ದ್ವಿಚಕ್ರ ವಾಹನಗಳು ಬಹುತೇಕ ಪ್ರತಿಯೊಬ್ಬರ ಮನೆಗಳನ್ನೂ ಅಲಂಕರಿಸಿರುವ ಕಾಲಘಟ್ಟವಿದು. ಎರಡು ಮೂರು ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಕಾರು ಮತ್ತು ಜೀಪು ಈಗ ಲಕ್ಸುರಿ ಆಗಿ ಉಳಿದಿಲ್ಲ. ಬದಲಿಗೆ ಸ್ವಂತ ವಾಹನ ಅವಶ್ಯಕತೆಯಾಗಿ ಬದಲಾಗಿದೆ. ಆದರೆ, ನಿತ್ಯವೂ ಅಡ್ಡಾದಿಡ್ಡಿ ವಾಹನ ಚಾಲನೆಗೆ ಸಂಬಂಧಿಸಿದಂತೆ ಅಲ್ಲಲ್ಲಿ ಸಣ್ಣಪುಟ್ಟ ಅಥವಾ ದೊಡ್ಡಮಟ್ಟದ ಜಗಳಗಳು ನಡೆಯುವುದೂ ಹೆಚ್ಚಾಗಿದೆ.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಯಾವುದೇ ನಗರ, ಪಟ್ಟಣಗಳಲ್ಲಿ ಪಾರ್ಕಿಂಗ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಮಾರುಕಟ್ಟೆಯಂಥ ಜನನಿಬಿಡ ಪ್ರದೇಶಗಳಲ್ಲಿ
ಕಂಡುಬರುತ್ತಿದ್ದ ಪಾರ್ಕಿಂಗ್ ಸಮಸ್ಯೆ ಪ್ರಸ್ತುತ ಗಲ್ಲಿಗಳಲ್ಲಿನ ಮನೆಗಳೆದುರೂ ಉದ್ಭವಿಸಿದೆ. ರಸ್ತೆ ಅಪಘಾತಗಳೂ ಜನಜೀವನದ ಭಾಗ ಎಂಬಂತಾಗಿವೆ.

ಹೆದ್ದಾರಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಪ್ರಾಣಹಾನಿ ಉಂಟುಮಾಡುವ ಭೀಕರ ಅಪಘಾತಗಳು ಈಗ ಪ್ರತಿ ರಸ್ತೆಗೂ ವ್ಯಾಪಿಸಿವೆ. ಬೈಕ್ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳು ವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರಲ್ಲಿ ಯುವಕರ ಪ್ರಮಾಣವೇ ಅಧಿಕ. ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪರಸ್ಪರ ಡಿಕ್ಕಿ ಪ್ರಕರಣಗಳು ದಾಖಲಾಗುತ್ತಲೇ ಇವೆ. ಸಂಚಾರ ನಿಯಮಗಳನ್ನು ಪಾಲಿಸದಿರುವುದೂ, ವಿಪರೀತ ವೇಗ ಮತ್ತೂ ಅತಿಯಾದ ಧಾವಂತ ದುರಂತಕ್ಕೆ ಕಾರಣವಾಗುತ್ತಿದೆ.

ಅಪಘಾತವಾದಾಗಿನ ಪ್ರಾಣಹಾನಿಯ ಪ್ರಕರಣಗಳಲ್ಲಿ ಆಪ್ತರನ್ನು ಕಳೆದುಕೊಂಡವರು ಮಾತ್ರ ನೋವನುಭವಿಸುತ್ತಿಲ್ಲ. ಅಪಘಾತ ಗಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುವವರ ಕುಟುಂಬ ಸದಸ್ಯರೂ ಹೆಚ್ಚು ನೋವು ಎದುರಿಸುತ್ತಿದ್ದಾರೆ.
ಬಹುತೇಕ ಯುವಜನರೇ ಅಂಗ ಊನಕ್ಕೆ ಒಳಗಾಗಿ, ಜೀವನವಿಡೀ ಪರಿತಪಿಸುವಂತಾಗಿದೆ.

ಯುವಜನರು ಸಂಚಾರ ನಿಯಮಗಳನ್ನು ಪಾಲಿಸದಿರುವುದೇ ಅವಘಡಗಳಿಗೆ ಕಾರಣವಾಗಿದೆ. ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಗುವ ವಾಹನಗಳ ಸವಾರರು ನಿಯಮ ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಅವಲೋಕಿಸುವಷ್ಟು ಸಂಖ್ಯೆಯ ಪೊಲೀಸರೂ ಇಲ್ಲ. ಅನೇಕ ನಗರಗಳಲ್ಲಿ ಸಿ.ಸಿ. ಕ್ಯಾಮೆರಾಗಳ ಕಣ್ಗಾವಲನ್ನು ಇರಿಸಿ ಸಂಚಾರ ನಿಯಮ ಉಲ್ಲಂಘನೆಯಂಥ ಪ್ರಕರಣ ಗಳನ್ನು ಪತ್ತೆ ಮಾಡಿ, ದಂಡ ವಿಧಿಸಿ, ಅವರವರ ವಿಳಾಸಕ್ಕೇ ನೋಟಿಸ್ ಕಳಿಸಲಾಗುತ್ತಿದೆ. ಆದರೆ, ದಂಡ ಪಾವತಿಸುವವರ ಸಂಖ್ಯೆ ಶೇ 10ರಷ್ಟೂ ಇಲ್ಲ. ಶೇ 50ರಷ್ಟು ರಿಯಾಯಿತಿ ನೀಡಿ ದಂಡ ಪಾವತಿಸುವಂತೆ ಕೋರಿದರೂ ದಾವಣಗೆರೆ ಜಿಲ್ಲೆಯೊಂದರಲ್ಲೇ ಅರ್ಧದಷ್ಟು ಜನ ಮಾತ್ರ ದಂಡದ ಹಣ ಕಟ್ಟಿದ್ದು, ಮಿಕ್ಕವರು ತಲೆ ಕೆಡಿಸಿಕೊಂಡಿಲ್ಲ. ‘ದಂಡ ಕಟ್ಟದಿದ್ದರೂ ಶಿಕ್ಷೆ ಇಲ್ಲ’ ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸುವ ವರಲ್ಲಿ ಅಸಡ್ಡೆ ಮನೆಮಾಡಿದೆ.

ಹದಿನೆಂಟು ವರ್ಷ ಮೀರದ ಅನೇಕರು ದ್ವಿಚಕ್ರ ವಾಹನ ಸವಾರಿ ಮಾಡುವುದು ಈಗೀಗ ಮಾಮೂಲಿ ಎಂಬಂತಾಗಿದೆ. ಚಾಲನಾ ಪರವಾನಗಿ ಪಡೆಯಲು ನಿಗದಿಪಡಿಸಿದ ವಯಸ್ಸನ್ನು ಮೀರದ ಮಕ್ಕಳಿಗೆ ವಾಹನವನ್ನು ಚಲಾಯಿಸಲು ನೀಡಿದ ಪಾಲಕರಿಗೆ ನ್ಯಾಯಾಲಯಗಳೇ ₹ 25 ಸಾವಿರದವರೆಗೆ ದಂಡ ವಿಧಿಸಿದ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಕಂಡುಬಂದರೂ ಬಹುತೇಕ ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಂತೆಯೇ ಹದಿಹರೆಯದವರು ಅಪಘಾತಗಳಲ್ಲಿ ಗಾಯಗೊಳ್ಳುವುದೂ, ಪ್ರಾಣ ಕಳೆದು ಕೊಳ್ಳುವುದೂ, ಇತರರ ಪ್ರಾಣಕ್ಕೋ ಅವಯವಕ್ಕೋ ಕುತ್ತು ತರುವುದು ಮುಂದುವರಿದೇ ಇದೆ.

ಮಗನನ್ನು ಬೈಕ್ನಲ್ಲಿ ಕರೆದೊಯ್ಯುವಾಗ ಸಂಚಾರ ನಿಯಮ ಪಾಲಿಸದಿರುವ ಬಗ್ಗೆ ಪಶ್ಚಾತ್ತಾಪ ಪಟ್ಟು, ದಂಡ ಕಟ್ಟುವ ಪಾಲಕನಾಗಿ ‘ಥ್ರೀ ಈಡಿಯೆಟ್ಸ್’ ಚಿತ್ರದ ನಾಯಕರ ಲ್ಲೊಬ್ಬರಾದ ಶರ್ಮನ್ ಜೋಶಿ ಈಚೆಗೆ ನಟಿಸಿರುವ ಜಾಹೀರಾತು ಸಾಕಷ್ಟು ಗಮನ ಸೆಳೆದಿದೆ. ಅದನ್ನು ನೋಡಿ ಮೆಚ್ಚಿದ ಪಾಲಕರು ಅವರಂತೆ ನಿಯಮ ಪಾಲಿಸುವ ಗೋಜಿಗೆ ಹೋಗಿರುವುದು ವಿರಳ. ಇಂಥ ಅನುಕರಣೀಯ ನಡೆಯ ಜಾಹೀರಾತುಗಳನ್ನು ಅನುಸರಿಸಬೇಕಿರುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.

ಈಗ ಪ್ರತಿ ಮಗು ಎಳವೆಯಲ್ಲೇ ವಾಹನದೊಂದಿಗೆ ಒಡನಾಟ ಇಟ್ಟುಕೊಳ್ಳುತ್ತಿದೆ. ಮನೆಯಿಂದ ಶಾಲೆಗೆ ಹೋಗಲು, ಮರಳಲು ವಾಹನಗಳನ್ನೇ ಅವಲಂಬಿಸಿದೆ. ನಿತ್ಯದ ಉದ್ಯೋಗಕ್ಕೆ ವಾಹನವನ್ನು ಅವಲಂಬಿಸಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಹನಗಳು ಈಗ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೂ, ವಾಹನ ಚಲಾಯಿಸಲು ಅಗತ್ಯವಾಗಿರುವ ಸಂಚಾರ ನಿಯಮಗಳ ಅರಿವು, ನಿಯಮ ಉಲ್ಲಂಘನೆಯ ಸಾಧಕ–ಬಾಧಕಗಳ ಪರಿಚಯ ಅನೇಕರಿಗಿಲ್ಲ.

ಜಪಾನ್, ಚೀನಾ ಹಾಗೂ ಯೂರೋಪ್ನ ಕೆಲವು ರಾಷ್ಟ್ರಗಳಲ್ಲಿ ಚಿಕ್ಕಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲೇ ಸಂಚಾರ ನಿಯಮಗಳ ಕುರಿತು ಪಠ್ಯದ ಮೂಲಕವೇ ಅರಿವು ಮೂಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲವು ದೇಶಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ಮೊತ್ತದ ದಂಡ ವಿಧಿಸುವುದಲ್ಲದೆ ವಾಹನ ಚಾಲನಾ ಪರವಾನಗಿಯನ್ನೇ ನಿಯಮಿತ ಅವಧಿಗೆ ಅಥವಾ ಶಾಶ್ವತವಾಗಿ ರದ್ದುಪಡಿಸಲಾಗುತ್ತದೆ. ಭಾರತದಲ್ಲೂ ಸಂಚಾರ ನಿಯಮ ಕುರಿತು ತಾತ್ಸಾರ ತೋರುವವರ ವಿರುದ್ಧ ಕಠಿಣ ಕಾನೂನುಗಳಿವೆಯಾದರೂ ಅವುಗಳ ಜಾರಿ ಸಮರ್ಪಕವಾಗಿ ಆಗುತ್ತಿಲ್ಲ. ಚಾಲನಾ ಪರವಾನಗಿ ನೀಡುವಾಗ ಅನುಸರಿಸುವ ಪರೀಕ್ಷೆಗಳನ್ನೂ, ಮಾನದಂಡಗಳನ್ನೂ ಬಿಗಿಗೊಳಿಸುವ ಮೂಲಕವೂ ಸಂಚಾರ ನಿಯಮದ ಮಹತ್ವವನ್ನು ತಿಳಿಸುವತ್ತ ಸರ್ಕಾರ ಚಿಂತನೆ ನಡೆಸಲು ಇದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.