ಮೈಸೂರಿನಲ್ಲಿ ರಾಜ್ಯ ಸರ್ಕಾರ ಏರ್ಪಡಿಸಿದ್ದ ಎರಡು ವರ್ಷಗಳ ‘ಸಾಧನಾ’ ಸಮಾವೇಶದಲ್ಲಿ ಭಾಗವಹಿಸಿ ಬೆಂಗಳೂರಿನತ್ತ ವಾಪಸಾಗುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ಪಡೆಯ ವಾಹನ ಪಲ್ಟಿಯಾಗಿ, ನಾಲ್ವರು ಸಿಬ್ಬಂದಿಗೆ ಗಾಯಗಳಾಗಿರುವ ಕುರಿತು ವರದಿಯಾಗಿದೆ.

ಮಳೆ ನೀರಿನಿಂದ ಆವೃತವಾಗಿದ್ದ ರಸ್ತೆಯಲ್ಲಿ ವೇಗದಿಂದ ಸಾಗುತ್ತಿದ್ದ ಬೆಂಗಾವಲು ಪಡೆ ವಾಹನ ಉರುಳಿ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿರುವ ಆ ವಾಹನ ಪಲ್ಟಿ ಹೊಡೆದು, ಚಕ್ರಗಳೆಲ್ಲ ಆಕಾಶಮುಖಿಯಾಗಿದ್ದವು. ಅದೃಷ್ಟವಶಾತ್, ವಾಹನದ ಒಳಗಿದ್ದವರಿಗಾಗಲೀ, ರಸ್ತೆಯ ಮೇಲೆ ಸಾಗುತ್ತಿದ್ದ ಇತರ ವಾಹನ ಸವಾರರಿಗಾಗಲೀ, ರಸ್ತೆಯ ಮೇಲೆ ಹೊರಟಿದ್ದ ಪಾದಚಾರಿಗಳಿಗಾಗಲೀ ಯಾವುದೇ ರೀತಿಯ ಗಾಯ ಆಗಿಲ್ಲ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಸೇರಿದಂತೆ ರಾಜಕೀಯ ಗಣ್ಯರು ಯಾವುದಾದರೂ ಊರಿಗೆ ಬಂದರೆ ಅಥವಾ ಅಲ್ಲಿಂದ ಹೊರಟರೆ, ಅವರ ವಾಹನಗಳು ಅತಿಯಾದ ವೇಗದಿಂದ ಸಾಗುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಅದರಲ್ಲೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಚಿವರು ಯಾವುದಾದರೂ ಊರಿಗೆ ಹೆಲಿಕಾಪ್ಟರ್ನಲ್ಲಿ ಬಂದರೂ ಅಲ್ಲಿಂದ ಸಭೆ, ಸಮಾರಂಭ ನಿಗದಿಯಾದ ಸ್ಥಳಕ್ಕೆ ತೆರಳುವಾಗ ಅವರು ಕುಳಿತ ವಾಹನ ಮತ್ತು ಅವರ ಹಿಂದೆ, ಮುಂದೆ ಹತ್ತಾರು ವಾಹನಗಳು ಸಾಗುತ್ತವೆ. ಆ ವಾಹನಗಳು ವಿಪರೀತ ವೇಗದೊಂದಿಗೆ ಸಾಗುತ್ತವೆ. ಬಹುಶಃ, ರಸ್ತೆಗುಂಟ ನಿಂತು ನೋಡುವವರ ಗಮನ ಸೆಳೆಯುವುದಕ್ಕೇ ಆ ವಾಹನಗಳು ಅಷ್ಟೊಂದು ವೇಗದಿಂದ
ಸಾಗುತ್ತಿರಬಹುದು! ವಿವಿಐಪಿಗಳ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಪೊಲೀಸರು ಜೀರೊ ಟ್ರಾಫಿಕ್ ಸೌಲಭ್ಯ ಕಲ್ಪಿಸುವುದರಿಂದ, ಆ ಮಾರ್ಗದಲ್ಲಿ ಸಾಗುವ ಜನಸಾಮಾನ್ಯರು ವೇಗದಿಂದ ಸಾಗುವ ಈ ವಾಹನಗಳನ್ನು ಮೂಕಪ್ರೇಕ್ಷಕರಂತೆ ನೋಡಬೇಕಾಗುತ್ತದೆ.

ಬೆಂಗಳೂರಿನಲ್ಲಿ ಜೀರೊ ಟ್ರಾಫಿಕ್ ಸೌಲಭ್ಯ ಕಲ್ಪಿಸುವುದಕ್ಕೆ ಕೆಲವೊಮ್ಮೆ ಅಪಸ್ವರಗಳು ಕೇಳಿಬರುತ್ತ
ವಾದರೂ, ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಧಿಕಾರಸ್ಥರಿಗೆ ಹಾಗೂ ಇತರೆ ಗಣ್ಯರಿಗೆ ಜೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದರಿಂದ, ಬಹುಶಃ ಆ ಸೌಲಭ್ಯ ಕಾನೂನುಬದ್ಧವಾಗಿ ಇರಬಹುದು
ಎಂದೇ ಜನಸಾಮಾನ್ಯರು ಭಾವಿಸಿದ್ದಾರೆ.

ಗಣ್ಯರ ವಾಹನಗಳು ಸಾಗುವ ಧಾವಂತ ನೋಡಿದರಂತೂ, ‘ಇವರು ಯಾವುದಾದರೂ ಬಸ್ಸು ಅಥವಾ ರೈಲಿನ ಮೂಲಕ ಮುಂದಿನ ಊರಿಗೆ ತೆರಳುವವರಿರಬಹುದು. ಬಹುಶಃ ಆ ರೈಲೋ, ಬಸ್ಸೋ ಮಿಸ್ ಆಗಬಹುದೇನೋ? ಅದನ್ನು ಹಿಡಿಯಲು ಇಷ್ಟೊಂದು ವೇಗದಿಂದ ಸಾಗುತ್ತಿದ್ದಾರೇನೋ?’ ಎನ್ನುವ ಭಾವನೆಗಳು ದಾರಿಹೋಕರ ಮನಸ್ಸಿನಲ್ಲಿ ಹಾದುಹೋದರೆ ಅಚ್ಚರಿಯೇನೂ ಇಲ್ಲ.

‘ಜನಪ್ರತಿನಿಧಿಗಳು, ಸರ್ಕಾರ ನಡೆಸುವವರು ಇಷ್ಟೊಂದು ವೇಗದಿಂದ ಸಾಗಿದರೆ ಮಾರ್ಗಮಧ್ಯದ ಊರುಗಳ ಜನರ ಸಂಕಷ್ಟಗಳು ಅವರಿಗೆ ಅರ್ಥವಾಗುವುದಾದರೂ ಹೇಗೆ?’ ಎಂದೂ ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರೇ ಮಾತನಾಡಿದ್ದಿದೆ.

ದಾರಿಯಲ್ಲಿ ನಡೆದು ಹೊರಟವರು, ಅಶಕ್ತರು ಸಮಸ್ಯೆಗೆ ಸಿಲುಕಿದಾಗ ಸಚಿವರು, ಶಾಸಕರು, ಹಿರಿ–ಕಿರಿಯ ಅಧಿಕಾರಿಗಳು ತಮ್ಮ ವಾಹನದಲ್ಲಿ ಕರೆದೊಯ್ದ ಘಟನೆಗಳು ಈ ಹಿಂದೆ ವರದಿಯಾಗುತ್ತಿದ್ದವು. ಈಚಿನ ದಿನಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಚಿವರು ಯಾವುದಾದರೂ ಊರಿಗೆ ಭೇಟಿಕೊಟ್ಟರೆ ಅವರ ಹಿಂದೆ ಮುಂದೆ ಕಾರ್ಯಕರ್ತರ, ಬೆಂಬಲಿಗರ ಹಾಗೂ ಭಟ್ಟಂಗಿಗಳ ವಾಹನಗಳ ಪಡೆಯೇ ಭರದಿಂದ ಸಾಗುತ್ತದೆ.

ಕೆಲವೊಮ್ಮೆ ಇಂಥ ವಾಹನಗಳು ಕಿಲೋಮೀಟರ್ಗಟ್ಟಲೆ ಸಾಗುವ ದೃಶ್ಯಗಳು ಕಾಣಸಿಗುತ್ತವೆ. ರಾಜಕೀಯ ಮುಖಂಡರು ಸಮಾವೇಶದಲ್ಲೋ, ಸಭೆಯಲ್ಲೋ, ಕಾರ್ಯಕ್ರಮದಲ್ಲೋ ಭಾಗವಹಿಸಲು ಹೊರಡುವಾಗ ಅವರ ವೇಗಕ್ಕೆ ಮಿತಿಯೇ ಇರುವುದಿಲ್ಲ. ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬಂದಾಗಲೂ ಅವರಿಗೆ ಬೆಂಗಾವಲು ಪಡೆ ಇರುತ್ತದೆ. ಆಗಲೂ ಅವರ ವೇಗಕ್ಕೆ ಕಡಿವಾಣವೇ ಇರುವುದಿಲ್ಲ. ಈ ವೇಗದ ಕಾರಣದಿಂದಲೇ, ಗಣ್ಯರ ಬೆಂಗಾವಲು ವಾಹನಗಳು ಡಿಕ್ಕಿ ಹೊಡೆದು ಕೆಲವರು ಗಂಭೀರವಾಗಿ ಗಾಯಗೊಂಡಿರುವ, ಮೃತಪಟ್ಟಿರುವ ಘಟನೆಗಳು ಈ ಹಿಂದೆ ಕೆಲವೆಡೆ ನಡೆದಿವೆ.

ಬೆಂಗಾವಲಿಗೆ ಇರುವ ವಾಹನಗಳೇ ಹೀಗೆ ಉರುಳಿ ಬಿದ್ದರೆ ಅಥವಾ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಸಾಮಾನ್ಯ ಸವಾರರ ಪ್ರಾಣ ತೆಗೆದರೆ, ಆ ಗಣ್ಯರಿಗೆ ಸೂಕ್ತವಾದ ಬೆಂಗಾವಲಾಗಲೀ, ಭದ್ರತೆಯಾಗಲೀ ಎಲ್ಲಿ ಸಿಗುತ್ತದೆ? ಅಪಘಾತ ಸಂಭವಿಸಿದರೆ, ಬೆಂಗಾವಲಿನ ಉದ್ದೇಶವೇ ಹಾಳಾಗುತ್ತದಲ್ಲವೇ? ಬೆಂಗಾವಲಿಗೆ ಇರುವ ವಾಹನಗಳು ಗಣ್ಯರ ಧಾವಂತಕ್ಕೆ ಕಟ್ಟುಬಿದ್ದು, ವಿಪರೀತ ವೇಗದಿಂದ ಸಾಗಿ ಅನಾಹುತಗಳು ಸಂಭವಿಸಲು ಕಾರಣರು ಯಾರು? ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.

ಮುಂದೆ ಹೋಗುವ ಬೆಂಗಾವಲು ವಾಹನವು ನಿಧಾನಕ್ಕೆ ಸಾಗಿದಾಗ ಅದರ ಚಾಲಕನನ್ನು ಗಣ್ಯರು ತರಾಟೆಗೆ ತೆಗೆದುಕೊಂಡ ನಿದರ್ಶನಗಳೂ ಇವೆ. ಯಾರದ್ದೋ ಧಾವಂತಕ್ಕೆ ಇನ್ಯಾರೋ ನೋವು ಅನುಭವಿಸುವಂತಾಗಿದೆ. ಗಣ್ಯರೇ ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕಷ್ಟೇ. ಇಲ್ಲದಿದ್ದರೆ ಬೆಂಗಾವಲು ಪಡೆಯ ಅವಘಡಕ್ಕೆ ಸ್ವತಃ ಆ ಗಣ್ಯ ವ್ಯಕ್ತಿಯೇ ಬೆಲೆ ತೆರುವಂಥ ಸಂದರ್ಭವೂ ಬರಬಹುದು.

ರಾಜಕಾರಣಿಗಳು ಅಥವಾ ಗಣ್ಯರು ವೇಗ ಅಪೇಕ್ಷಿಸಬೇಕಾದುದು ವಾಹನಗಳಿಗೆ ಸಂಬಂಧಿಸಿದಂತೆ ಅಲ್ಲ. ಜನಪರ ಕಾರ್ಯಕ್ರಮಗಳು ವೇಗ ಪಡೆದುಕೊಂಡರೆ, ಆ ವೇಗವನ್ನು ಎಲ್ಲರೂ ಮೆಚ್ಚಿಕೊಂಡಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.