ಗುರುವಾರ , ಸೆಪ್ಟೆಂಬರ್ 29, 2022
26 °C

25 ವರ್ಷಗಳ ಹಿಂದೆ: ಬುಧವಾರ, 3-9-1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣಾ, ವಿ.ಸಿ. ನಾಲಾ ಗುತ್ತಿಗೆ ನ್ಯಾಯಾಂಗ ತನಿಖೆಗೆ ಆಗ್ರಹ
ಬೆಂಗಳೂರು, ಸೆ. 2–
ಕೃಷ್ಣಾ ಮೇಲ್ಡಂಡೆ ಯೋಜನೆ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೀಡಿರುವ ತುಂಡು ಗುತ್ತಿಗೆ ವ್ಯವಹಾರ: ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಯೋಜನೆಯ ಅಸಮರ್ಪಕ ಕಾಮ ಗಾರಿ ಬಗೆಗೆ ನ್ಯಾಯಾಂಗ ವಿಚಾರಣೆ ನಡೆಸು ವಂತೆ ವಿರೋಧ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಭಾರಿ ನೀರಾವರಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆ ಆರಂಭಿಸಿದ ಅವರು, ನೀರಾವರಿ ಕಾಮಗಾರಿಗಳಲ್ಲಿ ಅನೇಕ ಕಡೆ ನಡೆದಿರುವ ಅವ್ಯವಹಾರಗಳನ್ನೂ ನ್ಯಾಯಾಂಗ ವಿಚಾರಣೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವೈಫಲ್ಯತೆಯೇ ಈ ಸರ್ಕಾರದ ಸಾಧನೆಯಾಗಿದೆ ಎಂದು ಟೀಕೆಗಳ ಸುರಿಮಳೆಗರೆದರು.

ಖ್ಯಾತ ಅನುವಾದಕ ಅಹೋಬಲ ಶಂಕರ ಇನ್ನಿಲ್ಲ
ಬೆಂಗಳೂರು, ಸೆ. 2–
ಶರತ್ ಚಂದ್ರ, ರವೀಂದ್ರನಾಥ ಠಾಗೋರ್‌ ಮುಂತಾದ ಖ್ಯಾತ ಬಂಗಾಳಿ ಲೇಖಕರ ಮಹತ್ವದ ಕಾದಂಬರಿಗಳನ್ನು ಹಲವು ದಶಕಗಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಅಹೋಬಲ ಶಂಕರ (85) ಅವರು ಇಂದು ಬೆಳಗಿನ ಜಾವ ಮುಂಬೈನಲ್ಲಿ ನಿಧನರಾದರು.

ಬೆಂಗಳೂರಿನವರಾದ ಅವರು ಇಲ್ಲಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌.ಸಿ. ಪದವಿ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು