‘ಇನ್ಸ್ಪೆಕ್ಟರ್ ರಾಜ್’ಗೆ ಅವಕಾಶ ಇಲ್ಲ

ನವದೆಹಲಿ, ಮೇ 15 (ಯುಎನ್ಐ)– ಉದ್ಯಮದ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಇಂದು ಮಾಹಿತಿ ತಂತ್ರಜ್ಞಾನ ಮಸೂದೆಯಿಂದ ಎರಡು ವಿವಾದಾತ್ಮಕ ಅಂಶಗಳನ್ನು ಕೈಬಿಟ್ಟಿತು.

ಪ್ರತಿಯೊಂದು ಇಂಟರ್ನೆಟ್ ಪೋರ್ಟಲ್ನ ನೋಂದಣಿ ಮತ್ತು ಸೈಬರ್ ಕೆಫೆಗಳ ಮೇಲೆ ಪೊಲೀಸ್ ದಾಳಿಗೆ ಅವಕಾಶ ಮಾಡಿಕೊಡುವ ಮೂಲಕ ‘ಇನ್ಸ್ಪೆಕ್ಟರ್ ರಾಜ್’ ವ್ಯವಸ್ಥೆಯನ್ನು ಜಾರಿಗೆ ತರುವ ಎರಡು ಅಂಶಗಳನ್ನು ಕಿತ್ತುಹಾಕಬೇಕು ಎಂದು ಮಾಹಿತಿ ತಂತ್ರಜ್ಞಾನ ಉದ್ಯಮ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿತ್ತು. ಈ ಅಂಶಗಳನ್ನು ಮಸೂದೆಯಲ್ಲಿ ಸೇರಿಸಿದ್ದರೆ ಯಾವುದೇ ವ್ಯಕ್ತಿ ಆರಂಭಿಸುವ ಎಲ್ಲ ಪೋರ್ಟಲ್ ಅಥವಾ ವೆಬ್ಸೈಟ್ಗಳನ್ನು ಕಂಟ್ರೋಲರ್ ಮುಂದೆ ನೋಂದಣಿ ಮಾಡಬೇಕಿತ್ತು.

ಅರಿಸಿನ ಪೇಟೆಂಟ್ ಅಮೆರಿಕದಿಂದ ರದ್ದು

ನವದೆಹಲಿ, ಮೇ 15 (ಪಿಟಿಐ)– ಗಾಯವನ್ನು ಗುಣಪಡಿಸಲು ಅರಿಸಿನದ ಬಳಕೆಯ ಕುರಿತು ನೀಡಲಾಗಿದ್ದ ಪೇಟೆಂಟ್ಗೆ ಭಾರತ ಪ್ರತಿಭಟನೆ ಸೂಚಿಸಿರುವ ಹಿನ್ನೆಲೆಯಲ್ಲಿ ಅದನ್ನು ಅಮೆರಿಕ ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.