ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ₹18 ಕೋಟಿ ವೆಚ್ಚದ ಹೈಟೆಕ್ ಶಾಲೆ!

Last Updated 11 ಜೂನ್ 2022, 19:13 IST
ಅಕ್ಷರ ಗಾತ್ರ

ರಾಮನಗರ:ಹುಟ್ಟೂರಿನ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಇಲ್ಲೊಬ್ಬರು ದಾನಿ ಬರೋಬ್ಬರಿ ₹18 ಕೋಟಿ ವ್ಯಯಿಸುತ್ತಿದ್ದು, ಇನ್ನು ಕೆಲವೇ ವರ್ಷದಲ್ಲಿ ಇದು ಜಿಲ್ಲೆಯ ಮಾದರಿ ಶಿಕ್ಷಣ ಸಂಸ್ಥೆಯಾಗಿ ತಲೆ ಎತ್ತಲಿದೆ.

ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಸರ್ಕಾರಿ ಶಾಲೆ ಸ್ಥಾಪನೆ ಆಗಿದ್ದು 1914ರಲ್ಲಿ. ಸದ್ಯ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಬದಲಾಗಿದೆ. ಪ್ರಸಕ್ತ ವರ್ಷ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹಳೇ ಶಾಲಾ ಕಟ್ಟಡ ಶಿಥಿಲಗೊಂಡ ಕಾರಣ 2005ರಲ್ಲಿ ಹೊಸ ಕಟ್ಟಡ ಕಟ್ಟಿ ಅಲ್ಲಿಗೆ ಶಾಲೆಯನ್ನು ಸ್ಥಳಾಂತರ ಮಾಡಲಾಗಿದೆ. ಹಳೇ ಕಟ್ಟಡ ಇದ್ದ ಜಾಗದಲ್ಲೇ ಈಗ ವ್ಯವಸ್ಥಿತ ಶಾಲಾ ಕಟ್ಟಡಗಳ ಸಂಕೀರ್ಣ ನಿರ್ಮಾಣಕಾರ್ಯ ನಡೆದಿದೆ.

ಕಣ್ವ ಡಯಾಗ್ನಾಸ್ಟಿಕ್ ಕೇಂದ್ರದ ಸಂಸ್ಥಾಪಕ ಎಚ್‌.ಎಂ. ವೆಂಕಟಪ್ಪ 1949–1958ರ ನಡುವೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಂತರದಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನತ್ತ ಮುಖಮಾಡಿದ್ದರು. ಆರು ದಶಕದ ಬಳಿಕ ಅವರು ತಮ್ಮ ಹುಟ್ಟೂರಿನ ಶಾಲೆಯತ್ತ ಗಮನಹರಿಸಿದ್ದಾರೆ.

ಮಕ್ಕಳ ಅಭ್ಯಾಸಕ್ಕೆಂದು ಬರೋಬ್ಬರಿ 60 ಕೊಠಡಿಗಳುಳ್ಳ ಮೂರು ಅಂತಸ್ತಿನ ಎರಡು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ ಪ್ರಯೋಗಾಲಯ, ಗ್ರಂಥಾಲಯ ಮೊದಲಾದ ಸೌಕರ್ಯಗಳ ಜೊತೆಗೆ ಸುಸಜ್ಜಿತ ಈಜುಕೊಳ, ಆಟದ ಮೈದಾನದಂತಹ ಹೈಟೆಕ್‌ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತಿದೆ. ಎರಡು ಸಾವಿರ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಬಹುದಾಗಿದೆ.

ಹೊಸ ಕಟ್ಟಡ ನಿರ್ಮಾಣ ಆದ ಬಳಿಕ ಪ್ರಾಥಮಿಕ ಹಂತದಿಂದ ದ್ವಿತೀಯ ಪಿಯುವರೆಗೂ ಒಂದೇ ಸೂರಿನಲ್ಲಿ ಶಿಕ್ಷಣ ದೊರೆಯಲಿದ್ದು, ಪ್ರವೇಶಾತಿ ಸಹ ಹೆಚ್ಚಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಡ್ಡು ಹೊಡೆಯಲು ಸಾಧ್ಯ ಆಗಲಿದೆ ಎಂದು ಹೊಂಗನೂರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

–ಎಚ್‌.ಎಂ. ವೆಂಕಟಪ್ಪ
–ಎಚ್‌.ಎಂ. ವೆಂಕಟಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT