ಗುರುವಾರ , ಮಾರ್ಚ್ 23, 2023
29 °C

50 ವರ್ಷಗಳ ಹಿಂದೆ | ಭಾನುವಾರ, 21–1–1973

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವನೂರ್‌ ಆಯೋಗದ ಕಾರ್ಯ ಸಾಕು: ದೇವೇಗೌಡರ ಸಲಹೆ
ಬೆಂಗಳೂರು, ಜ. 20–
‘ರಾಜ್ಯದಲ್ಲಿ ಕೋಮು ಸೌಹಾರ್ದ ಪಾಲನೆಯ ದೃಷ್ಟಿಯಿಂದ ಹಿಂದು ಳಿದ ವರ್ಗಗಳ ಆಯೋಗದ ಕಾರ್ಯ ಕೊನೆ ಗೊಂಡರೆ ಒಳಿತು’ ಎಂದು ವಿರೋಧ ಪಕ್ಷದ ನಾಯಕ ಶ್ರೀ ಎಚ್‌.ಡಿ.ದೇವೇಗೌಡ ಅವರು ‘ಅತ್ಯಂತ ಸಂಕಟದಿಂದ’ ಸಲಹೆ ನೀಡಿದ್ದಾರೆ.

ಅವರು ಹೇಳಿಕೆಯೊಂದನ್ನು ನೀಡಿ, ‘ತಾವೇನು ವರದಿಯನ್ನು ಕೊಡಲಿದ್ದಾರೆ ಎಂಬುದನ್ನು ಅವರು ಈಗಾಗಲೇ ಮೇಲಿಂದ ಮೇಲೆ ಹೇಳಿರುವುದರಿಂದ ಆ ವರದಿಗಾಗಿ ಕಾದು ಕೂರುವ ಅಗತ್ಯವಿಲ್ಲ. ವರದಿ ಹೊರಬಂದರೂ ಅದು ಪೂರ್ವ ನಿರ್ಧರಿತ ಆಗಿರುವುದರಿಂದ ಅದು ಉತ್ತಮ ದಾಖಲೆಯೂ ಆಗಲು ಸಾಧ್ಯವಿಲ್ಲ. ಆದ್ದರಿಂದ ನಾನೂ ಪೂರ್ವಭಾವಿಯಾಗಿಯೇ ಅದನ್ನು ತಿರಸ್ಕರಿಸುತ್ತೇನೆ’ ಎಂದು ಹೇಳಿದ್ದಾರೆ.

ಸ್ವಾವಲಂಬನೆ, ದಾರಿದ್ರ್ಯ ನಿವಾರಣೆಗೆ 51 ಸಾವಿರ ಕೋಟಿ ರೂ. ವೆಚ್ಚ
ನವದೆಹಲಿ, ಜ. 20–
ಐದನೆಯ ಪಂಚ ವಾರ್ಷಿಕ ಯೋಜನೆಯ ಗಾತ್ರವನ್ನು 51,166 ಕೋಟಿ ರೂ. ಗಳಷ್ಟಕ್ಕೆ ನಿಗದಿಗೊಳಿಸಿದ್ದು, ಸಮಗ್ರವಾಗಿ ಪ್ರತಿವರ್ಷ ಶೇ 5.5ರಷ್ಟು ಪ್ರಗತಿ ಸಾಧಿಸಲು ಯೋಜನೆಯಲ್ಲಿ ಉದ್ದೇಶಿಸಲಾಗಿದೆ ಎಂದು 1974–79ರ 5ನೇ ಯೋಜನೆಯ ಧೋರಣೆ ಪತ್ರದಲ್ಲಿ ಯೋಜನಾ ಆಯೋಗ ತಿಳಿಸಿದೆ. ಬಡತನ ನಿವಾರಣೆ, ಆರ್ಥಿಕ ಸ್ವಾವ ಲಂಬನೆ ಸಾಧನೆಯೇ ಈ ಯೋಜನೆಯ ಮೂಲ ಗುರಿ ಎಂದು ಪತ್ರ ಸೂಚಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು