ರಾಜ್ಯ ಸರ್ಕಾರದ ವಿರುದ್ಧ ಸಂಚು: ಕೃಷ್ಣ

ಬೆಂಗಳೂರು, ಜುಲೈ 9– ‘ನಮ್ಮ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ದುರುದ್ದೇಶದಿಂದ ಸಂಚು ನಡೆಸಿ ಹುಬ್ಬಳ್ಳಿಯ ಸೇಂಟ್ ಜಾನ್ಸ್ ಲೂಥರಾನ್ ಚರ್ಚ್ ಮೇಲೆ ಶನಿವಾರ ಬಾಂಬ್ ಹಾಕಲಾಗಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಇಂದು ಇಲ್ಲಿ ಆಪಾದಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದು ಬಹಳ ಜನರಿಗೆ ಸಂತೋಷ ತಂದಿಲ್ಲ. ಆದ್ದರಿಂದ ಈ ಸಂಚು ನಡೆಸಲಾಗಿದೆ. ಆದರೆ, ಇದಕ್ಕೆ ನಾವು ಸಾಕ್ಷ್ಯಾಧಾರಗಳಿಲ್ಲದೆ ಸಂಘ ಪರಿವಾರ ಅಥವಾ ಬೇರೆ ಯಾರನ್ನೂ ದೂಷಿಸುವುದಿಲ್ಲ ಎಂದರು.

ಡಕಾಯಿತರಿಂದ ಮನೆಗಳ ದರೋಡೆ

ಹಾಸನ, ಜುಲೈ 9– ಡಕಾಯಿತರ ತಂಡವೊಂದು ಇಂದು ನಸುಕಿನಲ್ಲಿ ನಗರದ ಎರಡು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರನ್ನು ಚಾಕು ತೋರಿಸಿ ಬೆದರಿಸಿ, ಧರಿಸಿದ್ದ ಆಭರಣಗಳು, ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗೂ ನಗದು ಕಸಿದುಕೊಂಡು ಪರಾರಿಯಾಗಿದೆ. ಎರಡು ಮನೆಗಳಿಂದ ಒಟ್ಟು ಅರ್ಧ ಕೆ.ಜಿ. ಚಿನ್ನ, 11 ಸಾವಿರ ರೂಪಾಯಿ ನಗದನ್ನು ಡಕಾಯಿತರು ಕಸಿದುಕೊಂಡು ಪರಾರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.