ಆಯೋಗದ ಹಸ್ತಕ್ಷೇಪಕ್ಕೆ ಕೋರ್ಟ್ ಆಕ್ಷೇಪ
ಹೈದರಾಬಾದ್, ಏ. 30 (ಪಿಟಿಐ)– ಚುನಾವಣಾ ಪ್ರಕ್ರಿಯೆಯ ಮೇಲೆ ನಿಯಂತ್ರಣ ಸ್ಥಾಪಿಸುವ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಿನನಿತ್ಯದ ಕಾರ್ಯಾಚರಣೆಯಲ್ಲಿ ಚುನಾವಣಾ ಆಯೋಗ ಮಧ್ಯ ಪ್ರವೇಶಿಸುವುದು ಸಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಇಂದು ತಿಳಿಸಿದೆ.

ಆಯೋಗದ ಅಧಿಕಾರವು ಚುನಾವಣೆಗೆ ಮುಂಚೆ ಆಡಳಿತ ಹಾಗೂ ವಿರೋಧ ಪಕ್ಷಗಳು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವುದನ್ನು ತಡೆಗಟ್ಟಲು ಸೀಮಿತವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಹತ್ತಿ ರಫ್ತು ನೀತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅನಗತ್ಯ ಮಧ್ಯಪ್ರವೇಶ ತಡೆಯಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಪರಿಶೀಲನೆ ಸಂದರ್ಭದಲ್ಲಿ ಪೀಠ ಈ ತೀರ್ಪು ನೀಡಿದೆ.

ಶಾಂತಿ ಭಂಗಕ್ಕೆ ಕಾಶ್ಮೀರ, ಸಿಖ್ ಉಗ್ರರ ಸಂಚು
ಜಮ್ಮು, ಏ. 30 (ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರದ ಚುನಾವಣೆಗೆ ಅಡ್ಡಿ ಉಂಟುಮಾಡಲು ಪಾಕಿಸ್ತಾನದ ಉಗ್ರಗಾಮಿಗಳು ಯತ್ನಿಸುತ್ತಿದ್ದಾರೆಂಬ ವದಂತಿಯ ಬೆನ್ನಲ್ಲೇ ದೇಶದಲ್ಲಿ ಅಸ್ಥಿರ ಸ್ಥಿತಿಯನ್ನು ಉಂಟು ಮಾಡಲು ಸಿಖ್ ಭಯೋತ್ಪಾದಕರು ಹಾಗೂ ಕಾಶ್ಮೀರದ ಉಗ್ರಗಾಮಿಗಳು ಒಗ್ಗೂಡಿರುವ ಸಂಗತಿಯನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.