ಒಳನೋಟ: ಎಪಿಎಂಸಿಗಳಲ್ಲಿ ಗೋದಾಮಗಳಲ್ಲಿ ಸೌಲಭ್ಯದ ಕೊರತೆ

ಮೈಸೂರು: ಬಹುತೇಕ ಎಲ್ಲ ಎಪಿಎಂಸಿಗಳಲ್ಲಿ ಗೋದಾಮುಗಳಿದ್ದರೂ ಕ್ಲೀನಿಂಗ್, ಗ್ರೇಡಿಂಗ್ ಹಾಗೂ ಪ್ಯಾಕಿಂಗ್ ಸೌಲಭ್ಯಗಳು ಇರುವುದು ಕೆಲವೆಡೆ ಮಾತ್ರ. ಶೈತ್ಯಾಗಾರಗಳು ಬಹುತೇಕ ಕಡೆ ಇಲ್ಲ.
ಮೈಸೂರು ಭಾಗದಲ್ಲಿ ಶೈತ್ಯಾಗಾರಕ್ಕಾಗಿ ರೈತರು ಖಾಸಗಿಯವರನ್ನೇ ಅವಲಂಬಿಸಬೇಕಿದೆ. ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಈ ಎಲ್ಲ ಸೌಲಭ್ಯಗಳು ದೊರಕುತ್ತವೆ ಎಂಬ ನಿರೀಕ್ಷೆ ರೈತರದು.
ಮೈಸೂರು ಒಂದರಲ್ಲೇ 100ಕ್ಕೂ ಅಧಿಕ ಮಂದಿ ಲೈಸೆನ್ಸ್ ಪಡೆದ ಖರೀದಿದಾರರು ಎಪಿಎಂಸಿ ಬಿಟ್ಟು ಹೊರ ನಡೆದಿದ್ದಾರೆ. ತಮ್ಮದೇ ಮಳಿಗೆ ತೆರೆದು, ತಮ್ಮ ಬಳಿಯೇ ಸದಾ ಬರುವ ರೈತರಿಂದ ಖರೀದಿಸುತ್ತಿದ್ದಾರೆ. ಎಪಿಎಂಸಿಯಲ್ಲಿನ ಸ್ಪರ್ಧಾತ್ಮಕ ಬೆಲೆ ರೈತರಿಗೆ ಇಲ್ಲಿ ಸಿಗದಿರುವುದರಿಂದ ಅವರೂ ನಷ್ಟ ಅನುಭವಿಸುವಂತಾಗಿದೆ.
ಮೈಸೂರು ಜಿಲ್ಲೆಯ ಎಪಿಎಂಸಿಗಳಲ್ಲಿ ಒಂದು ವರ್ಷದಿಂದ ಶೇ 50ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ನಂಜುಂಡಸ್ವಾಮಿ. ಹಾಸನ, ಮಂಡ್ಯದಲ್ಲಿಯೂ ಪರಿಸ್ಥಿತಿ ಇದಕ್ಕಿಂತ
ಭಿನ್ನವಾಗಿಲ್ಲ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತುಮಕೂರು ಎಪಿಎಂಸಿಯಲ್ಲಿ ಶೇ 10ರಷ್ಟೂ ಆದಾಯ ಇಲ್ಲ. ಹೀಗಾಗಿ, ಗುತ್ತಿಗೆ ಸಿಬ್ಬಂದಿಯನ್ನು ಮುಂದುವರಿಸಿಲ್ಲ. ಆಡಳಿತ ವೆಚ್ಚ ಕಡಿತವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಎಪಿಎಂಸಿಗಳು ನೇರವಾಗಿ ಗೋದಾಮು, ಶೀತಲ ಘಟಕಗಳನ್ನು ನಿರ್ವಹಣೆ ಮಾಡುತ್ತಿಲ್ಲ. ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ವರ್ತಕರೇ ಗ್ರೇಡಿಂಗ್, ಪ್ಯಾಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬೀದರ್ ಹೊರತುಪಡಿಸಿ ಉಳಿದ ಕಡೆ ಶೈತ್ಯಾಗಾರಗಳು ಇಲ್ಲ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದಲ್ಲಿ ಶೇ 50ರಷ್ಟು ಸಿಬ್ಬಂದಿ ಕಡಿತ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.