ಶುಕ್ರವಾರ, ಸೆಪ್ಟೆಂಬರ್ 24, 2021
26 °C

25 ವರ್ಷಗಳ ಹಿಂದೆ: ಬುಧವಾರ 14.8.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಜ್ಞ ಸಮಿತಿ ಹಠಾತ್ ರದ್ದು

ನವದೆಹಲಿ, ಆ. 13– ಕೃಷ್ಣಾ ಯೋಜನೆಯಲ್ಲಿ ಬಚಾವತ್ ತೀರ್ಪಿನ ಉಲ್ಲಂಘನೆ ಮಾಡಲಾ ಗಿದೆ ಎಂದಿರುವ ಆಂಧ್ರಪ್ರದೇಶ ಮತ್ತು ಕರ್ನಾಟಕದ ಪರಸ್ಪರ ಆರೋಪಗಳ ಬಗೆಗೆ ಖುದ್ದು ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಕೈಗೊಂಡಿದ್ದ ತೀರ್ಮಾನವನ್ನು ಕೇಂದ್ರ ಸರ್ಕಾರ ಇಂದು ಕೈಬಿಟ್ಟಿತು.

ಆಂಧ್ರಪ್ರದೇಶದ ಹೈಕೋರ್ಟ್ ಮುಂದೆ ಈಗ ಆಲಮಟ್ಟಿ ಅಣೆಕಟ್ಟು ಎತ್ತರದ ಔಚಿತ್ಯವನ್ನು ಪ್ರಶ್ನಿಸಿರುವ ಅರ್ಜಿಯೊಂದು ವಿಚಾರಣೆಯಲ್ಲಿ ಇರುವುದರಿಂದ ಸಬ್ ಜುಡೀಸ್ ಆಗುವುದೆಂಬ ಕಾರಣವನ್ನು ಸರ್ಕಾರ ನೀಡಿದೆ.

ಆಲಮಟ್ಟಿ: ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ

ಬೆಂಗಳೂರು, ಆ. 13– ಆಲಮಟ್ಟಿ ಅಣೆಕಟ್ಟೆ ವಿಚಾರದಲ್ಲಿ ಸರ್ಕಾರ ತಪ್ಪುಹಾದಿ ತುಳಿಯುತ್ತಿದೆ ಎಂದು ಧರಣಿ ಹೂಡಿರುವ ಪ್ರತಿಪಕ್ಷಗಳ ಸದಸ್ಯರು, ಗದ್ದಲದ ನಡುವೆಯೇ ಇಂದು ವಿಧಾನಸಭೆಯಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸಚಿವ ಸಂಪುಟದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು