ಕ್ವಟ್ರೋಚಿ ಬಂಧನ ವಾರಂಟ್‌ಗೆ ದೆಹಲಿ ಹೈಕೋರ್ಟ್ ಅಸ್ತು
ನವದೆಹಲಿ, ಆ. 5 (ಯುಎನ್‌ಐ)– ಇಟಲಿಯ ಉದ್ಯಮಿ ಒಟಾವಿಯೋ ಕ್ವಟ್ರೋಚಿ ಅವರ ಮೇಲಿನ ಆರೋಪವನ್ನು ಮೇಲ್ನೋಟದಲ್ಲೇ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂಬ ಸಿಬಿಐ ವಾದವನ್ನು ದೆಹಲಿ ಹೈಕೋರ್ಟ್ ಪುರಸ್ಕರಿಸುವುದರೊಂದಿಗೆ ಅವರ ಬಂಧನಕ್ಕಿದ್ದ ಎಲ್ಲ ಎಲ್ಲ ಡೆ– ತಡೆಗಳು ನಿವಾರಣೆ ಆದಂತಾಗಿದೆ.
ಬೋಫೋರ್ಸ್ ಫಿರಂಗಿ ವ್ಯವಹಾರದಲ್ಲಿ ಕ್ವಟ್ರೋಚಿ 7.34 ದಶಲಕ್ಷ ಡಾಲರ್ ಕಮಿಷನ್ ಪಡೆದಿದ್ದಾರೆ ಎಂಬುದು ಆರೋಪ.
ಫಿರಂಗಿ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಬಂಧನದ ವಾರಂಟ್ ಅನ್ನು ರದ್ದುಪಡಿಸುವಂತೆ ಕೋರಿ ಕ್ವಟ್ರೋಚಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾ ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.