ಹೊಸ ತಲೆಮಾರುಗಳು ಕನ್ನಡದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವುದಕ್ಕೂ, ಕನ್ನಡ ಭಾಷಾ ಕಲಿಕೆಯಲ್ಲಿ ವ್ಯಾಕರಣವನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೂ ಸಂಬಂಧವಿದೆ.

ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವಲ್ಲಿ ನಮ್ಮ ಶಿಕ್ಷಣ ಕ್ರಮ ವಿಫಲವಾಗುತ್ತಿದೆಯೆ? ಶಾಲೆ– ಕಾಲೇಜುಗಳಿಂದ ಹೊರಬರುತ್ತಿರುವ ಮಕ್ಕಳನ್ನು ಗಮನಿಸಿದರೆ, ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆಯುತ್ತದೆ. ಪದವಿ ಗಳಿಸಿದವರೂ ಕನ್ನಡವನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ಬರೆಯಲು ತಿಣುಕುತ್ತಿರುವ ಸ್ಥಿತಿ ಕನ್ನಡ ಭಾಷೆಯ ಕಲಿಕೆಯಲ್ಲಿನಸಮಸ್ಯೆಗಳನ್ನು ಸೂಚಿಸುವಂತಿದೆ.

ಭಾಷಾ ಬೋಧನೆಯಲ್ಲಿ ವಿಷಯಕ್ಕೆ ಮಹತ್ವ ನೀಡಿ ಅದನ್ನಷ್ಟೇ ಬೋಧಿಸುವುದು ನಮ್ಮ ಕಲಿಕಾ ಕ್ರಮದಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಬರಹದಲ್ಲಿನ ವಿಷಯದ ಜೊತೆಗೆ, ಆ ವಿಷಯ ನಿರೂಪಣೆಗೊಂಡಿರುವ ಭಾಷೆ ಹಾಗೂ ಆ ಭಾಷೆಯಲ್ಲಿನ ವ್ಯಾಕರಣದ ಸಂಗತಿಗಳ ಬಗ್ಗೆ ಗಮನ ಕೊಡುವುದು ಪರಿಣಾಮಕಾರಿ ಕಲಿಕೆಯ ಲಕ್ಷಣವಾಗಿದೆ. ವ್ಯಾಕರಣದೊಂದಿಗೆ ಭಾಷಾ ವಿಷಯಗಳನ್ನು ಬೋಧಿಸಿದಾಗ, ಮಕ್ಕಳು ಭಾಷಾ ಕೌಶಲಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಕನ್ನಡ ಭಾಷಾ ಬೋಧಕರು ತಮ್ಮ ಬೋಧನಾ ಕಾರ್ಯವನ್ನು ಕೊಂಚ ಪರಿಷ್ಕರಿಸಿಕೊಂಡು, ವಿಷಯದ ಜೊತೆಗೆ ವ್ಯಾಕರಣ ಬೋಧನೆಯನ್ನು ವ್ಯವಸ್ಥಿತವಾಗಿ ಮಾಡಿದಾಗ ಮಾತ್ರ ಕನ್ನಡ ಭಾಷೆಯ ಕಲಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪರಿಣತಿ ಹೊಂದುವುದು ಸಾಧ್ಯವಾಗುತ್ತದೆ.

ತಪ್ಪು ತಿಳಿವಳಿಕೆಯಿಂದಾಗಿ ವ್ಯಾಕರಣವನ್ನು ನಿರ್ಲಕ್ಷಿಸುವವರಿದ್ದಾರೆ. ಗಣಿತ ಸೂತ್ರಗಳ ರೂಪದಲ್ಲಿ ವ್ಯಾಕರಣವನ್ನು ನೋಡುತ್ತಾ, ‘ವ್ಯಾಕರಣ ಪಂಡಿತರಿಗೇ ಹೊರತು ಜನಸಾಮಾನ್ಯರಿಗಲ್ಲ’ ಎಂದು ಭಾವಿಸಿದವರೂ ಇದ್ದಾರೆ. ಇದು ತಪ್ಪು ತಿಳಿವಳಿಕೆ. ಭಾಷೆಯ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ವ್ಯಾಕರಣ ವನ್ನು ತಿಳಿಯುವುದು ಅಗತ್ಯ. ನಮ್ಮ ದೇಹದ ಹೊರ ಆಕಾರವನ್ನು ಭಾಷೆ ಎಂದು ಕರೆಯುವುದಾದರೆ, ಒಳಗಿನ ಅಂಗಾಂಗಗಳ ರಚನೆಯೇ ವ್ಯಾಕರಣವಾಗಿದೆ.

ಭಾಷೆಯೊಂದರ ಪ್ರಾಯೋಗಿಕ ವಿಶ್ಲೇಷಣೆಯೇ ವ್ಯಾಕರಣ ಎಂದು ತಜ್ಞರು ಹೇಳಿದ್ದಾರೆ. ಈ ಮಾತಿನಂತೆ, ಯಾವುದೇ ಒಂದು ಭಾಷೆಯನ್ನು ಪ್ರಾಯೋಗಿಕವಾಗಿ (ವೈಜ್ಞಾನಿಕವಾಗಿ) ವಿಶ್ಲೇಷಿಸುವುದು ಸಾಧ್ಯವಿದೆ ಹಾಗೂ ಆ ವಿಶ್ಲೇಷಣೆಯೇ ವ್ಯಾಕರಣ. ಅಂದರೆ, ವ್ಯಾಕರಣವು ಒಂದು ಭಾಷೆಯಲ್ಲಿ ಪದಗಳನ್ನು ಪ್ರಯೋಗಿಸುವ ರೀತಿನೀತಿಗಳನ್ನು ಪ್ರಾಯೋಗಿಕವಾಗಿ ಹೇಳುವ ಶಾಸ್ತ್ರವಾಗಿದೆ.

ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಸಲು ಭಾಷೆಯನ್ನು ಮಾಧ್ಯಮವನ್ನಾಗಿ ಉಪಯೋಗಿಸುತ್ತೇವೆ. ಭಾವನೆಗಳನ್ನು ವ್ಯವಸ್ಥಿತ ರೂಪಕ್ಕೆ ತರುವಲ್ಲಿ ವ್ಯಾಕರಣ ಮಹತ್ವದ ಪಾತ್ರ ವಹಿಸುತ್ತದೆ. ವ್ಯಾಕರಣವನ್ನು ಪ್ರೌಢ ಹಂತದಲ್ಲಿ ಕಲಿಸಿದರಾಯಿತು; ಶಾಲೆಗಳಲ್ಲಿ ವ್ಯಾಕರಣ ಬೋಧನೆಯ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುವವರೂ ಇದ್ದಾರೆ. ಪ್ರಾಥಮಿಕ ಹಂತದಲ್ಲಿ ವ್ಯಾಕರಣ ಕಲಿಯದೆ ಹೋದರೆ, ಭಾಷಾ ಕಲಿಕೆಯ ತಳಹದಿಯೇ ದುರ್ಬಲಗೊಳ್ಳುತ್ತದೆ. ವ್ಯಾಕರಣದ ಪ್ರಾಥಮಿಕ ಸಂಗತಿಗಳನ್ನು ಶಾಲೆ ಗಳಲ್ಲಿಯೇ ಪರಿಚಯಿಸಿಕೊಳ್ಳುವುದು ಅಗತ್ಯ. ಕನ್ನಡವನ್ನು ಕಲಿಸುವ ಭಾಷಾ ಶಿಕ್ಷಕ, ತರಗತಿಯಲ್ಲಿ ಪಠ್ಯದಲ್ಲಿನ ವ್ಯಾಕರಣದ ಸಂಗತಿಗಳನ್ನು ಪರಿಚಯಿಸಿದರಷ್ಟೇ ಸಾಲದು; ಪ್ರತ್ಯೇಕವಾಗಿ ವ್ಯಾಕರಣ ಬೋಧನೆಯನ್ನೂ ಮಾಡಬೇಕು.

ಭಾಷಾ ಬೋಧನೆ ಉಳಿದೆಲ್ಲಾ ವಿಷಯಗಳ ಬೋಧನೆ ಯಂತಲ್ಲ. ಇಲ್ಲಿ ಭಾಷೆಯೇ ಪ್ರಧಾನವಾಗಿರುವುದರಿಂದ, ಭಾಷಾ ಬೋಧಕ ಮಕ್ಕಳಲ್ಲಿ ಭಾಷಾ ಬೆಳವಣಿಗೆಯ ಕಡೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಭಾಷೆಯಲ್ಲಿ ಬರುವ ಅಕ್ಷರ, ಪದ, ವಾಕ್ಯ, ಧ್ವನಿ ಮುಂತಾದವುಗಳನ್ನು ಪ್ರಾಯೋಗಿಕವಾಗಿ (ಮಾತನಾಡಲು ಮತ್ತು ಬರೆಯಲು) ಕಲಿಸುವುದರ ಕಡೆಗೆ ಗಮನವನ್ನು ನೀಡಬೇಕಾಗುತ್ತದೆ. ಅಲ್ಲದೆ, ಮಕ್ಕಳ ಭಾವಕೋಶದ ಪೋಷಣೆಗೆ ಮತ್ತು ಅವರ ಬರವಣಿಗೆಯಲ್ಲಿ, ಓದುಗಾರಿಕೆಯಲ್ಲಿ ಪರಿಣಾಮಕಾರಿಯಾದ ಬದಲಾವಣೆಯನ್ನು ತರಬೇಕಾದರೆ ವ್ಯಾಕರಣದ ನೆರವು ಅಗತ್ಯ.

ಮಕ್ಕಳಿಗೆ ಪ್ರತ್ಯೇಕವಾಗಿ ವ್ಯಾಕರಣ ಬೋಧನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ವ್ಯಾಕರಣ ಕಲಿಸುವುದರಿಂದ ಮಕ್ಕಳ ಭಾಷಾಭ್ಯಾಸಕ್ಕೆ ಮತ್ತು ಭಾಷಾ ಬೆಳವಣಿಗೆಗೆ ನೀರೆರೆದಂತಾಗುತ್ತದೆ. ಮಕ್ಕಳು ಬರೆಯುವುದನ್ನು ವ್ಯಾಕರಣಬದ್ಧವಾಗಿ ಬರೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಎಳೆಯರಲ್ಲಿ ಉತ್ತಮ ಮಾತುಗಾರಿಕೆಯನ್ನು ರೂಪಿಸಲು, ಉಚ್ಚಾರಣೆಯಲ್ಲಿರುವ ತಪ್ಪುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಭಾಷಾ ವಿಷಯದಲ್ಲಿ ಹೆಚ್ಚು ಅಂಕಗಳನ್ನು ತೆಗೆಯಲೂ ವ್ಯಾಕರಣದ ಕಲಿಕೆ ಪೂರಕವಾದುದು. ಮಕ್ಕಳಲ್ಲಿ ಸೃಜನಶೀಲತೆಯನ್ನುಬೆಳೆಸುವ ಹಾಗೂ ಶಬ್ದ– ವಾಕ್ಯ ರಚನೆಯ ಕೌಶಲದ ಬೆಳವಣಿಗೆಯೂ ವ್ಯಾಕರಣದಿಂದ ಸಾಧ್ಯವಾಗುತ್ತದೆ.

ಮಕ್ಕಳಿಗೆ ವ್ಯಾಕರಣವನ್ನು ಕಲಿಸುವುದು, ಭಾಷಾ ಬೋಧಕರಿಗೆ ಬೋಧನೆಯಲ್ಲಿ ಸಂತೃಪ್ತಿ ಹೆಚ್ಚಿಸುವ ಸಂಗತಿಗಳಲ್ಲೊಂದು. ಹಳಗನ್ನಡದ ಕೃತಿಗಳನ್ನು ಅರ್ಥಪೂರ್ಣವಾಗಿ ವಾಚಿಸಲು ವ್ಯಾಕರಣದ ಕೌಶಲ ಬೇಕೇ ಬೇಕು. ಹೊಸ ತಲೆಮಾರು ಪ್ರಾಚೀನ ಕನ್ನಡ ಪಠ್ಯಗಳಿಂದ ದೂರವಾಗಿರುವುದಕ್ಕೆ, ಅವರಿಗಿರುವ ವ್ಯಾಕರಣ ಜ್ಞಾನದ ಕೊರತೆಯೇ ಕಾರಣವಾಗಿದೆ.

ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಭಾಷಾ ಶಿಕ್ಷಕರ ಪಾಲಿಗೆ ಬರೀ ಶೈಕ್ಷಣಿಕ ಚಟುವಟಿಕೆ ಅಥವಾ ಕರ್ತವ್ಯವಾಗಿಯಷ್ಟೇ ಈಗ ಉಳಿದಿಲ್ಲ. ಕನ್ನಡದ ಅಕ್ಷರಗಳನ್ನು ಮಕ್ಕಳ ಎದೆಯಲ್ಲಿ ಅಕ್ಕರೆಯಿಂದ ಬಿತ್ತುವುದು ಬದ್ಧತೆಯೂ ಹೌದು. ಹಿಂದಿ ಮತ್ತು ಇಂಗ್ಲಿಷ್ ನಡುವೆ ಬಸವಳಿಯುತ್ತಿರುವ ಕನ್ನಡಕ್ಕೆ ತ್ರಾಣ ತುಂಬುವಲ್ಲಿ ‘ಕನ್ನಡ ಶಿಕ್ಷಕ’ರ ಪಾತ್ರ ಮಹತ್ವದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.