‘ಪ್ರಥಮ ಭಾಷೆ: ಕನ್ನಡ ಬೇಡವೇಕೆ?’ ಎಂಬ ಜನಾರ್ದನ ಚ.ಶ್ರೀ. ಅವರ ಲೇಖನ (ಸಂಗತ, ಮೇ 1) ನಮ್ಮ ನಾಡಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಭಾಷಾ ವಿಷಯದ ಪ್ರಸ್ತುತ ಸ್ಥಾನಮಾನದ ಬಗೆಗಿನ ವಾಸ್ತವವನ್ನು ತೆರೆದಿಟ್ಟಿದೆ. ಆದರೆ ಪ್ರಶ್ನೆ ಇರುವುದು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬುದು.

ಈ ಸಮಸ್ಯೆ ಬಹುಶಃ ಸಂಸ್ಕೃತವನ್ನು ಪ್ರಥಮ ಭಾಷಾ ವಿಷಯವಾಗಿ ಅಳವಡಿಸಿಕೊಂಡಾಗಿನಿಂದಲೂ– ಸುಮಾರು 50 ವರ್ಷಗಳಿಂದ– ಇದೆ. ಗೋಕಾಕ್ ಚಳವಳಿಯ ಪರಿಣಾಮದಿಂದ ಕನ್ನಡ ವಿಷಯವು ಕಡ್ಡಾಯವಾಯಿತಾದರೂ ಕಡ್ಡಾಯ ಪ್ರಥಮ ಭಾಷೆ ಎಂದಾಗಲಿಲ್ಲ. ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಜಾರಿಗೆ ತಂದಾಗ ಪಠ್ಯಪುಸ್ತಕ ರಚನೆ, ಪ್ರಶ್ನೆಪತ್ರಿಕೆ ಹಾಗೂ ಮೌಲ್ಯಮಾಪನ ವಿಧಾನಗಳನ್ನು ರೂಪಿಸುವಲ್ಲಿ ಸಂಸ್ಕೃತದ ಪರವಾದ ಜಾಣತನದ ಹುನ್ನಾರವನ್ನೇ ಎಸಗಿದ್ದಾರೆ ಎಂದರೆ ತಪ್ಪಾಗಲಾರದು.

ಕನ್ನಡ ಎಲ್ಲರಿಗೂ ಗೊತ್ತಿರುವ ಭಾಷೆ, ಸಂಸ್ಕೃತ ಯಾರಿಗೂ ಗೊತ್ತಿಲ್ಲ ಎಂದೊ ಅಥವಾ ಅದು ಯಾರ ಮಾತೃಭಾಷೆಯೂ ಅಲ್ಲ ಎಂಬ ನೆಪದಲ್ಲಿ ತುಂಬಾ ಸರಳ ಹಾಗೂ ಸುಲಭಗೊಳಿಸಿಬಿಟ್ಟಿದ್ದಾರೆ. 8, 9 ಮತ್ತು 10ನೇ ತರಗತಿಗಳಲ್ಲಿ ಬೋಧಿಸುವ ಪ್ರಥಮ ಭಾಷೆ ಸಂಸ್ಕೃತವನ್ನು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ರೀತಿಯಲ್ಲಿ ರೂಪಿಸಲಾಗಿದೆ. ಮೂರು ವರ್ಷ ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೂಡ ಸಂಸ್ಕೃತದಲ್ಲಿ ಸ್ವಂತವಾಗಿ ಒಂದೆರಡು ಮಾತುಗಳನ್ನು ಆಡಲಾಗಲಿ, ಬರೆಯಲಾಗಲಿ ಬರುವುದಿಲ್ಲ ಎಂದರೆ ಬಹುಶಃ ಉತ್ಪ್ರೇಕ್ಷೆ ಆಗಲಾರದು. ಸಂಸ್ಕೃತವನ್ನಾಗಲಿ,
ಹಿಂದಿಯನ್ನಾಗಲಿ ಬೋಧನೆ ಮಾಡುವುದೆಂದರೆ ಬರೀ ಅನುವಾದ ಮಾಡುವುದು, ಅಷ್ಟೆ. ಪಠ್ಯಪುಸ್ತಕ ದಲ್ಲಿರುವ ಅತ್ಯಂತ ಸರಳವಾದ ಸಂಸ್ಕೃತ ವಾಕ್ಯಗಳನ್ನು ಓದಿ ನಂತರ ಅದನ್ನು ಕನ್ನಡದಲ್ಲಿ ಅನುವಾದಿಸಿ ಹೇಳುವುದು. ಪ್ರಶ್ನೆಗೆ ಉತ್ತರಗಳನ್ನು ಬರೆಸುವುದು, ಕಂಠಪಾಠ ಮಾಡಿಸುವುದು. ಪರೀಕ್ಷೆಯಲ್ಲಿ ಉತ್ತರವನ್ನು ಕನ್ನಡದಲ್ಲಾಗಲಿ, ಇಂಗ್ಲಿಷಿನಲ್ಲಾಗಲಿ ಬರೆಯಬಹುದು. ಸಂಸ್ಕೃತದಲ್ಲೇ ಉತ್ತರ ಬರೆಯಬೇಕಾದ ಸಂದರ್ಭದಲ್ಲಿ ಉರು ಹೊಡೆಸುವುದು. ಉದಾಹರಣೆಗೆ, ಎಂಟು ಅಂಕಗಳ ಪ್ರಬಂಧ ರಚನೆಯ ಪ್ರಶ್ನೆಯನ್ನು ತೆಗೆದುಕೊಳ್ಳಬಹುದು. ಸಂಸ್ಕೃತದಲ್ಲಿ ಕಾಡಿನ ಬಗ್ಗೆ ವಿಷಯವನ್ನು ಕೊಟ್ಟಿದ್ದರೆ, ಈಗಾಗಲೇ ಕಂಠಪಾಠ ಮಾಡಿರುವ ಐದಾರು ವಾಕ್ಯಗಳನ್ನು ಬರೆದರೆ ಸಾಕು ಪೂರ್ಣಾಂಕ ನೀಡಲಾಗುವುದು. ಇದೇ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಕೊಡುವುದೆಂಬುದು ಪೂರ್ವನಿರ್ಧರಿತವಾಗಿರುತ್ತದೆ.

ಆದರೆ ಕನ್ನಡದ ವಿಷಯದಲ್ಲಾದರೆ ಪ್ರತಿವರ್ಷ ಬೇರೆ ಬೇರೆ ವಿಷಯಗಳನ್ನು ವಿಭಿನ್ನವಾಗಿ ಕೊಡಲಾಗುತ್ತದೆ. ಮಕ್ಕಳು ಒಂದು ಪೂರ್ಣ ಹಾಳೆಯಷ್ಟು ಉತ್ತರಿಸಬೇಕು. ಪೀಠಿಕೆ, ಬೇರೆ ಬೇರೆ ಪ್ಯಾರಾಗಳಲ್ಲಿ ವಿಷಯದ ಬಗೆಗಿನ ವಿವರಣೆ ಮತ್ತು ಕೊನೆಯಲ್ಲಿ ಪರಿಸಮಾಪ್ತಿಯ ಮಾತುಗಳಿರಬೇಕು. ಇಷ್ಟೆಲ್ಲ ಬರೆದಿದ್ದರೂ ಕನ್ನಡ ಉಪಾಧ್ಯಾಯರು ಪಾಯಿಂಟ್ಸ್ ಸಾಲದು ಅಂತಲೊ, ಕಾಗುಣಿತ ದೋಷ ಇದೆ ಅಂತಲೊ ಪೂರ್ಣಾಂಕ ಕೊಡುವುದೇ ಇಲ್ಲ. ಈ ವಿಷಯದಲ್ಲಿ ಸಂಸ್ಕೃತದ ಮೇಷ್ಟ್ರುಗಳು ತುಂಬಾ ಉದಾರಿಗಳಾಗಿರುತ್ತಾರೆ.

ವರ್ಷಪೂರ್ತಿ ಬೋಧನೆ ಮಾಡಿದರೂ ಮುಗಿಯದ ಗದ್ಯ, ಪದ್ಯ, ಹಳಗನ್ನಡ, ವ್ಯಾಕರಣ, ಛಂದಸ್ಸು, ಅಲಂಕಾರ, ಒಗಟು, ಗಾದೆ, ಪಡೆನುಡಿ- ನುಡಿಗಟ್ಟು, ಜೋಡಿಪದ, ದ್ವಿರುಕ್ತಿ, ಪ್ರಬಂಧ ಹಾಗೂ ಪತ್ರಲೇಖನದಂತಹ ಭರಪೂರ ಪಠ್ಯದಿಂದ ಹೈರಾಣಾಗುವ ಕನ್ನಡ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಒಂದು ಕಡೆ. ಆರಾಮಾಗಿ ಪಠ್ಯವನ್ನು ಮುಗಿಸಿಕೊಳ್ಳುವ, ಅಷ್ಟೇ ಸುಲಭವಾಗಿ ಅಂಕಗಳನ್ನು ಬುಟ್ಟಿಗೆ ತುಂಬಿಸಿಕೊಳ್ಳುವ ಸಂಸ್ಕೃತದವರು ಮತ್ತೊಂದು ಕಡೆ. ಇದು ಯಾವ ನ್ಯಾಯ? ಕನ್ನಡಕ್ಕೆ ಮತ್ತು ಕನ್ನಡದ ಕಂದಮ್ಮಗಳಿಗೆ ಆಗುತ್ತಿರುವ ಈ ಅನ್ಯಾಯವನ್ನು ಯಾವ ನ್ಯಾಯದ ಗಂಟೆ ಬಾರಿಸಿ ದೂರಲಾದೀತು ಎಂಬುದೇ ಕಗ್ಗಂಟಾಗಿದೆ.

ಶಿಕ್ಷಣ ಇಲಾಖೆಗೆ ಕಡತಗಳ ವಿಲೇವಾರಿಯೇ ಪ್ರಮುಖವಾಗಿಬಿಟ್ಟಿದೆ. ಪೋಷಕರಿಗೆ ಗರಿಷ್ಠ ಅಂಕ ಗಳಿಕೆಯೇ ಶಿಕ್ಷಣ ಎಂಬ ಭ್ರಮೆ ಆವರಿಸಿಕೊಂಡಿದೆ. ಮಕ್ಕಳಿಗಂತೂ ಅನರ್ಥಕಾರಿಯಾದ ಮೃಗೀಯ ಸ್ಪರ್ಧಾ ಪ್ರಪಂಚದಲ್ಲಿ ದಿಕ್ಕುಗಾಣದೆ ತಿಣುಕಾಡುವುದೇ ಬದುಕಾಗಿದೆ. ಸರ್ಕಾರಿ ಇಲಾಖೆಗೆ, ಆಡಳಿತ ಮಂಡಳಿಗೆ ಹೆದರಿಕೊಂಡು ಹೊಟ್ಟೆಹೊರೆಯನ್ನು ಹೊತ್ತು ಕಾಲಯಾಪನೆ ಮಾಡುತ್ತಿರುವ ಅಸಹಾಯಕ ಶಿಕ್ಷಕರು ಸಂಘಟಿತರಾಗಿ ಈ ಅವ್ಯವಸ್ಥೆಯ ವಿರುದ್ಧ ಆಂದೋಲನ ಕೈಗೊಳ್ಳುವುದು ಹಗಲುಗನಸಾದೀತು! ಈ ಘೋರಾರಣ್ಯದಲ್ಲಿ ಹಾದಿ ತಪ್ಪಿರುವ ಶಿಕ್ಷಣವೆಂಬ ಕೂಸನ್ನು ಕಾಪಾಡುವವರು ಯಾರು?

ಈ ನಡುವೆ ಗಣಿತ, ವಿಜ್ಞಾನವೇ ಮುಖ್ಯ ಮತ್ತು ಬುದ್ಧಿವಂತರಿಗೆ ಮೀಸಲು ಎಂಬ ಹಾಗೂ ಭಾಷೆ, ಸಮಾಜವಿಜ್ಞಾನ ಗೌಣ ಮತ್ತು ಜಾಣರಲ್ಲದವರ ಕ್ಷೇತ್ರಗಳು ಎಂಬ ಐತಿಹಾಸಿಕ ಅಜ್ಞಾನವನ್ನು ಹೊಡೆದುರುಳಿಸುವುದು ಕೂಡ ದೊಡ್ಡ ಸವಾಲಿನ ಪ್ರಶ್ನೆಯಾಗಿದೆ.

ಈ ಸಂದರ್ಭದಲ್ಲಿ ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ...’ ಎಂಬ ಬಸವಣ್ಣನವರ ವಚನ ನಮ್ಮ ಕಣ್ಣು ತೆರೆಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.