ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ವಿಶ್ವಾಸಮತಕ್ಕೆ ಸೋಲು: ವಾಜಪೇಯಿ ನೇತೃತ್ವದ ಸರ್ಕಾರ ಪತನ

25 ವರ್ಷಗಳ ಹಿಂದೆ
Published 17 ಏಪ್ರಿಲ್ 2024, 20:29 IST
Last Updated 17 ಏಪ್ರಿಲ್ 2024, 20:29 IST
ಅಕ್ಷರ ಗಾತ್ರ

ವಿಶ್ವಾಸಮತಕ್ಕೆ ಸೋಲು: ವಾಜಪೇಯಿ ನೇತೃತ್ವದ ಸರ್ಕಾರ ಪತನ

ನವದೆಹಲಿ, ಏ. 17– ಕೊನೇ ಗಳಿಗೆಯಲ್ಲಿ ಬದಲಾದ ಬಿಎಸ್‌ಪಿಯ ನಿಲುವು, ಆಳುವ ಮಿತ್ರಪಕ್ಷಗಳಲ್ಲಿನ ನ್ಯಾಷನಲ್‌ ಕಾನ್ಫರೆನ್ಸ್‌ ನಲ್ಲಿಯ ಒಡಕು ಮತ್ತು ಲೋಕಸಭೆ ಸದಸ್ಯತ್ವ ಉಳಿಸಿಕೊಂಡಿರುವ ಒರಿಸ್ಸಾದ ಮುಖ್ಯಮಂತ್ರಿಯು ಇಂದಿನ ನಿರ್ಣಾಯಕವಾದ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದ್ದ
ರಿಂದ, ಹದಿಮೂರು ತಿಂಗಳ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಕೇವಲ ಒಂದು ಮತದ ಅಂತರದಲ್ಲಿ ಪತನಹೊಂದಿತು.

ಎಐಎಡಿಎಂಕೆಯು ತನ್ನ 18 ಸದಸ್ಯರ ಬೆಂಬಲ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆದೇಶದ ಮೇರೆಗೆ ಪ್ರಧಾನಿ ವಾಜಪೇಯಿ ಅವರು ಕೋರಿದ್ದ ವಿಶ್ವಾಸಮತವನ್ನು ಲೋಕಸಭೆಯು ಇಂದು ತಿರಸ್ಕರಿಸಿತು. ಮತದಾನದಲ್ಲಿ ಭಾಗವಹಿಸಿದ್ದ ಒಟ್ಟು 539 ಸದಸ್ಯರು ಚಲಾಯಿಸಿದ ಮತಗಳಲ್ಲಿ ವಿಶ್ವಾಸಮತದ ಪರವಾಗಿ 269 ಮತ್ತು ವಿರುದ್ಧವಾಗಿ 270 ಮತಗಳು ಬಂದಿದ್ದರಿಂದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆಡಳಿತ ಇಂದು ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT