ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಆಖೈರುಗೊಳ್ಳುತ್ತಿರುವ ರಾಷ್ಟ್ರೀಯ ಕೃಷಿ ನೀತಿ ಕರಡು

Published 28 ಡಿಸೆಂಬರ್ 2023, 0:15 IST
Last Updated 28 ಡಿಸೆಂಬರ್ 2023, 0:15 IST
ಅಕ್ಷರ ಗಾತ್ರ

ಆಖೈರುಗೊಳ್ಳುತ್ತಿರುವ ರಾಷ್ಟ್ರೀಯ ಕೃಷಿ ನೀತಿ ಕರಡು

ನವದೆಹಲಿ, ಡಿ. 27– ರಾಷ್ಟ್ರೀಯ ಕೃಷಿ ನೀತಿಯ ಕರಡನ್ನು ಕೇಂದ್ರ ಸರ್ಕಾರ
ಆಖೈರುಗೊಳಿಸುತ್ತಿದೆ.

ನೈಸರ್ಗಿಕ ಮೂಲಗಳು ಮತ್ತು ಜಲಸಂಪನ್ಮೂಲದ ಸಮರ್ಥ ಬಳಕೆ ಮೂಲಕ ಆಹಾರ ಸ್ವಾವಲಂಬನೆ, ಕೃಷಿಗೆ ಉದ್ಯಮಸ್ಥಾನ ನೀಡಿಕೆ ಮತ್ತು ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಲಭ್ಯವಾಗಿಸುವ ಹಲವಾರು ಅಂಶಗಳನ್ನು ಇದು ಒಳಗೊಂಡಿದೆ.

ಈಗ ಸಿದ್ಧವಾಗುತ್ತಿರುವ ನೀತಿಯ ಪ್ರಕಾರ, ಭೂಮಿ ಮತ್ತು ಜಲಸಂಪನ್ಮೂಲ ವನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಮೂಲಕ ನೈಸರ್ಗಿಕ ಮೂಲಗಳು ಮತ್ತು
ಜೀವವೈವಿಧ್ಯ ಸಂರಕ್ಷಣೆ, ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿ
ಇಟ್ಟುಕೊಂಡು ಆಹಾರ ಸ್ವಾವಲಂಬನೆಗೆ ಆದ್ಯತೆ ನೀಡಲಾಗುತ್ತಿದೆ.

ದಳ ಬಿಕ್ಕಟ್ಟು: ಶರದ್ ಮಾತುಕತೆ, ಇಂದು ಪ್ರಾರಂಭ

ನವದೆಹಲಿ, ಡಿ. 27 – ಮುಖ್ಯಮಂತ್ರಿ ಜೆ.ಎಚ್.ಪಟೇಲ್ ನಾಯಕತ್ವ ಬದಲಾವಣೆಯ ವಿವಾದ ಸೇರಿದಂತೆ ಕಳೆದ ಮೂರು ತಿಂಗಳಿಂದ ನನೆಗುದಿಗೆ ಬಿದ್ದಿರುವ ಕರ್ನಾಟಕ ಜನತಾದಳದ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜತೆ ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT