ಸಿಪಿಪಿಅಧ್ಯಕ್ಷತೆ: ಪವಾರ್, ಪೈಲಟ್ ಸ್ಪರ್ಧೆ ತಪ್ಪಿಸಲು ಕೇಸರಿ ರಾಜಿಸೂತ್ರ
ನವದೆಹಲಿ, ಡಿ–25: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಧ್ಯಕ್ಷ ಸೀತಾರಾಂ ಅವರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿಸಿ, ಶರದ್ ಪವಾರ್ ಹಾಗೂ ಮನಮೋಹನ ಸಿಂಗ್ ಅವರನ್ನು ಸಂಸತ್ತಿನ ಉಭಯ ಸದನಗಳಲ್ಲಿ ನಾಯಕರನ್ನಾಗಿ ಮಾಡುವ ರಾಜಿಸೂತ್ರವೊಂದು ಕಾಂಗ್ರೆಸ್ ವಲಯದಲ್ಲಿ ಸಿದ್ಧವಾಗಿದ್ದು, ನಾಯಕತ್ವಕ್ಕೆ ನಡೆಯುವ ಸ್ಪರ್ಧೆಯನ್ನು ತಪ್ಪಿಸಲು ತೀವ್ರ ಯತ್ನ ಸಾಗಿದೆ.

‘ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕತ್ವಕ್ಕೆ ಚುನಾವಣೆ ನಡೆಯಬೇಕು ಎಂದು ಪಟ್ಟು ಹಿಡಿದಿರುವ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡಲು ಕೇಸರಿ ಅವರ ಬೆಂಬಲಿಗರಿಂದ ಯಾವುದೇ ವಿರೋಧ ಇಲ್ಲ. ರಾಜಿ ಸೂತ್ರಕ್ಕೆ ಎಲ್ಲರ ಒಪ್ಪಿಗೆಯಿದೆ’ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗಡಿ ಕನ್ನಡಿಗರ ಸಮಸ್ಯೆಗೆ ಸಮಿತಿ: ಪಟೇಲ್
ಬೆಂಗಳೂರು, ಡಿ.25: ಗಡಿ ಪ್ರದೇಶದ ಕನ್ನಡಿಗರ ಸಮಸ್ಯೆಗಳನ್ನು ಅರಿಯಲು ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರು ಭರವಸೆ ನೀಡಿದ್ದಾರೆ ಎಂದು ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಚಿದಾನಂದಮೂರ್ತಿ ಅವರು ಇಂದು ಇಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.