ನಡೆ–ನುಡಿ ಅಭಿನ್ನವಾದ ಸಂತ ಪರಂಪರೆ ತರಳಬಾಳು ಬೃಹನ್ಮಠದ ಶಿವಕುಮಾರ ಸ್ವಾಮೀಜಿ ಅವರದು. ತತ್ವಗಳನ್ನು ಮಾರಿ ಮಠ ಕಟ್ಟಿಕೊಳ್ಳುವುದನ್ನು ಅವರು ಸಹಿಸುತ್ತಿರಲಿಲ್ಲ.

ಮಠ ಮತ್ತು ಮಠದ ಸ್ವಾಮಿಗಳೆಂದರೆ ಕಂದಾಚಾರ, ಅವೈಚಾರಿಕತೆಗಳ ತವರು ಎನ್ನುವ ಭಾವನೆ ಇದೆ. ಇದಕ್ಕೆ ಅಪವಾದ, ಶ್ರೀತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಆ ಮಠದ ಪೂಜ್ಯರು. ಈ ಮಠದ ಮೂಲಪುರುಷ ವಿಶ್ವಬಂಧು ಮರುಳಸಿದ್ಧರು. ಹುಟ್ಟಿನ ಕಾರಣಕ್ಕಾಗಿ ಸಮಗಾರರು. ತಮ್ಮ ಚಿಂತನೆ, ಸಾಮಾಜಿಕ ಕಳಕಳಿ, ದೂರದೃಷ್ಟಿಯ ಕಾರಣದಿಂದ ‘ವಿಶ್ವಬಂಧು’ ಎನಿಸಿಕೊಂಡವರು. ಅವರಿಂದ ಸ್ಥಾಪಿತವಾದದ್ದೇ ‘ತರಳಬಾಳು ಜಗದ್ಗುರು ಪೀಠ’. ಈ ಪೀಠದಲ್ಲಿ ಈಗಾಗಲೇ 21 ಜಗದ್ಗುರುಗಳು ಸಮಾಜೋ–ಧಾರ್ಮಿಕ ಸೇವಾಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಅವರಲ್ಲಿ 20ನೆಯ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವ್ಯಕ್ತಿತ್ವ, ಸಮಾಜ ಕಟ್ಟಿದ ರೀತಿ, ಶಿಕ್ಷಣಕ್ಕೆ ನೀಡಿದ ಮಹತ್ವ, ಧರ್ಮಪ್ರಚಾರದ ವಿಧಾನ, ಶಿಷ್ಯ ವಾತ್ಸಲ್ಯ, ತಾಯ್ತನ, ನ್ಯಾಯನಿಷ್ಠುರತೆ, ತ್ಯಾಗ ಮುಂತಾದವುಗಳನ್ನು ಮರೆಯಲು ಸಾಧ್ಯವಿಲ್ಲ. ಅವರು ತರಳಬಾಳು ಜಗದ್ಗುರು ಪೀಠಾಧ್ಯಕ್ಷರಾಗಿದ್ದು 1940ರಲ್ಲಿ. ಆಗ ಮಠ ಒಡೆದ ಮಡಕೆಯಂತಾಗಿತ್ತು. ಮಡಕೆಯ ಚೂರುಗಳಿಂದಲೇ ಹೊಸ ಮಡಕೆಯನ್ನು ನಿರ್ಮಾಣ ಮಾಡಿದ್ದು ಅವರ ಹೆಗ್ಗಳಿಕೆ.

ಗುರುಗಳೊಮ್ಮೆ ತಮ್ಮ ಆಶೀರ್ವಚನದಲ್ಲಿ ‘ಮನೆಯಲ್ಲಿ ಯಾವ ಕೆಲಸಕ್ಕೂ ಬಾರದವನನ್ನು ಒಂದು ಮಠಕ್ಕೆ ಮರಿಯನ್ನಾಗಿ ಮಾಡಿದರೆ, ಸಾಲ ಹೆಚ್ಚಾಗಿ ಸೋಮಾರಿಯಾದವನನ್ನು ಸೈನ್ಯಕ್ಕೆ ಸೇರಿಸಿದರೆ, ಊರ ಉಡಾಳನಾದ ನಿರುದ್ಯೋಗಿಯೊಬ್ಬನು ರಾಜಕೀಯ ಸೇರಿದರೆ ಅಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?’ ಎಂದು ಪ್ರಶ್ನಿಸಿದ್ದನ್ನು ಮಹಾದೇವ ಬಣಕಾರರು ದಾಖಲಿಸಿದ್ದಾರೆ. ಪೂಜ್ಯರ ನಡಾವಳಿಯನ್ನು ಕಂಡ ನಮಗೆ ನೆನಪಾಗುವುದು, ‘ಹೇಡಿಂಗೆ ಹಿರಿತನವು, ಮೂಢಂಗೆ ಗುರುತನವು, ನಾಡ ನೀಚಂಗೆ ದೊರೆತನವು ದೊರೆತರೆ ನಾಡಿಂಗೆ ಕೇಡು ತಪ್ಪದು ಸರ್ವಜ್ಞ’ ಎನ್ನುವ ತ್ರಿಪದಿ.

ಹಾ.ಮಾ. ನಾಯಕ ಅವರು ಪೂಜ್ಯರ ‘ದಿಟ್ಟಹೆಜ್ಜೆ ಧೀರಕ್ರಮ’ ಕೃತಿಗೆ ಬರೆದ ‘ನುಡಿಗಾಣಿಕೆ’ಯಲ್ಲಿ, ‘ನಾನು ಮಹಾಸ್ವಾಮಿಗಳವರನ್ನು ಕಂಡದ್ದು ಒಂದೇ ಒಂದು ಸಲ. ಅವರ ಒಂದು ಕಾಲೇಜಿನ ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯದ ಸಂಯೋಜಕ ಸಮಿತಿಯಲ್ಲಿ ಸಿರಿಗೆರೆಗೆ ಹೋಗಿದ್ದೆ. ಸ್ವಾಮಿಗಳನ್ನು ಮೊದಲ ಬಾರಿಗೆ ಕಂಡ ಚಿತ್ರ ನನ್ನ ಮನಸ್ಸಿನಲ್ಲಿ ಹಸುರಾಗಿದೆ. ಯಾವುದೋ ಒಂದು ಕಟ್ಟಡದ ಕೆಲಸ ನಡೆಯುತ್ತಿತ್ತು. ಸ್ವಾಮಿಗಳು ಮಣ್ಣು ರಾಶಿಯೊಂದರ ಮೇಲೆ ನಿಂತು ಕೆಲಸಗಾರರಿಗೆ ಸೂಚನೆ ಕೊಡುತ್ತಿದ್ದರು. ಕಾವಿಯುಡುಗೆಯಿಂದ ಸ್ವಾಮಿಗಳೆಂದು ಗುರುತಿಸಿದೆ. ಇಲ್ಲದಿದ್ದರೆ ಕೆಲಸಗಾರರಲ್ಲಿ ಅವರೊಬ್ಬ ಕೆಲಸಗಾರರು. ಅದು ಕೈಲಾಸವಾಗುವ ಕಾಯಕ. ಕರ್ಮಯೋಗಿ ಸಿದ್ಧರಾಮನ ಸಂಕೇತ’ ಎಂದಿದ್ದಾರೆ.

ನಾವು ಸಿರಿಗೆರೆಯಲ್ಲಿ ಪಿಯುಸಿ ಓದುತ್ತಿದ್ದಾಗ ‘ಮಹಾಮನೆ’ಯ ಕಟ್ಟಡಕ್ಕೆ ಆರ್ಸಿಸಿ ಹಾಕುವ ಕೆಲಸ ನಡೆದಿತ್ತು. ಮರಳು, ಜಲ್ಲಿ ಮಿಶ್ರಣದ ಕಾಂಕ್ರೀಟನ್ನು ಬಾಣಲಿಯಲ್ಲಿ ತುಂಬಿ ಸಾಗಿಸಲು ವಿದ್ಯಾರ್ಥಿಗಳ ಬಳಕೆ ಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಗುರುಗಳೇ ಮರಳು ತುಂಬಿ, ಪುಟ್ಟಿಯನ್ನು ವಿದ್ಯಾರ್ಥಿಗಳ ತಲೆಯ ಮೇಲೆ ಇಡುತ್ತಿದ್ದರು. ಪೂಜ್ಯರೇ ಕೈ ಮುಟ್ಟಿ ಕೆಲಸ ಮಾಡುವಾಗ ವಿದ್ಯಾರ್ಥಿಗಳು ಸೋಮಾರಿಯಾಗಲು ಹೇಗೆ ಸಾಧ್ಯ?

ಜಾತ್ಯತೀತ ಗುಣ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಮೀಸಲಾತಿ ಸೌಲಭ್ಯ ಇಲ್ಲದಿದ್ದಾಗಲೇ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಎಲ್ಲ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿನಿಲಯ, ಮಠದಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸುತ್ತಿದ್ದರು. ಕೆಲವು ಮಡಿವಂತ ಲಿಂಗಾಯತರು ‘ಬುದ್ಧಿ, ಲಿಂಗಾಯತರಿಗೇ ಬೇರೆ, ಇತರೆ ಜನಾಂಗದವರಿಗೇ ಬೇರೆ ಊಟ, ವಸತಿಯ ವ್ಯವಸ್ಥೆ ಮಾಡಿರಿ’ ಎಂದಾಗ, ‘ಬೇಕಾದರೆ ಪೀಠವನ್ನು ತ್ಯಜಿಸುತ್ತೇವೆ, ಜಾತ್ಯತೀತ ಮನೋಭಾವನೆಯನ್ನಲ್ಲ’ ಎಂದು ಹೇಳಿ, ಅವರ ಮನಸ್ಸನ್ನು ಪರಿವರ್ತನೆ ಮಾಡಿದ ಶರಣರವರು.

ಬಸವಣ್ಣನವರ ಸಂತಾನ ತಾವೆನ್ನುವವರೇ ಮತ್ತೆ ಲಿಂಗಾಯತ ಒಂದು ಜಾತಿ ಎನ್ನುವುದನ್ನು ಅವರು ಪ್ರತಿಭಟಿಸುತ್ತಿದ್ದರು. ‘ಅಸಂಬದ್ಧ ಜಾತಿಗಳನ್ನು ನಿರ್ಮೂಲನೆ ಮಾಡಿದ ಬಸವಣ್ಣನು ಲಿಂಗಾಯತ ಜಾತಿಯನ್ನು ಸೃಷ್ಟಿಸಿದನೇ’ ಎಂದು ಕೇಳುತ್ತ, ಅದೊಂದು ಧರ್ಮ, ತತ್ವ, ಸಿದ್ಧಾಂತ ಎಂದು ಪ್ರತಿಪಾದಿಸುತ್ತಿದ್ದರು.

ಮೂಢಾಚರಣೆಗಳನ್ನು ಗುರುಗಳಂತೆ ವಿರೋಧಿಸಿದವರು ವಿರಳ. ಏನೇ ಕಾರ್ಯ ಮಾಡಲು ಅಮಾವಾಸ್ಯೆ, ಹುಣ್ಣಿಮೆ, ರಾಹುಕಾಲ, ಶುಭದಿನ ಎಂದು ಅವರು ನೋಡಿದವರಲ್ಲ. ತಾವೇ ಒಬ್ಬ ಮಠಾಧಿಪತಿಯಾಗಿ ಬೇರೆ ಮಠಾಧೀಶರ ಅವಗುಣಗಳನ್ನು ಹೇಳಲು ಹಿಂದೆಮುಂದೆ ನೋಡಿದವರೂ ಅಲ್ಲ. ಅದಕ್ಕೆ ಸಾಕ್ಷಿ ಅವರ ‘ಆತ್ಮನಿವೇದನೆ’ ಮತ್ತು ‘ದಿಟ್ಟಹೆಜ್ಜೆ ಧೀರಕ್ರಮ’ ಪುಸ್ತಕಗಳು. ತತ್ವಗಳನ್ನು ಮಾರಿ, ಗಾಳಿಗೆ ತೂರಿ ಮಠ ಕಟ್ಟಿಕೊಳ್ಳುವುದನ್ನು ಅವರೆಂದೂ ಸಹಿಸುತ್ತಿರಲಿಲ್ಲ.

ಒಮ್ಮೆ ಸ್ಥಾನಮಾನ ಪಡೆದವರು ಸಾಯುವವರೆಗೂ ಆ ಸ್ಥಾನಮಾನದಲ್ಲೇ ಇರಬೇಕೆಂದು ತಂತ್ರಗಳನ್ನು ಮಾಡುವುದು ಸರ್ವೇಸಾಮಾನ್ಯ. ಇದಕ್ಕೆ ಅಪವಾದವಾಗಿದ್ದವರು ಗುರುಗಳು. ಅವರು ತಮ್ಮ 60ನೇ ವಯಸ್ಸಿಗೆ ಪೀಠತ್ಯಾಗ ಮಾಡುವುದಾಗಿ ತಮ್ಮ 53ನೇ ವಯಸ್ಸಿನಲ್ಲೇ ಘೋಷಿಸಿದ್ದರು. 60 ವರ್ಷ ತುಂಬುತ್ತಲೇ ತ್ಯಾಗಪತ್ರವನ್ನು ಸಲ್ಲಿಸಿ, ಯೋಗ್ಯ ಉತ್ತರಾಧಿಕಾರಿಗಳನ್ನು ಮಾಡಿಕೊಳ್ಳಿ ಎಂದು ಸಾಧು ಸದ್ಧರ್ಮ ಸಂಘಕ್ಕೆ ಹೇಳಿದವರು. ತ್ಯಾಗಪತ್ರ ಕೊಟ್ಟನಂತರ ಸಿರಿಗೆರೆಯಲ್ಲಿರದೆ, ಮುತ್ತಗದೂರಿನ
ಶ್ರೀ ಗುರುಶಾಂತನಿಕೇತನದಲ್ಲಿ ನಿಜವಾದ ಸಂತರ ಜೀವನ ನಡೆಸಿದರು. 1992ರ ಸೆಪ್ಟೆಂಬರ್ 24ರಂದು ಶಿವನ ಪಾದ ಸೇರಿದರು. ಅವರು ತೋರಿದ ಬೆಳಕು ನಮ್ಮ ನಡಿಗೆಗೆ ದಾರಿದೀಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.