎಂದೂ ಗೊಣಗಲಿಲ್ಲ. ಸಂತೋಷವಿರುವುದು ವಾತಾವರಣದಲ್ಲಲ್ಲ, ನಮ್ಮ ನಮ್ಮ ದೃಷ್ಟಿಕೋನದಲ್ಲಿ ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿತು. ವಾತಾವರಣ ಯಾವುದಾದರೇನು? ಅದರಲ್ಲಿ ಒಳ್ಳೆಯದನ್ನು ಹುಡುಕುವುದರ ಮೂಲಕ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆಂದು ಮೊಲಕ್ಕೆ ಗೊತ್ತಾಗಿತ್ತು.

ನಾವು ಬಹಳ ಸಂದರ್ಭಗಳಲ್ಲಿ ಈ ಮೊಲದಂತೆಯೇ ವರ್ತಿಸುತ್ತಿರುತ್ತೇವೆ. ನಮ್ಮೆದುರಿಗಿರುವ ಅಪಾರ ಸಾಧ್ಯತೆಗಳಿಗೆ ನಿರುತ್ಸಾಹದಿಂದ ನಾವೇ ತಡೆಗೋಡೆ ನಿರ್ಮಿಸಿಕೊಂಡು ಬಿಡುತ್ತೇವೆ. ಆದರೆ ಕೊಂಚ ತೆರೆದ ಮನಸ್ಸು ಮತ್ತು ಧನಾತ್ಮಕ ದೃಷ್ಟಿಕೋನವನ್ನಿಟ್ಟುಕೊಳ್ಳುವ ಮೂಲಕ ಸಂದರ್ಭ ಹೇಗಿದ್ದರೂ ಅದನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು. ಬದುಕಿನಲ್ಲಿ ಪರಿಪೂರ್ಣತೆ ಎಂಬುದು ಎಂದಿಗೂ ಸಾಧ್ಯವಿಲ್ಲ. ಹೀಗಾಗಿ ಅರ್ಥಪೂರ್ಣ ಗಳಿಗೆಗಳನ್ನು ಸೃಷ್ಟಿಸಿಕೊಳ್ಳಲು ನಾವೇ ಪ್ರಯತ್ನಿಸುತ್ತಿರಬೇಕು. ನಕಾರಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರದೇ ಧನಾತ್ಮಕವಾಗಿ ಯೋಚಿಸುತ್ತ ಆಶಾವಾದದಿಂದ ನಮ್ಮ ಕೆಲಸವಗಳನ್ನು ನಾವು ಮಾಡುತ್ತ ಮುನ್ನಡೆಯಬೇಕು. ಏಕೆಂದರೆ, ಮಳೆ, ಬಿಸಿಲು ಮತ್ತು ಚಳಿಯ ನಡುವೆಯೇ ಬದುಕು ಸಾಗುತ್ತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.