ಶನಿವಾರ, ಆಗಸ್ಟ್ 13, 2022
23 °C

25 ವರ್ಷಗಳ ಹಿಂದೆ: ಶುಕ್ರವಾರ, 8–12–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇನ್ಸಾಟ್‌–2ಸಿ’ ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು, ಡಿ. 7– ಫ್ರೆಂಚ್‌ ಗಯಾನಾದಿಂದ ಇಂದು ಬೆಳಗಿನ ಜಾವ ಏರಿಯನ್‌– 4 ರಾಕೆಟ್‌ನ ಹೆಗಲೇರಿ ಮುಗಿಲಿಗೆ ಚಿಮ್ಮಿದ ‘ಇನ್ಸಾಟ್‌–2ಸಿ’ ಸಂಪರ್ಕ ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದ್ದು, ಹಾಸನದ ನಿಯಂತ್ರಣ ಕೇಂದ್ರಕ್ಕೆ ಬಂದ ವರದಿಗಳ ಪ್ರಕಾರ ‘ಕ್ಷೇಮವಾಗಿದೆ’.

24 ಟ್ರಾನ್ಸ್‌ಪಾಂಡರ್‌ಗಳಿರುವ ‘ಇನ್ಸಾಟ್‌–2ಸಿ’ಯಿಂದ ದೂರದರ್ಶನ ಮತ್ತು ದೂರ ಸಂಪರ್ಕ ಇಲಾಖೆ ಗರಿಷ್ಠ ಲಾಭ ಪಡೆಯಲಿವೆ. ಈವರೆಗೆ
ಟ್ರಾನ್ಸ್‌ಪಾಂಡರ್‌ಗಳನ್ನು ಹಂಚಿಲ್ಲವಾದರೂ ಈ ಎರಡು ಇಲಾಖೆಗಳಿಗೇ ಇವುಗಳ ಸೇವೆ ದೊರೆಯುವುದು ಖಚಿತ. ‘ಇನ್ಸಾಟ್‌’ ಉಪಗ್ರಹ ಕುಟುಂಬದ ಒಟ್ಟು ಟ್ರಾನ್ಸ್‌ಪಾಂಡರ್‌ಗಳ ಸಂಖ್ಯೆ ಇದರೊಂದಿಗೆ 58ಕ್ಕೆ ಏರಲಿದೆ.

ಪ್ರಧಾನಿ ಕಚೇರಿಯಲ್ಲೇ ಕಡತ ನಾಪತ್ತೆ

ನವದೆಹಲಿ, ಡಿ. 7 (ಪಿಟಿಐ)– ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜೈನ್‌ ಆಯೋಗ ಕೋರಿರುವ ಪ್ರಮುಖ ಕಡತವೊಂದು ಪ್ರಧಾನಿ ಕಚೇರಿಯಿಂದಲೇ ಕಾಣೆಯಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಒಪ್ಪಿಕೊಂಡಿತು.

ಗೃಹ ಖಾತೆಯ ನಿರ್ದೇಶನದ ಮೇರೆಗೆ 1991ರ ಜುಲೈನಲ್ಲಿ ಪ್ರಧಾನಿಯವರ ಆಗಿನ ಆಪ್ತ ಕಾರ್ಯದರ್ಶಿಯವರಿಗೆ ಈ ಕಡತವನ್ನು ಕಳುಹಿಸಲಾಗಿತ್ತು. ಈ ಕಡತ ಬೇಕು ಎಂದು ಜೈನ್‌ ಆಯೋಗ ಕೇಳಿದೆ. ಆದರೆ ಗೃಹ ಖಾತೆ ಈ ಕಡತವನ್ನು ಇನ್ನೂ ಆಯೋಗಕ್ಕೆ ಹಿಂತಿರುಗಿಸಿಲ್ಲ ಎಂದು ರಾಜೀವ್‌ ಹತ್ಯೆ ತನಿಖೆಯನ್ನು ಸಮನ್ವಯಗೊಳಿಸುತ್ತಿರುವ ವಾಣಿಜ್ಯ ಸಚಿವ ಪಿ.ಚಿದಂಬರಂ ಲೋಕಸಭೆಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು