ಮೈಸೂರು: ಆರೋಗ್ಯಾಧಿಕಾರಿ ಕಚೇರಿಯಲ್ಲಿ ಗೂಢಚಾರರು! ಮೈಸೂರಿನ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗೂಢಚಾರರು ಇದ್ದಾರೆ ಎಂದು ಸ್ವತಃ ಅಧಿಕಾರಿ ಗಳೇ ಶಂಕಿಸುತ್ತಾರೆ.

‘ಭ್ರೂಣದ ಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿಗೆ ಸಜ್ಜಾಗುತ್ತಿದ್ದಂತೆಯೇ ಈ ಮಾಹಿತಿಯು ಕೇಂದ್ರಗಳಿಗೆ ರವಾನೆಯಾಗುತ್ತಿತ್ತು. ಇದರಿಂದ ಕಳೆದ ಹಲವು ವರ್ಷಗಳಲ್ಲಿ ಯಾವುದೇ ಕೇಂದ್ರವೂ ಸಿಕ್ಕಿ ಬೀಳಲಿಲ್ಲ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಕಳೆದ ಹಲವು ವರ್ಷ ಗಳಿಂದ ಇಲ್ಲಿಗೆ ಬಂದ ಅನೇಕ ಅಧಿಕಾರಿಗಳು ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಿದಾಗ ಅಲ್ಲಿ ಯಾವುದೇ ರೋಗಿಗಳು ಇರುತ್ತಿರಲಿಲ್ಲ. ‘ಅನುಮಾನಕ್ಕೆ ಆಸ್ಪದವಾಗದಂತೆ ಬಹಳ ಸ್ವಚ್ಛವಾಗಿ ಇರುತ್ತಿದ್ದವು. ಆದರೆ, ಬೇರೆ ಸಮಯದಲ್ಲಿ ಅಲ್ಲಿ ಕಿಕ್ಕಿರಿದು ಜನರು ಇರುತ್ತಿದ್ದರು’ ಎಂಬುದನ್ನು ಅವರು ಬಹಿರಂಗಪಡಿಸಿದರು.

‘ದಾಳಿ ನಡೆಸುವ ರಹಸ್ಯ ಮಾಹಿತಿ ಯಾರಿಂದಲೋ ಸೋರಿಕೆಯಾಗುತ್ತಿತ್ತು. ಒಂದು ರೀತಿ ‘ಕಳ್ಳಗಿವಿ’ ಇತ್ತೇನೋ ಎಂದು ಭಾಸವಾಗುತ್ತದೆ. ಇದರಿಂದಾಗಿಯೇ ಯಾವುದೇ ಕೇಂದ್ರಕ್ಕೆ ಹೋದರೂ ನಮಗೆ ಸಾಕ್ಷ್ಯಗಳು ಸಿಗುತ್ತಿರಲಿಲ್ಲ’ ಎಂದರು.

ಮಾಹಿತಿ– ಕೆ.ಎಸ್. ಗಿರೀಶ್

* ಇವನ್ನೂ ಓದಿ...
*ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ

*ಹೆಣ್ಣು ಭ್ರೂಣ ಹತ್ಯೆ | ಕರುಳಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕಿರಾತಕರು

*ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

*ಗಂಡಿದ್ದರೂ ಹೆಣ್ಣೆಂದು ಹತ್ಯೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.