ಶುಕ್ರವಾರ, ಮೇ 14, 2021
32 °C
25 ವರ್ಷಗಳ ಹಿಂದೆ ಶನಿವಾರ 20.4.1996

25 ವರ್ಷಗಳ ಹಿಂದೆ| ಶನಿವಾರ 20.4.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಡಿಗೆ ಹಂತಕನಿಂದ ಶಾಸಕ ಚಿತ್ತರಂಜನ್ ಹತ್ಯೆ

ಬೆಂಗಳೂರು, ಏ. 19– ಭಟ್ಕಳದ ಬಿಜೆಪಿ ಶಾಸಕ ಡಾ. ಚಿತ್ತರಂಜನ್ ಅವರ ನಿಗೂಢ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವ ಹಾದಿಯಲ್ಲಿ ರಾಜ್ಯದ ಸಿಒಡಿ ಪೊಲೀಸರು ಸ್ವಲ್ಪಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ.

ಚಿತ್ತರಂಜನ್ ಅವರ ದಿನಚರಿಯನ್ನು ಅಧ್ಯಯನ ಮಾಡಿದ ಬಾಡಿಗೆ ಹಂತಕನೊಬ್ಬ ದೇಶಿ ಕಾರ್ಖಾನೆಯೊಂದರಲ್ಲಿ ತಯಾರಾದ 12 ಬೋರ್ ಬಂದೂಕು ಬಳಸಿ ಅವರ ಕೊಲೆ ಮಾಡಿದ್ದಾನೆ.

ಭಟ್ಕಳದ ಗಲಭೆಗೂ ಚಿತ್ತರಂಜನ್ ಕೊಲೆಗೂ ಸಂಬಂಧವಿಲ್ಲ. ಹಾಗೆಯೇ ಮುಂಬೈ ಭೂಗತ ಜಗತ್ತು ಅಥವಾ ಪಾಕಿಸ್ತಾನದ ಐಎಸ್‌ಐ ಕೈವಾಡ ಇದರ ಹಿಂದಿಲ್ಲ ಎಂಬ ಅಂಶ ಸಿಒಡಿಯ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಚುನಾವಣೆ ಬಳಿಕ ಮತ್ತೆ ಕಾಂಗೈ ಹೋಳು: ವಿ.ಪಿ

ಬೆಂಗಳೂರು, ಏ. 19– ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಒಡೆದು ಅಲ್ಲಿಂದ ಒಂದಷ್ಟು ಮಂದಿ, ಅತಿದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ‘ತೃತೀಯ ರಂಗ’ವನ್ನು ಸೇರಲಿದ್ದಾರೆ ಎಂದು ದಳ ನಾಯಕ ವಿ.ಪಿ.ಸಿಂಗ್ ಅವರು ಇಂದು ಇಲ್ಲಿ ಭವಿಷ್ಯ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು